Bigg Boss Kannada: ಗಿಲ್ಲಿ ಹೇಳಿಕೊಟ್ಟಿದ್ದು ಒಂದು ರಕ್ಷಿತಾ ಹೇಳಿದ್ದು ಇನ್ನೊಂದು, ಕ್ಯಾಪ್ಟನ್ ಗೆ ವಂಶದ ಕುಡಿ ಚಮಕ್

Published : Dec 30, 2025, 03:59 PM IST

Bigg Boss Kannada 12 : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಜೋಡಿಯನ್ನು ವೀಕ್ಷಕರು ಇಷ್ಟಪಡ್ತಾರೆ. ಗಿಲ್ಲಿ, ರಕ್ಷಿತಾಗೆ ಸಿಕ್ಕಾಪಟ್ಟೆ ಕಾಟಕೊಟ್ರೂ ರಕ್ಷಿತಾ ಮಾತ್ರ ಎದುರು ಮಾತನಾಡೋದಿಲ್ಲ. ಆದ್ರೆ ಈ ಬಾರಿ ಗಿಲ್ಲಿಗೆ ಚಮಕ್ ನೀಡಿದ್ದಾರೆ.

PREV
16
ವಂಶದ ಕುಡಿ

ಬಿಗ್ ಬಾಸ್ ಮನೆಯಲ್ಲಿ ಅಲ್ಲಿ, ಇಲ್ಲಿ ಅಂತ ಎಲ್ಲ ಕಡೆ ಕಾಣಿಸಿಕೊಳ್ಳುವ ಸ್ಪರ್ಧಿಗಳೆಂದ್ರೆ ಗಿಲ್ಲಿ ಹಾಗೂ ರಕ್ಷಿತಾ. ಗಿಲ್ಲಿ ಎಷ್ಟೇ ಗೋಳು ಹೊಯ್ದರೂ ರಕ್ಷಿತಾ ಅವರನ್ನು ಬಿಡೋದಿಲ್ಲ. ಗಿಲ್ಲಿ ಬೆಂಬಲಕ್ಕೆ ರಕ್ಷಿತಾ ಸದಾ ನಿಲ್ತಾರೆ. ಇದೇ ಕಾರಣಕ್ಕೆ ಈ ಹಿಂದೆಯೇ ಗಿಲ್ಲಿ ರಕ್ಷಿತಾರಿಗೆ ವಂಶದ ಕುಡಿ ಅಂತ ನಾಮಕರಣ ಮಾಡಿದ್ದಾರೆ. ಇಬ್ಬರ ಮಧ್ಯೆ ನಡೆದ ಮಾತುಕತೆಯೊಂದು ವೀಕ್ಷಕರ ಗಮನ ಸೆಳೆದಿದೆ.

26
ಗಿಲ್ಲಿ ಹೇಳಿಕೊಟ್ಟಿದ್ದು ಏನು?

ರಕ್ಷಿತಾ ಹಾಗೂ ಗಿಲ್ಲಿ ಎಲ್ಲ ಕಡೆ ಒಟ್ಟಿಗೆ ಕಾಣಿಸಿಕೊಳ್ತಾರೆ. ಗಿಲ್ಲಿ, ಬಹುತೇಕ ಬಾರಿ ರಕ್ಷಿತಾ ಕಾಲೆಳೆಯುತ್ತಿರುತ್ತಾರೆ. ಜನರಿಂದ ವೋಟ್ ಕೇಳೋ ನೆಪದಲ್ಲಿ ರಕ್ಷಿತಾ ದಾರಿ ತಪ್ಪಿಸುವಂತೆ ಡೈಲಾಗ್ ಹೇಳ್ಕೊಟ್ಟಿದ್ದಾರೆ ಗಿಲ್ಲಿ. 13 ವಾರಗಳಿಂದ ನನ್ನನ್ನು ಸೇವ್ ಮಾಡಿರುವ ಕರ್ನಾಟಕದ ಜನರೇ, ನಾನು ಇಲ್ಲಿ ಚೆನ್ನಾಗಿ ಆಟ ಆಡಲಿ ಅಂತ ನನ್ನನ್ನು ಸೇವ್ ಮಾಡಿ ಉಳಿಸಿದ್ದೀರಿ. ಆದ್ರೆ ನಾನು ನಿದ್ರೆ ಮಾಡಿಕೊಂಡಿದ್ದೇನೆ. ನೆಕ್ಸ್ಟ್ ಟೈಂ ವೋಟ್ ಹಾಕುವಾಗ ಯೋಚನೆ ಮಾಡಿ ಅಂತ ಗಿಲ್ಲಿ ರಕ್ಷಿತಾಗೆ ಡೈಲಾಗ್ ಹೇಳಿಕೊಟ್ಟಿದ್ದಾರೆ.

36
ರಕ್ಷಿತಾ ಹೇಳಿದ್ದೇನು?

ಗಿಲ್ಲಿ ಹೇಳಿದಂತೆ ಕ್ಯಾಮರಾ ಮುಂದೆ ಬಂದ ರಕ್ಷಿತಾ ಒಂದೊಂದೇ ವಾಕ್ಯವನ್ನು ರಿಪಿಟ್ ಮಾಡಿದ್ದಾರೆ. 13 ವಾರಗಳಿಂದ ನನ್ನನ್ನು ಸೇವ್ ಮಾಡಿದ ಕರ್ನಾಟಕದ ಜನರೇ, ನಾನು ಇಲ್ಲಿ ಚೆನ್ನಾಗಿ ಆಟ ಆಡಲಿ ಅಂತ ನನ್ನನ್ನು ಸೇವ್ ಮಾಡ್ತಾ ಬಂದಿದ್ದೀರಿ, ಆದ್ರೆ ನಾನು ನಿದ್ರೆ ಮಾಡಿಕೊಂಡಿದ್ದೇನೆ ಎಂಬುದನ್ನು ಹೇಳುವ ರಕ್ಷಿತಾ ಲಾಸ್ಟ್ ಡೈಲಾಗ್ ಬದಲಿಸ್ತಾರೆ. ನೆಕ್ಸ್ಟ್ ಟೈಂ ವೋಟ್ ಹಾಕುವಾಗ ಯೋಚನೆ ಮಾಡಿ ಅನ್ನುವ ಬದಲು ಮಾಡ್ಬೇಡಿ, ವೋಟ್ ಹಾಕ್ತಾನೇ ಇರಿ ಎನ್ನುತ್ತಾರೆ.

46
ರಕ್ಷಿತಾ – ಗಿಲ್ಲಿಗಾಗಿ ಬಿಗ್ ಬಾಸ್

ಜಿಯೋ ಹಾಟ್ ಸ್ಟಾರ್ ನಲ್ಲಿ ಈ ವಿಡಿಯೋ ನೋಡಿದ ವೀಕ್ಷಕರು, ರಕ್ಷಿತಾ ಹಾಗೂ ಗಿಲ್ಲಿ ತಮಾಷೆಯನ್ನು ಮೆಚ್ಚಿಕೊಂಡಿದ್ದಾರೆ. ಅವರಿಬ್ಬರಿಗಾಗಿಯೇ ಬಿಗ್ ಬಾಸ್ 12 ನೋಡ್ತಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲ ಬಳಕೆದಾರರ ಮಧ್ಯೆ ವೋಟಿಂಗ್ ಗಲಾಟೆ ನಡೆದಿದೆ. ಮಾಳು ಮತವೆಲ್ಲ ರಕ್ಷಿತಾಗೆ ಬೀಳಲಿ ಎನ್ನುವ ಆಸೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

56
ಕ್ಯಾಪ್ಟನ್ ಗಿಲ್ಲಿ

ಈ ವಾರ ಗಿಲ್ಲಿ ನಟ ಕ್ಯಾಪ್ಟನ್. ಆದ್ರೆ ಗಿಲ್ಲಿ ನಟ ಕ್ಯಾಪ್ಟನ್ ಆಗಿ ಆಟವನ್ನು ಸರಿಯಾಗಿ ಆಡಿದಂತೆ ಕಾಣ್ತಿಲ್ಲ. ಈ ಬಗ್ಗೆ ಮನೆ ಮಂದಿ ಮಾತ್ರವಲ್ಲ ವೀಕ್ಷಕರು ಕೂಡ ಧ್ವನಿ ಎತ್ತಿದ್ದಾರೆ. ಕಾವ್ಯ ಅವರನ್ನು ಸೇವ್ ಮಾಡಲು ಗಿಲ್ಲಿ ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದಾರೆ.

66
ಗಿಲ್ಲಿ ಮೇಲೆ ರಕ್ಷಿತಾ ಪ್ರೀತಿ

ರಕ್ಷಿತಾ ಬಿಗ್ ಬಾಸ್ ಮನೆ ಪುಟ್ಟಿ. ರಘು, ಮಾಳು ಹಾಗೂ ಸೂರಜ್ ಅವರನ್ನು ತಂಗಿಯಂತೆ ನೋಡ್ತಿದ್ದರು. ಸೂರಜ್ ಹಾಗೂ ಮಾಳು ಹೊರಗೆ ಹೋಗಿದ್ದು, ಮಾಳುವನ್ನು ರಕ್ಷಿತಾ ಮಿಸ್ ಮಾಡಿಕೊಳ್ತಿದ್ದಾರೆ. ಆದ್ರೆ ಗಿಲ್ಲಿಯನ್ನು ರಕ್ಷಿತಾ ಎಂದೂ ಬಿಟ್ಟುಕೊಟ್ಟಿಲ್ಲ. ಬಿಗ್ ಬಾಸ್ ಫಿನಾಲೆಯಲ್ಲಿ ಗಿಲ್ಲಿ ಪಕ್ಕದಲ್ಲಿ ತಾನೇ ಇರ್ಬೇಕು ಎನ್ನುವ ಆಸೆಯಲ್ಲಿ ರಕ್ಷಿತಾ ಇದ್ದಾರೆ. ಆದ್ರೆ ಗಿಲ್ಲಿ ಸಪೋರ್ಟ್ ಸಂಪೂರ್ಣ ಕಾವ್ಯಗಿದ್ದು, ಕಾವ್ಯ ಕಂಡ್ರೆ ರಕ್ಷಿತಾ ಉರಿದು ಬೀಳ್ತಾರೆ. ಮಾತಿನ ಮಧ್ಯೆ ನಿನ್ನೆ ಅನುಪಮಾ ಗೌಡ ಬಳಿ, ಮದುವೆ ಆಗುವ ಹುಡುಗ ಗಿಲ್ಲಿ ತರ ಇರಬೇಕು, ಆದ್ರೆ ಗಿಲ್ಲಿ ಅಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories