Yajamana BTS: ಝಾನ್ಸಿಗೆ ಆ್ಯಕ್ಸಿಡೆಂಟ್​ ಆದಾಗ ಏನಾಯ್ತು? ಝುಂ ಎನ್ನೋ ಶಾಕಿಂಗ್​ ವಿಡಿಯೋ ವೈರಲ್​

Published : Dec 14, 2025, 07:05 PM IST

 ಯಜಮಾನ ಸೀರಿಯಲ್​ನಲ್ಲಿ ಅಪಘಾತದಿಂದ ನೆನಪು ಕಳೆದುಕೊಂಡಿರುವ ಝಾನ್ಸಿಯನ್ನು ಒಲಿಸಿಕೊಳ್ಳಲು ರಾಘು ಅವಳ ಡ್ರೈವರ್ ಆಗಿ ಸೇರಿದ್ದಾನೆ. ಈ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಯಿತು ಎಂಬುದರ ರಿಸ್ಕಿ ಶೂಟಿಂಗ್ ವಿಡಿಯೋವನ್ನು ನಟಿ ಮಧು ಭೈರಪ್ಪ ಹಂಚಿಕೊಂಡಿದ್ದಾರೆ.

PREV
17
ಪುರುಷ ದ್ವೇಷಿ ಝಾನ್ಸಿ

ಯಜಮಾನ ಸೀರಿಯಲ್​ನಲ್ಲಿ ಗಂಡಸರನ್ನು ಕಂಡರೆ ಆಗದ ಝಾನ್ಸಿ ಮತ್ತು ರಾಘು ನಡುವಿನ ಲವ್​ಸ್ಟೋರಿ ಇದು. ಝಾನ್ಸಿ, ರಾಘುವನ್ನು ತಾತನಿಗಾಗಿ ಮದುವೆಯಾಗಿದ್ದಳು. ಇದು ಕಾಂಟ್ರಾಕ್ಟ್​ ಮದುವೆಯಾಗಿತ್ತು.

27
ಲವ್​ನಲ್ಲಿ ಬಿದ್ದ ಝಾನ್ಸಿ

ರಾಘುಗೆ ಹಣದ ಅವಶ್ಯಕತೆ ಇದ್ದುದರಿಂದ ಈ ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಕ್ರಮೇಣ ಝಾನ್ಸಿಗೆ ಗಂಡನ ಮೇಲೆ ಲವ್​ ಶುರುವಾಯಿತು. ಗಂಡನ ಕಂಡರೆ ಪ್ರೀತಿಯ ಧಾರೆಯನ್ನೇ ಹರಿಸಿದಳು. ಹಾಗೂ ಹೀಗೂ ಹೇಗೋ ಆಗಿ ಇಬ್ಬರೂ ಒಂದಾಗಿದ್ದರು.

37
ಕಳೆದುಹೋದ ನೆನಪು

ಕೊನೆಗೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಡಿವೋರ್ಸ್​ ಕೂಡ ಆಗಬೇಕಾಯ್ತು, ಆದರೆ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಇದೇ ಸಂದರ್ಭದಲ್ಲಿ ರಾಘುವನ್ನು ಸಾಯಿಸಲು ವಿಲನ್​ಗಳು ಪ್ಲ್ಯಾನ್​ ಮಾಡಿದಾಗ, ಝಾನ್ಸಿ ಅಡ್ಡ ಬಂದು ಅಪಘಾತದಲ್ಲಿ ಗಂಭೀರ ಗಾಯಗೊಂಡಳು.

47
ಡ್ರೈವರ್​ ಆಗಿ ಕೆಲಸ

ಅವಳ ನೆನಪಿನ ಶಕ್ತಿ ಅರ್ಧ ಹೋಗಿದೆ. ರಾಘುವನ್ನು ಮೀಟ್​ ಆಗ ಘಟನೆಗೆ ಮುಂಚಿನದ್ದು ಮಾತ್ರ ನೆನಪಿದೆ. ಆದ್ದರಿಂದ ಆಕೆ ಮತ್ತದೇ ಗಂಡಸರನ್ನು ದ್ವೇಷಿಸುವ ಝಾನ್ಸಿ ಆಗಿದ್ದಾಳೆ. ಅವಳನ್ನು ಒಲಿಸಿಕೊಳ್ಳಲು ರಾಘು ಅವಳ ಆಫೀಸ್​ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ.

57
ಶೂಟಿಂಗ್​ ವಿಡಿಯೋ

ಇದು ಸದ್ಯದ ಸ್ಟೋರಿ. ಆದರೆ ಈ ಅಪಘಾತದ ದೃಶ್ಯವನ್ನು ಹೇಗೆ ಶೂಟಿಂಗ್​ ಮಾಡಲಾಯಿತು ಎನ್ನುವ ಮೈ ಝುಂ ಎನ್ನುವ ವಿಡಿಯೋ ಅನ್ನು ಝಾನ್ಸಿ ಪಾತ್ರಧಾರಿಯಾಗಿರುವ ಮಧು ಭೈರಪ್ಪ ಅವರು ಶೇರ್​ ಮಾಡಿಕೊಂಡಿದ್ದಾರೆ.

67
ತುಂಬಾ ರಿಸ್ಕ್​

ಕೆಲವೊಮ್ಮೆ ಇಂಥ ಸೀನ್​ಗಳು ಮಾಡುವಾಗ ಎಷ್ಟು ರಿಸ್ಕ್​ ಇರುತ್ತದೆ ಎನ್ನುವುದನ್ನು ನೋಡಬಹುದಾಗಿದೆ. ಕಾರಿಗೆ ಝಾನ್ಸಿ ಗುದ್ದುತ್ತಾಳೆ. ಮೇಲೆ ಚಿಮ್ಮುತ್ತಾಳೆ. ಈ ಸಮಯದಲ್ಲಿ ಹಗ್ಗವನ್ನು ಕಟ್ಟಲಾಗಿರುತ್ತದೆ. ಅದನ್ನು ಕೊನೆಯದಾಗಿ ಎಡಿಟ್​ ಮಾಡಲಾಗುತ್ತದೆ.

77
ಇಲ್ಲಿದೆ ನೋಡಿ ವಿಡಿಯೋ

ಆದರೆ ಆ ಸಮಯದಲ್ಲಿಯೂ ಕೆಲವೊಮ್ಮೆ ಅಪಾಯ ತಪ್ಪಿದ್ದಲ್ಲ. ಈ ವಿಡಿಯೋ ನೋಡಿದರೆ ಇಂಥ ದೃಶ್ಯಗಳನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ.

Read more Photos on
click me!

Recommended Stories