ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೀಕ್ಷಣೆ ಕುರಿತ ಪ್ರಶ್ನೆಗೆ, '200 ಕೋಟಿ ನಾಯಿ ಸಾಲ ತೀರಿಸಬೇಕು' ಎಂದು ವ್ಯಂಗ್ಯವಾಗಿ ಉತ್ತರಿಸಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಬಿಗ್ಬಾಸ್ 10ರ ಖ್ಯಾತಿಯ ವಿನಯ್ ಗೌಡ ಬಿಗ್ಬಾಸ್ನಿಂದ ಬಂದ ಮೇಲೆಯೂ ಸಕತ್ ಡಿಮಾಂಡ್ ಇದೆ. ಬಿಗ್ಬಾಸ್ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೇ ರನ್ನರ್ ಅಪ್ ಆಗಿ ಮಿಂಚಿದರು.
27
ಬ್ಯಾಕ್ ಟು ಬ್ಯಾಕ್ ಸಿನಿಮಾ
ಇನ್ನು, ವಿನಯ್ ಗೌಡ (Bigg Boss Vinay Gowda) ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ.
37
ತೆಲುಗು ಚಿತ್ರದಲ್ಲೂ ಮಾತುಕತೆ
ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.
ಕೆಲ ದಿನಗಳ ಹಿಂದೆ ಇವರು ಇದೇ ಬಿಗ್ಬಾಸ್ನ ಮೋಕ್ಷಿತಾ ಪೈ (Mokshita Pai) ಜೊತೆ ಮಾಡುತ್ತಿರುವ ವೆಬ್ಸೀರಿಸ್ ಕುರಿತು ಮಾತನಾಡಿದ್ದರು. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣದ ವೆಬ್ ಸೀರಿಸ್ ಇದಾಗಿದೆ.
57
ಬಿಗ್ಬಾಸ್ ಬಗ್ಗೆ ಪ್ರಶ್ನೆ
ಇದೀಗ ಅವರಿಗೆ ಬಿಗ್ಬಾಸ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಾಜಿ ಸ್ಪರ್ಧಿಗಳು ಬಿಗ್ಬಾಸ್ಗೆ ಹೋಗಿದ್ದಾರೆ, ನೀವ್ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದಾಗ, ವಿನಯ್ ಗೌಡ ಅವರು, ಅವರೆಲ್ಲಾ ಹೋಗಿದ್ದಾರಲ್ಲ ಸಾಕು ಎಂದು ಹೇಳಿದ್ದಾರೆ. ಅಷ್ಟಕ್ಕೂ ಬಿಗ್ಬಾಸ್ ಮನೆಗೆ ಹೋದವರು ಸೀಸನ್ 11 ಸ್ಪರ್ಧಿಗಳಷ್ಟೇ.
67
200 ಕೋಟಿಯ ನಾಯಿ
ಕೊನೆಗೆ ಬಿಗ್ಬಾಸ್ ನೋಡ್ತೀರಾ, ವಿನ್ ಯಾರು ಆಗ್ತಾರೆ ಎನ್ನುವ ಪ್ರಶ್ನೆಗೆ ಬಿಗ್ಬಾಸ್ ನೋಡ್ತಿಲ್ಲ ಇನ್ನು ಯಾರು ವಿನ್ ಅಂತ ಹೇಳೋದು ಹೇಗೆ ಎಂದು ಪ್ರಶ್ನಿಸಿದ್ದಾರೆ. 200 ಕೋಟಿ ರೂಪಾಯಿ ನಾಯಿ ಪರ್ಚೇಸ್ ಮಾಡಿದ್ದೇನೆ. ಅದರ ಸಾಲ ತೀರಿಸಬೇಕಿದೆ, ಬಿಗ್ಬಾಸ್ ನೋಡಲು ಆಗಲ್ಲ ಎಂದಿದ್ದಾರೆ. ಇದನ್ನು ಫಿಲ್ಮಿಟಾಕೀಸ್ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ.
77
ನೆಟ್ಟಿಗರು ಗರಂ
ಇವರ ಮಾತಿನ ವೈಖರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಅಹಂಕಾರ, ದುರಹಂಕಾರದ ಮಾತನಾಡುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ಇವರ ಮಾತಿನ ವೈಖರಿ ನೋಡಿದರೆ ಎಷ್ಟು ಕೊಬ್ಬು ಎನ್ನುವುದು ತಿಳಿಯುತ್ತದೆ ಎಂದು ಮತ್ತಷ್ಟು ಮಂದಿ ಹೇಳುತ್ತಿದ್ದಾರೆ. ಬಿಗ್ಬಾಸ್ ನೋಡಲು ಟೈಮ್ ಇಲ್ಲ ಎಂದು ಸಹಜವಾಗಿ ಹೇಳಬೇಕಿದೆ. ಈ ರೀತಿಯ ಅಹಂಕಾರದಿಂದ ನುಡಿಯುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ!