ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆಂದು ಭಾವಿಸಲಾದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಅಲ್ಲಿಂದಲೇ ಮನೆಯ ಸದಸ್ಯರ ಮಾತುಗಳನ್ನು ಕೇಳುತ್ತಿದ್ದು, ತಮ್ಮ ಬಗ್ಗೆ ಇತರರ ಅಭಿಪ್ರಾಯಗಳನ್ನು ತಿಳಿದುಕೊಂಡು ರಕ್ಷಿತಾ ಭಾವುಕರಾಗಿದ್ದಾರೆ.
ಬಿಗ್‌ಬಾಸ್ ಮನೆಯ ಸದಸ್ಯರಾದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಈ ರೂಮ್‌ನಲ್ಲಿ ಕುಳಿತುಕೊಂಡು ಮನೆ ಮಂದಿಯೆಲ್ಲಾ ಏನೆಲ್ಲಾ ಮಾತನಾಡ್ತಾರೆ ಎಂಬುದನ್ನು ಇಬ್ಬರು ರಹಸ್ಯವಾಗಿ ಕೇಳಿಸಿಕೊಳ್ಳಲಿದ್ದಾರೆ.
25
ಸೀಕ್ರೆಟ್ ರೂಮ್
ಸೀಕ್ರೆಟ್ ರೂಮ್ ಸೇರಿದ್ದಕ್ಕೆ ಧ್ರುವಂತ್ ಸಂತೋಷಗೊಂಡಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನು ರಕ್ಷಿತಾ ಅವರಿಗೆ ಧ್ರುವಂತ್ ವಿವರಿಸಿದ್ದಾರೆ. ಧ್ರುವಂತ್ ಮತ್ತು ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಂಡಿರುವ ಸದಸ್ಯರು ಇಬ್ಬರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ
35
ಧ್ರುವಂತ್ ಜೊತೆ ಹೇಗಿರಬೇಕು?
ರಜತ್, ಚೈತ್ರಾ ಸೇರಿದಂತೆ ಮನೆಯ ಬಹುತೇಕ ಸದಸ್ಯರು ರಕ್ಷಿತಾ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ರಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ನಡುವೆ ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಜೊತೆ ಹೇಗಿರಬೇಕು ಎಂಬ ಚಿಂತೆಯಲ್ಲಿ ರಕ್ಷಿತಾ ಮುಳುಗಿದ್ದಾರೆ.
ಮತ್ತೊಂದೆಡೆ ಮಾಳು ನಿಪನಾಳ ಭಾವುಕರಾಗಿ ಗಳಗಳನೇ ಮಗುವಿನಂತೆ ಕಣ್ಣೀರು ಹಾಕಿದ್ದಾರೆ. ಸ್ಪಂದನಾ, ಕಾವ್ಯಾ ಒಂದೆಡೆ ಕುಳಿತು ಅವರಿಬ್ಬರು ಹೋಗಿದ್ದು ಸರ್ಪೈಸ್ ಏನು ಆಗಿರಲಿಲ್ಲ ಎಂದು ಮಾತನಾಡಿಕೊಂಡಿದ್ದಾರೆ. ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಬೀಳ್ಕೊಡುವ ವೇಳೆ ಅಶ್ವಿನಿ ಗೌಡ ಸಹ ಕಣ್ಣೀರು ಹಾಕಿದ್ದಾರೆ.
55
Thank You ಮತ್ತು Sorry
ಮನೆಯಿಂದ ಹೊರಗೆ ಬಂದ್ಮೇಲೆ ನಿನ್ನನ್ನು ಕಾಂಟ್ಯಾಕ್ಟ್ ಮಾಡುವೆ. ಈ ಸಮಯದಲ್ಲಿ Thank You ಮತ್ತು Sorry ಅಲ್ಲದೇ ಮತ್ತೇನು ಹೇಳಲು ಆಗುತ್ತಿಲ್ಲ. ನಮ್ಮ ಮನೆಗೆ ನೀನು ಬರಬೇಕು. ಇಬ್ಬರು ಜೊತೆಯಾಗಿ ವ್ಲಾಗ್ ಮಾಡೋಣ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.