Rakshitha Shetty vs Dhruvanth fight: ಬಿಗ್‌ಬಾಸ್ ಮನೆಯ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವೆ ಜಗಳ ಆರಂಭವಾಗಿದೆ. ಧ್ರುವಂತ್, ರಕ್ಷಿತಾ ಅವರ ವರ್ತನೆಯನ್ನು ಅಣಕಿಸಿದ್ದರಿಂದ ಕೋಪಗೊಂಡ ರಕ್ಷಿತಾ, ಧ್ರುವಂತ್‌ಗೆ ತೀವ್ರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್
ಬಿಗ್‌ಬಾಸ್ ಮನೆಯ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವೆ ಬೆಂಕಿ ಹತ್ತಿಕೊಂಡಿದೆ. ಇಬ್ಬರು ತದ್ವಿರುದ್ಧ ಸ್ವಭಾವ ಹೊಂದಿರುವ ಸ್ಪರ್ಧಿಗಳಾಗಿದ್ದರಿಂದ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಮನೆಮಾಡಿತ್ತು. ವೀಕ್ಷಕರು ಅಂದುಕೊಂಡಂತೆಯೇ ರಕ್ಷಿತಾ ಮತ್ತು ಧನುಷ್ ನಡುವೆ ಜಗಳ ಆರಂಭವಾಗಿದೆ.
25
ರಕ್ಷಿತಾ ಪ್ರಶ್ನೆ
ನೀವು ಯಾಕೆ ಇಷ್ಟು ಸ್ಟೈಲ್ ಮಾಡ್ತೀರಿ ಎಂದು ರಕ್ಷಿತಾ ಕೇಳಿದಾಗ ನನ್ನನ್ನು ನಾನು ಪ್ರೀತಿಸುತ್ತೇನೆ ಎಂದು ಧ್ರುವಂತ್ ಹೇಳುತ್ತಾರೆ. ನಿಮ್ಮನ್ನು ಸೀಕ್ರೆಟ್ ರೂಮ್‌ಗೆ ಹಾಕಿ ತಪ್ಪಾಯ್ತು ಎಂದು ಬಿಗ್‌ಬಾಸ್ ಸಹ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಧ್ರುವಂತ್‌ಗೆ ರಕ್ಷಿತಾ ಹೇಳುತ್ತಾರೆ.
35
ಇಬ್ಬರ ನಡುವೆ ಜಗಳ
ನಿನ್ನ ಆಟಿಟ್ಯೂಡ್, ಬಿಹೇವ್ ಮಾಡುವ ರೀತಿ, ನಿನ್ನ ಒಳ್ಳೆಯದಕ್ಕೆ ಹೇಳಿದರೂ ನೀವು ಮಾಡುವ ವರ್ತನೆ ಸರಿಯಿಲ್ಲ ಎಂದು ರಕ್ಷಿತಾ ರೀತಿಯಲ್ಲಿಯೇ ಧ್ರುವಂತ್ ಮಾಡಿ ತೋರಿಸುತ್ತಾರೆ. ಇದರಿಂದ ಕೋಪಗೊಂಡ ರಕ್ಷಿತಾ, ಕ್ಯಾಮೆರಾ ತೋರಿಸಿ ನಿಮಗೆ ಫೂಟೇಜ್ ಬೇಕಾ ಎಂದು ಖಾರವಾಗಿ ಪ್ರಶ್ನೆ ಮಾಡುತ್ತಾರೆ. ನಂತರ ಇದೇ ರೀತಿ ಇಬ್ಬರ ಜಗಳ ಮುಂದುವರಿಯುತ್ತದೆ.
ರಕ್ಷಿತಾ ರೀತಿ ಯಾಕೆ ಮಾಡ್ತಿದ್ದೀರಾ? ನೀವು ರಕ್ಷಿತಾ ಆಗಬೇಕಾ? ರಕ್ಷಿತಾಳ R ಕೂಡ ನಿಮ್ಮಿಂದ ಆಗಲು ಸಾಧ್ಯವಿಲ್ಲ ಎಂದು ಧ್ರುವಂತ್‌ಗೆ ಕ್ಲಾಸ್ ತೆಗೆದುಕೊಳ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧ್ರುವಂತ್, ಈ ಹಿಂದಿನ ಅಶ್ವಿನಿ ಜೊತೆಗಿನ ಜಗಳದ ಸನ್ನೆಯನ್ನು ಮಾಡಿ ತೋರಿಸುತ್ತಾರೆ.
ಸೀಕ್ರೆಟ್ ರೂಮ್‌ಗೆ ಬಂದ ಕ್ಷಣವೇ ಧ್ರುವಂತೆ ಜೊತೆ ಹೇಗಿರಬೇಕೆಂದು ರಕ್ಷಿತಾ ತಲೆ ತಲೆ ಚಚ್ಚಿಕೊಂಡಿದ್ದರು. ಬಿಗ್‌ಬಾಸ್ ಇಬ್ಬರಿಗೂ ಯಾವ ತಂಡದ ಯಾರು ಆಟವಾಡಬೇಕು ಎಂಬುದನ್ನು ನಿರ್ಧರಿಸಲು ರಕ್ಷಿತಾ ಮತ್ತು ಧ್ರುವಂತ್‌ಗೆ ನೀಡಲಾಗಿದೆ .