ಗಿಲ್ಲಿ-ಕಾವ್ಯ-ರಕ್ಷಿತಾ ಟ್ರಯಾಂಗಲ್ ಲವ್‌ ಸ್ಟೋರಿ ಬಗ್ಗೆ ಕೊನೆಗೂ ಸತ್ಯ ಬಾಯ್ಬಿಟ್ಟ ರಕ್ಷಿತಾ! ಗಿಲ್ಲಿ ಮೇಲೆ ಕ್ರಶ್ ಇದೆಯಾ?

Published : Jan 20, 2026, 11:47 AM IST

ಬೆಂಗಳೂರು: 12ನೇ ಸೀಸನ್‌ ಬಿಗ್ ಬಾಸ್ ಮುಗಿದು ಎರಡು ದಿನ ಕಳೆಯುತ್ತಾ ಬಂದರೂ, ಇದರ ಕುರಿತಾದ ಮಾತುಗಳು ಮಾತ್ರ ನಿಂತಿಲ್ಲ. ಇದೀಗ ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್, ಟ್ರಯಾಂಗಲ್ ಲವ್ ಸ್ಟೋರಿ ಬನ್ನಿ ಮೊದಲ ಸಲ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 

PREV
19
ಗಿಲ್ಲಿ ನಟ ಬಿಗ್ ಬಾಸ್ ಚಾಂಪಿಯನ್

12ನೇ ಬಿಗ್ ಬಾಸ್‌ನಲ್ಲಿ ಎಲ್ಲರ ನಿರೀಕ್ಷೆಯಂತೆಯೇ ಗಿಲ್ಲಿ ನಟರಾಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇನ್ನುಳಿದಂತೆ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರೆ, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

29
60 ಲಕ್ಷ ನಗದು ಜತೆಗೆ ಕಾರು ಗೆದ್ದ ಗಿಲ್ಲಿ

24 ಸ್ಪರ್ಧಿಗಳು ಪಾಲ್ಗೊಂಡ ಬಿಗ್ ಬಾಸ್‌ ಕನ್ನಡ ರಿಯಾಲಿಟಿ ಶೋನಲ್ಲಿ ಬರೋಬ್ಬರಿ 37 ಕೋಟಿಗೂ ಅಧಿಕ ಮತ ಪಡೆಯುವ ಮೂಲಕ ಗಿಲ್ಲಿ ನಟ ಚಾಂಪಿಯನ್ ಪಟ್ಟ ಅಲಂಕರಿಸಿದರು. ಇದರ ಜತೆಗೆ 60 ಲಕ್ಷ ರುಪಾಯಿ ನಗದು ಹಾಗೂ ಸುಜುಕಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡರು.

39
25 ಲಕ್ಷ ರುಪಾಯಿ ನಗದು ಬಹುಮಾನ ಗೆದ್ದ ರಕ್ಷಿತಾ

ಇನ್ನು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ಒಟ್ಟಾರೆ 25 ಲಕ್ಷ ರುಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. 

49
113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ರಕ್ಷಿತಾ ಶೆಟ್ಟಿ

113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ರಕ್ಷಿತಾ ಶೆಟ್ಟಿ, ಇದೀಗ ಗಿಲ್ಲಿ ಜತೆಗಿನ ಗಾಸಿಪ್ ಕುರಿತಂತೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

59
ಸೋಷಿಯಲ್ ಮೀಡಿಯಾದಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಚರ್ಚೆ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಕಾವ್ಯ ಅವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿತ್ತು. ಈ ಬಗ್ಗೆ ರಕ್ಷಿತಾ ತುಟಿಬಿಚ್ಚಿದ್ದಾರೆ.

69
ಅದು ಟ್ರಯಾಂಗಲ್ ಲವ್ ಸ್ಟೋರಿ ಅಲ್ಲವೆಂದ ರಕ್ಷಿತಾ

ಗಿಲ್ಲಿ, ರಕ್ಷಿತಾ ಹಾಗೂ ಕಾವ್ಯ ನಡುವಿನ ಟ್ರಯಾಂಗಲ್ ಲವ್ ಸ್ಟೋರಿ ವಿಚಾರವಾಗಿ ನೀವು ಏನಂತೀರಾ ಎನ್ನುವ ಪ್ರಶ್ನೆಗೆ, ಅದು ಟ್ರಯಾಂಗಲ್ ಲವ್ ಸ್ಟೋರಿ ಅಲ್ಲ, ಟ್ರಯಾಂಗಲ್ ಫ್ರೆಂಡ್‌ಶಿಪ್ ಕೂಡಾ ಅಲ್ಲ ಎಂದು ಹೇಳಿದ್ದಾರೆ.

79
ಗಾಸಿಪ್‌ಗೆ ತೆರೆ ಎಳೆದ ರಕ್ಷಿತಾ ಶೆಟ್ಟಿ

ಅದೇನಿದ್ದರೂ ಗಿಲ್ಲಿ ಹಾಗೂ ರಕ್ಷಿತಾ ನಡುವಿನ ಫ್ರೆಂಡ್‌ಶಿಪ್ ಅಷ್ಟೇ ಅದರಲ್ಲಿ ಬೇರೆನೂ ಇಲ್ಲ ಎಂದು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

89
ಗಿಲ್ಲಿ ಮೇಲೆ ರಕ್ಷಿತಾಗೆ ಕ್ರಶ್ ಆಗಿದೆಯಾ?

ರಕ್ಷಿತಾ ಅವರಿಗೆ ಗಿಲ್ಲಿ ಮೇಲೆ ಕ್ರಶ್ ಆಗಿದೆಯಾ ಎನ್ನುವ ಪ್ರಶ್ನೆಗೂ ರಕ್ಷಿತಾ ಸ್ಪಷ್ಟ ಉತ್ತರ ನೀಡಿದ್ದಾರೆ. ನಾವು ಯಾರನ್ನೂ ತುಂಬಾ ಇಷ್ಟ ಪಟ್ಟರೂ ಪಡೆದುಕೊಳ್ಳಲು ಆಗಲ್ವೋ ಅವರನ್ನು ಕ್ರಶ್ ಎನ್ನುತ್ತೇವೆ. ಆದರೆ ನನಗೆ ಗಿಲ್ಲಿ ಸಿಕ್ಕಿದ್ದಾರೆ. ಹೀಗಾಗಿ ಗಿಲ್ಲಿ ನಮ್ಮ ಕ್ರಶ್ ಅಲ್ಲ ಎಂದು ರಕ್ಷಿತಾ ಹೇಳಿದ್ದಾರೆ.

99
ಜನಮನ ಗೆದ್ದ ಗಿಲ್ಲಿ

ಒಟ್ಟಿನಲ್ಲಿ 12ನೇ ಸೀಸನ್ ಬಿಗ್ ಬಾಸ್ ಮುಗಿದರೂ, ಅಭಿಮಾನಿಗಳ ಹಲವು ಕುತೂಹಲಗಳಂತೂ ತಣಿದಿಲ್ಲ. ಗಿಲ್ಲಿ ನಟ ಕೂಡಾ ಬಿಗ್ ಬಾಸ್ ಮುಗಿದ ಬಳಿಕವೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಜನಮನ ಗೆಲ್ಲುತ್ತಿರುವುದಂತೂ ಸುಳ್ಳಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories