ಬಿಗ್‌ಬಾಸ್ ಸೀಸನ್ 12ಕ್ಕೆ ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮರುಪ್ರವೇಶ ಪಡೆದಿದ್ದಾರೆ. ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ, ರಜತ್ ಮತ್ತು ಇತರ ಅತಿಥಿಗಳ ಅಹಂಕಾರದ ವರ್ತನೆಯನ್ನು ಟೀಕಿಸಿದ್ದು, ಗಿಲ್ಲಿಯಿಂದ ಅವರೆಲ್ಲರೂ ಹೇಗೆ ಮುಜುಗರಕ್ಕೊಳಗಾದರು ಎಂದು ವಿವರಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 12ಕ್ಕೆ ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮತ್ತೊಮ್ಮೆ ಎಂಟ್ರಿ ಪಡೆದುಕೊಂಡಿದ್ದಾರೆ. ಸೀಸನ್ 11ರಲ್ಲಿಯೂ ರಜತ್ ವೈಲ್ಡ್ ಕಾರ್ಡ್ ಆಗಿದ್ದರು.9ನೇ ವಾರಕ್ಕೆ ಅತಿಥಿಗಳಾಗಿ ಬಂದಿದ್ದ ಐವರ ಪೈಕಿ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಇದೀಗ ಸ್ಪರ್ಧಿಗಳಾಗಿದ್ದಾರೆ. ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ, ಸೀಸನ್ 12ರ ಬಗ್ಗೆ ಮಾತನಾಡಿದ್ದಾರೆ.
25
ಅಹಂಕಾರ ಮತ್ತ ಜಂಬ
ಐವರು ಅತಿಥಿಗಳು ತುಂಬಾ ಅಹಂಕಾರ ಮತ್ತ ಜಂಬದಿಂದ ಬಂದರು. ನಾವು ಸೀನಿಯರ್ಸ್ ಏನು ಬೇಕಾದ್ರು ಮಾಡಬಹುದು. ಮೊದಲೇ ಸೀಸನ್ ನೋಡಿದ್ದರಿಂದ ಗಿಲ್ಲಿ ಅವರನ್ನು Ragging ಮಾಡೋಕೆ ಮುಂದಾದರು. ಆದ್ರೆ ಗಿಲ್ಲಿ ಅವರಿಂದಲೇ ಇವರೆಲ್ಲಾ Rag ಅದ್ರು. ರಜತ್ ಕೋಲು ಕೊಟ್ಟು ಹೊಡೆಸಿಕೊಂಡಂತಾಗಿದೆ. ರಜತ್‌ಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಪ್ರಶಾಂತ್ ಸಂಬರಗಿ ವ್ಯಂಗ್ಯ ಮಾಡಿದರು.
35
ಕಮೆಂಟ್ ಆಫ್
ಜೋರು ಧ್ವನಿ ಇದೆ ಅಂತಾ ಆ ವೇದಿಕೆಯನ್ನು ಬಳಸಿಕೊಳ್ಳಲಿಲ್ಲ. ಧರ್ಮಸ್ಥಳದ ವಿಚಾರದಲ್ಲಿ ರಜತ್ ಪೇಮೆಂಟ್ ತೆಗೆದುಕೊಂಡು ಮಾತನಾಡಿದ್ದರು. ಧರ್ಮಸ್ಥಳ ಚರ್ಚೆ ವೇಳೆ ಮತ್ತು ಇದೀಗ ರಜತ್ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕಮೆಂಟ್ ಆಫ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ರಜತ್ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ರಜತ್ ಮಾಡುವ ಕಸಬು ಏನು? ಏನ್ ಮಾಡ್ತಾನೆ ಎಂದು ತಿಳಿದುಕೊಳ್ಳುತ್ತಿದ್ದೇನೆ. ಗಿಲ್ಲಿ ಕೈಯಲ್ಲಿ ಯಾಕಿಂಗೆ ಹೊಡೆಸಿಕೊಂಡನು. ಚಪ್ಪಲಿಯನ್ನು ಶಾಲ್‌ನಲ್ಲಿಟ್ಟು ಗಿಲ್ಲಿ ಹೊಡೆದ. ಐವರು ಅತಿಥಿಗಳ ರೀತಿಯಲ್ಲಿ ವರ್ತಿಸಬೇಕಿತ್ತು. ಆ ಮನೆಯಲ್ಲಿದ್ದುಕೊಂಡು ಗಿಲ್ಲಿ ಬದುಕುತ್ತಿದ್ದಾನೆ ಎಂದರು.
ನೀವು ಆಚೆಯಿಂದ ಬಂದು ಆ ಕಾರ್ಯಕ್ರಮದ ಗೌರವವನ್ನು ಹೆಚ್ಚು ಮಾಡಬೇಕಿತ್ತು. ಆದ್ರೆ ನೀವು ಗಿಲ್ಲಿಯನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡಲಾಯ್ತು ಎಂದು ಪ್ರಶಾಂತ್ ಸಂಬರಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಗೆಸ್ಟ್ ಆಗಿ ನಡೆದುಕೊಳ್ಳಬೇಕಿತ್ತು. ಗಿಲ್ಲಿ ಬಂದವರನ್ನು ಅತಿಥಿ ದೇವೋಭವ ರೀತಿಯಲ್ಲಿ ಸೇವೆ ನೀಡಬೇಕಿತ್ತು. ಅತಿಥಿಗಳು ಅಲ್ಲಿನ ಸಿಬ್ಬಂದಿಯನ್ನು ಸೇವಕರನ್ನಾಗಿ ನೋಡಲು ಆರಂಭಿಸಿದಾಗ ಟಾಸ್ಕ್ ಹಳ್ಳ ಹಿಡಿಯಿತು ಎಂದು ಹೇಳಿದರು.