ಒಂದೇ ಒಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ; ರಾಜಮಾತೆ ಫುಲ್ ಸೈಲೆಂಟ್

Published : Oct 30, 2025, 11:54 AM IST

Rakshitha Shetty Vs Ashwini Gowda: ಬಿಗ್‌ಬಾಸ್ ಮನೆಯ ಬಿಬಿ ಕಾಲೇಜು ಟಾಸ್ಕ್‌ನಲ್ಲಿ, ಕ್ಯಾಪ್ಟನ್ಸಿ ಸ್ಪರ್ಧಿಯನ್ನು ಆಯ್ಕೆ ಮಾಡಲು ನೀಲಿ ತಂಡ ವಿಫಲವಾಯಿತು. ಇದನ್ನು ಸಂಭ್ರಮಿಸಿದ ಕೆಂಪು ತಂಡದ ರಕ್ಷಿತಾ ಶೆಟ್ಟಿ, ತನ್ನನ್ನು ಪ್ರಶ್ನಿಸಿದ ಅಶ್ವಿನಿ ಗೌಡರಿಗೆ  ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದರು.

PREV
15
ಸ್ಪರ್ಧಿ ರಕ್ಷಿತಾ ಶೆಟ್ಟಿ

ಕಳೆದ ಎರಡ್ಮೂರು ವಾರಗಳಿಂದ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಒಂದೊಂದು ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ. ರಕ್ಷಿತಾ ಶೆಟ್ಟಿ ಮಾತುಗಳು Rap Songಗಳಾಗಿ ಬದಲಾಗುತ್ತಿವೆ. ಇದೀಗ ಒಂದೇ ಒಂದು ಡೈಲಾಗ್ ಹೊಡೆದು ಬಿಗ್‌ಬಾಸ್ ಮನೆಯ ರಾಜಮಾತೆ ಅಶ್ವಿನಿ ಗೌಡ ಅವರ ಬಾಯಿಯನ್ನು ರಕ್ಷಿತಾ ಶೆಟ್ಟಿ ಮುಚ್ಚಿಸಿದ್ದಾರೆ.

25
ಬಿಗ್‌ಬಾಸ್ ಮನೆ ಬಿಬಿ ಕಾಲೇಜು

ಬಿಗ್‌ಬಾಸ್ ಮನೆ ಬಿಬಿ ಕಾಲೇಜು ಆಗಿದ್ದು, ಕ್ಯಾಪ್ಟನ್ ರಘು ಹೊರತುಪಡಿಸಿ ಎಲ್ಲಾ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿದ್ದಾರೆ. ನೀಲಿ ಮತ್ತು ಕೆಂಪು ಎಂದು ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಅಶ್ವಿನಿ ಗೌಡ ನೀಲಿ ಗುಂಪಿನಲ್ಲಿದ್ರೆ, ರಕ್ಷಿತಾ ಕೆಂಪು ಗುಂಪಿನ ಸದಸ್ಯೆಯಾಗಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಗೆದ್ರೂ ಕ್ಯಾಪ್ಟನ್ಸಿ ಆಟಕ್ಕೆ ಸ್ಪರ್ಧಿಯನ್ನು ಆಯ್ಕೆ ಮಾಡುವಲ್ಲಿ ನೀಲಿ ಟೀಂ ವಿಫಲವಾಯ್ತು.

35
ಎರಡು ಬಾರಿ ಅವಕಾಶ

ಬಿಗ್‌ಬಾಸ್ ಎರಡು ಬಾರಿ ಅವಕಾಶ ನೀಡಿದರೂ ನೀಲಿ ತಂಡದ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಗಿಲ್ಲಿ ನಟ ಮತ್ತು ಸ್ಪಂದನಾ ಸೋಮಣ್ಣ ತಮಗೇ ತಾವೇ ವೋಟ್ ಹಾಕಿಕೊಂಡಿದ್ದರಿಂದ ನೀಲಿ ತಂಡದಲ್ಲಿ ಗೊಂದಲವುಂಟಾಗಿತ್ತು. ಸೂಚಿಸಿದ ಸಮಯದಲ್ಲಿ ನಿರ್ಧಾರಕ್ಕೆ ಬರದ ಹಿನ್ನೆಲೆ ಬಿಗ್‌ಬಾಸ್ ನೀಡಿದ ಅವಕಾಶವನ್ನು ಹಿಂಪಡೆದುಕೊಂಡರು.

45
ಕೆಂಪು ತಂಡದ ಸದಸ್ಯೆ ರಕ್ಷಿತಾ ಶೆಟ್ಟಿ

ಅವಕಾಶ ಹಿಂಪಡೆಯುವ ಆದೇಶ ಬರುತ್ತಿದ್ದಂತೆ ಕೆಂಪು ತಂಡದ ಸದಸ್ಯೆ ರಕ್ಷಿತಾ ಶೆಟ್ಟಿ, ಎದ್ದು ನಿಂತು ಹೇ ಅಂತ ಜೋರಾಗಿ ಕೂಗಿ ಬಿಗ್‌ಬಾಸ್‌ಗೆ ಥ್ಯಾಂಕ್ ಯು ಹೇಳಿದರು. ಅವಕಾಶ ಕಳೆದುಕೊಂಡು ಕೋಪದಲ್ಲಿದ್ದ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯನ್ನು ಹೆದರಿಸಲು ಹೋಗುತ್ತಾರೆ. ಈ ವೇಳೆ ನಾನು ಬಿಗ್‌ಬಾಸ್ ಜೊತೆಯಲ್ಲಿ ಮಾತನಾಡುತ್ತಿದ್ದೇನೆ. ಬಿಗ್‌ಬಾಸ್ ಮತ್ತು ನನ್ನ ಮಧ್ಯೆ ಬರಬೇಡಿ ಎಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಅವರ ಬಾಯಿ ಮುಚ್ಚಿಸಿದರು.

ಇದನ್ನೂ ಓದಿ: BBK 12: ರಕ್ಷಿತಾ ಮುಖವಾಡ ಕಳಚುವೆ ಎಂದ ಬಿಗ್‌ಬಾಸ್ ಸ್ಪರ್ಧಿ; ನಾಟಕ ಬಯಲು ಮಾಡುವೆ ಅಂದಿದ್ಯಾಕೆ?

55
ಕಣ್ಣೀರಿಟ್ಟ ರಾಶಿಕಾ ಶೆಟ್ಟಿ

ಗಿಲ್ಲಿ ನಟ ಮತ್ತು ಸ್ಪಂದನಾ ಹೊರತುಪಡಿಸಿ ನೀಲಿ ತಂಡದ ಎಲ್ಲಾ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್‌ಗೆ ರಾಶಿಕಾ ಹೆಸರು ಸೂಚಿಸಿದ್ದರು. ಕೆಂಪು ತಂಡದ ಸದಸ್ಯರು ರಾಶಿಕಾ ಹೆಸರು ಅಂತಿಮವಾಗುತ್ತೆ ಎಂದು ಯೋಚಿಸಿದ್ದರು. ಸಹಮತ ವ್ಯಕ್ತವಾಗದ ಹಿನ್ನೆಲೆ ರಾಶಿಕಾ ಕೊನೆ ಕ್ಷಣದಲ್ಲಿ ಅವಕಾಶ ಕಳೆದುಕೊಂಡಿದ್ದರು. ಇದರಿಂದ ನೊಂದ ರಾಶಿಕಾ ಕಣ್ಣೀರು ಹಾಕಿದರು.

ಇದನ್ನೂ ಓದಿ:  BBK 12: ನಿಮಗೆ ನೀವೇ ಸಾಟಿ; ಮಹಿಳಾಮಣಿಗಳ ಕಾಳಗಕ್ಕೆ ಬೆಚ್ಚಿ ಇನ್ನುಳಿದ ಬಿಗ್‌ಬಾಸ್ ಸ್ಪರ್ಧಿಗಳು ಗಪ್‌ಚುಪ್!

Read more Photos on
click me!

Recommended Stories