ಬಿಗ್ಬಾಸ್ ಮನೆಯಲ್ಲಿ ಸಂಬಂಧಗಳು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಹೊಸ ಸೇರ್ಪಡೆಯಾಗಿದೆ. ಹಾವು-ಮುಂಗುಸಿಯಂತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೀಗ ಸ್ನೇಹಿತರಾಗಿದ್ದು, ಗಿಲ್ಲಿಯಿಂದಲೇ ತನ್ನ ಮನಸ್ಸು ಪರಿವರ್ತನೆಯಾಗಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ (Bigg Boss) ಯಾರು, ಯಾವ ಕ್ಷಣ ಬೇಕಾದ್ರೂ ಚೇಂಜ್ ಆಗ್ಬೋದು, ಈಗ ಹಾವು-ಮುಂಗುಸಿ ಹಾಗೆ ಇದ್ದೋರು, ಇನ್ನೊಂದು ಕ್ಷಣ ಕ್ಲೋಸ್ ಆಗ್ಬೋದು.
27
ಸ್ನೇಹ- ದ್ವೇಷ
ಒಟ್ಟಿನಲ್ಲಿ ಇದು ಆಟ. ಟಾಸ್ಕ್, ಅದೂ ಇದೂ ಅಂತ ಬಂದಾಗ ಇಲ್ಲಿ ಸ್ನೇಹಿತರು, ದುಷ್ಮನ್ಗಳು ಅಂತೆಲ್ಲಾ ಬರಲ್ಲ. ಟಾಸ್ಕ್ ಗೆಲ್ಲಬೇಕು ಎನ್ನೋದು ಬರುತ್ತೆ ಅಷ್ಟೇ. ಅದಕ್ಕಾಗಿಯೇ ಈ ಜಗಳ ಕಿತ್ತಾಟ, ಎಲ್ಲವೂ ಸರಿಯಿದ್ದಾಗ ಸ್ನೇಹ.
37
ರಾಜಕೀಯ ರೀತಿ
ಇದೊಂದು ರೀತಿಯ ರಾಜಕೀಯ ಇದ್ದಂತೆ. ಆ ಪಕ್ಷ, ಈ ಪಕ್ಷ ಎಂದು ತಿವಿಯುತ್ತಾ ಇರುವ ನಾಯಕರು, ಫಂಕ್ಷನ್ಗಳಲ್ಲಿ ಯಾವುದೋ ಜನ್ಮದ ದೋಸ್ತ್ಗಳಂತೆ ಒಟ್ಟಿಗೇ ಇರಲ್ವಾ, ಬಿಗ್ಬಾಸ್ ಮನೆನೂ ಹಾಗೆನೇ.
ಅಷ್ಟಕ್ಕೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಯಾವಾಗಲೂ ಜಟಾಪಟಿ ಇದದ್ದೇ. ಎಣ್ಣೆ-ಸೀಗೆಕಾಯಿ ರೀತಿ ಈ ಜೋಡಿ. ಇದೀಗ ರಕ್ಷಿತಾ ಶೆಟ್ಟಿ ಅವರು ನಿಮಗೂ, ಗಿಲ್ಲಿ ನಟನಿಗೂ ಆಗಲ್ವಲ್ಲಾ ಎಂದು ಕೇಳಿದ್ದಾರೆ.
57
ಅಶ್ವಿನಿ ರಿಪ್ಲೈ
ಅದಕ್ಕೆ ಅಶ್ವಿನಿ ಗೌಡ, ಇಲ್ಲಪ್ಪಾ ಹಾಗೇನೂ ನನಗೆ ಅನ್ನಿಸಲ್ವಲ್ಲಾ, ನಾವಿಬ್ರೂ ಫ್ರೆಂಡ್ಸ್ ಎಂದಿದ್ದಾರೆ. ನಾವು ಹೊರಗಡೆಯಿಂದ ತುಂಬಾ ಫ್ರೆಂಡ್ಸ್, ಸುಮ್ನೆ ನಮಗಿಬ್ಬರಿಗೂ ಆಗಲ್ಲಾ ಅಂತ ಹೇಳಬೇಡಿ ಎಂದಿದ್ದಾರೆ.
67
ಮನಸ್ಸು ಪರಿವರ್ತನೆ
ಆಗ ಮಧ್ಯೆ ಪ್ರವೇಶಿಸಿರೋ ಧ್ರುವಂತ್ ಅವರು, ನನ್ನ ಮನಸ್ಸನ್ನು ಪರಿವರ್ತನೆ ಮಾಡಿದ್ದೇ ಗಿಲ್ಲಿ. ನೀವೇನೆನಂದುಕೊಂಡ್ರಿ? ಜನರು ಅಂದುಕೊಂಡ್ರಾ? ಅಲ್ಲ ಮನ ಪರಿವರ್ತನೆಯಾಗಿದ್ದು ಗಿಲ್ಲಿಯಿಂದ ಎಂದಿದ್ದಾರೆ. ಮೂಲೆಯಲ್ಲಿ ಕುಳಿತ ಗಿಲ್ಲಿ ನಟ (Bigg Boss Gilli Nata) ಇವರ ಮಾತು ಕೇಳಿ ನಗುತ್ತಿದ್ದಾರೆ.
77
ಫ್ಯಾನ್ಸ್ ಏನಂದ್ರು?
ಇಷ್ಟು ಹೇಳಿದ್ಮೇಲೆ ಇನ್ನು ಗಿಲ್ಲಿ ನಟನ ಫ್ಯಾನ್ಸ್ ಕೇಳಬೇಕೆ? ಅದಕ್ಕಾಗಿಯೇ ಹೇಳೋದು ಗಿಲ್ಲಿನೇ ವಿನ್ನರ್ ಎಂದು ಘೋಷಣೆ ಕೂಗುತ್ತಿದ್ದಾರೆ.