Bigg Bossನಿಂದ ಗಿಲ್ಲಿ ನಟ ಆಚೆ ಬಂದಾಯ್ತು ಎನ್ನುತ್ತಾ ಭರ್ಜರಿ ಪಾರ್ಟಿ ಅರೇಂಜ್​ ಮಾಡಿದ ಡಾಗ್​ ಸತೀಶ್​!

Published : Jan 04, 2026, 11:50 AM IST

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ವಿಚಿತ್ರ ಹೇಳಿಕೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಪ್ರತಿಸ್ಪರ್ಧಿ ಗಿಲ್ಲಿ ನಟ ಬಿಗ್ ಬಾಸ್‌ನಿಂದ ಹೊರಬಂದಿದ್ದಕ್ಕೆ ಗ್ರ್ಯಾಂಡ್ ಪಾರ್ಟಿ ಆಯೋಜಿಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ.

PREV
15
ಸೋಷಿಯಲ್​ ಮೀಡಿಯಾ ಹೀರೋ

ಬಿಗ್​ಬಾಸ್​ ಮೂಲಕ ಫೇಮಸ್​ ಆಗಿರೋ ಡಾಗ್​ ಸತೀಶ್​ (Bigg Boss Dog Satish) ಈಗ ಸೋಷಿಯಲ್​ ಮೀಡಿಯಾದ ಹೀರೋ ಆಗಿದ್ದಾರೆ. ಇದಕ್ಕೆ ಕಾರಣ ಇವರು ದಿನೇ ದಿನೇ ನೀಡುತ್ತಿರುವ ಚಿತ್ರ-ವಿಚಿತ್ರ ಹೇಳಿಕೆಗಳು. ಅದರಿಂದ ಆಗುತ್ತಿರುವ ಟ್ರೋಲ್​ಗಳನ್ನೇ ಕೆಲವು ಕಂಟೆಂಟ್​ ಕ್ರಿಯೇಟರ್​ಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ.

25
ಮಾತೆತ್ತಿದರೆ ಸಾಕು...

ಮಾತೆತ್ತಿದರೆ ನಾನು ಸುರಸುಂದರಾಂಗ ಎಂದೂ, ನನ್ನ ಬಳಿ ಇರುವುದೆಲ್ಲವೂ ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್​ ಎಂದೂ, ಗಣ್ಯಾತಿಗಣ್ಯರೆಲ್ಲರೂ ನನಗೆ ಸಂಪರ್ಕದಲ್ಲಿ ಇದ್ದಾರೆ ಎಂದರೂ, ನನ್ನ ಬಳಿ ನೂರಾರು ಕೋಟಿ ಬೆಲೆ ಬಾಳುವ ನಾಯಿಗಳು ಇವೆಯೆಂದೂ, ಸಿಎಂ ಮಲಗುವ ಜಾಗದಲ್ಲಿ ನನ್ನನ್ನು ಮಲಗಿಸಿದ್ದರು ಎಂದೂ... ಹೀಗೆ ಏನೇನೋ ಹೇಳಿಕೆ ನೀಡುತ್ತಲೇ ಕೆಲವು ಯುಟ್ಯೂಬರ್​ಗಳ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.

35
ಗಿಲ್ಲಿ ಫ್ಯಾನ್ಸ್​ ತಿರುಗೇಟು

ಇಂತಿಪ್ಪ ಡಾಗ್​ ಸತೀಶ್​, ಬಿಗ್​ಬಾಸ್​ ಗಿಲ್ಲಿ ನಟ (Bigg Boss Gilli Nata) ವಿರುದ್ಧ ಆಡದ ಮಾತುಗಳು ಇಲ್ಲ. ಇದೇ ಕಾರಣಕ್ಕೆ ಈಚೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸಂದರ್ಭದಲ್ಲಿ, ಇವರ ಕಾರಿನ ತುಂಬ ಗಿಲ್ಲಿ ನಟ ಎಂದು ಹೆಸರು ಬರೆದು, ಜೈ ಗಿಲ್ಲಿ ಎಂದು ಘೋಷಣೆ ಕೂಗಿ ಮುಜುಗರ ಮಾಡಿದ್ದೂ ಇದೆ.

45
ಪಾರ್ಟಿ ಅರೇಂಜ್​

ಗಿಲ್ಲಿ ನಟನ ಅಭಿಮಾನಿಗಳನ್ನು ಕೆಟ್ಟ ಶಬ್ದಗಳಿಂದ ಇದಾಗಲೇ ಬೈದಿರುವ ಡಾಗ್​ ಸತೀಶ್​, ಇದೀಗ ಪಾರ್ಟಿಯೊಂದನ್ನು ಅರೇಂಜ್​ ಮಾಡಿದ್ದಾರೆ! ಈ ಪಾರ್ಟಿ ಗಿಲ್ಲಿ ನಟ ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವುದಕ್ಕಂತೆ! ಹಾಗೆಂದು ಎಲ್ಲರಿಗೂ ಹೇಳುತ್ತಿರುವ ಡಾಗ್​ ಸತೀಶ್​, ನಾನು ಮೊದಲೇ ಹೇಳಿದ್ದೆ. ಅವನು ಹೊರಕ್ಕೆ ಬರುತ್ತಾನೆ ಎಂದು. ನಾನು ಹೇಳಿದ್ದು ನಿಜ ಆಗಿದೆ. ಆದ್ದರಿಂದ ಗ್ರ್ಯಾಂಡ್​ ಪಾರ್ಟಿ ಕೊಡುತ್ತಿದ್ದೇನೆ, ಎಲ್ಲರೂ  ಬರಬೇಕು ಎಂದು ಹೇಳಿದ್ದಾರೆ.

55
ಕುಣಿದಾಡಿದ ಡಾಗ್​ ಸತೀಶ್​

ಗಿಲ್ಲಿ ಔಟು, ಆಚೆ ಬಂದಾಯ್ತು ಎಂದು ಕುಣಿದು ಕುಪ್ಪಳಿಸುತ್ತಿರುವ ಡಾಗ್ ಸತೀಶ್​ ಅವರಿಗೆ ಏನಾಗಿದೆ ಎಂದು ಕಮೆಂಟಿಗರು ಪ್ರಶ್ನಿಸುತ್ತಿದ್ದಾರೆ. ಹೊಸ ವರ್ಷದ ಆಚರಣೆ ವೇಳೆ ಏನಾದ್ರೂ ಎಡವಟ್ಟು ಆಗಿದ್ಯಾ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ!  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories