ಅರೆರೆ ಇದೇನಿದು Karna Serial ಟ್ವಿಸ್ಟ್​? ಫ್ಯಾನ್ಸ್​ ಆಸೆಯಂತೆ ನಿತ್ಯಾ-ನಿಧಿ ಇಬ್ರನ್ನೂ ಮದ್ವೆಯಾಗಿ ಬಿಟ್ನಾ?

Published : Nov 14, 2025, 09:39 PM IST

'ಕರ್ಣ' ಧಾರಾವಾಹಿಯಲ್ಲಿ ನಿಧಿ ಮತ್ತು ನಿತ್ಯಾ ಇಬ್ಬರನ್ನೂ ನಿಭಾಯಿಸಲು ಕರ್ಣ ಹೆಣಗಾಡುತ್ತಿದ್ದಾನೆ. ಇದರ ನಡುವೆಯೇ ಇಬ್ಬರ ಜೊತೆಗೂ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದು ತುಮಕೂರಿನಲ್ಲಿ ನಡೆದ 'ಸೀರಿಯಲ್ ಸಂತೆ' ಕಾರ್ಯಕ್ರಮದ ಝಲಕ್ ಆಗಿದೆ.

PREV
16
ಕರ್ಣನ ಹರಸಾಹಸ

ಕರ್ಣ ಸೀರಿಯಲ್​ನಲ್ಲಿ ಸದ್ಯ ನಿಧಿ ಮತ್ತು ನಿತ್ಯಾ ಇಬ್ಬರನ್ನೂ ಖುಷಿಯಾಗಿ ಇಡಲು ಕರ್ಣ ಹರಸಾಹಸ ಪಡುತ್ತಿದ್ದಾನೆ. ಅತ್ತ ನಿತ್ಯಾಳಿಗೆ ನ್ಯಾಯ ಒದಗಿಸಲು ಹೋಗಿ ನಿಧಿಯಿಂದ ದೂರವಾಗೋ ಸಾಧ್ಯತೆ ಇದ್ದರೆ, ನಿಧಿಯ ಹತ್ತಿರ ಹೋದರೆ ನಿತ್ಯಾಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳೋದು ಕಷ್ಟ.

26
ಮಗುವಿನ ಅಪ್ಪ

ಸದ್ಯ ಹೀಗಿದೆ ಪರಿಸ್ಥಿತಿ. ನಿಧಿ ತನ್ನ ಮಗುವನ್ನು ತೆಗೆಸಲು ಹೋದಾಗ, ನಾನೇ ಅದಕ್ಕೆ ಅಪ್ಪ ಆಗುತ್ತೇನೆ ಎಂದು ಕರ್ಣ ಮಗುವನ್ನು ಉಳಿಸಿಕೊಳ್ಳಲು ಹೇಳಿದ್ದಾನೆ. ಮಗುವಿನ ತಂದೆ ನಾನಾಗುತ್ತೇನೆ ಎಂದಿದ್ದಾನೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಮಗು ಕಷ್ಟವಾಗತ್ತೆ ಎಂದರೂ ಕೇಳದ ಕರ್ಣ ಮಗುವನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾನೆ.

36
ನಿಧಿಗೂ ಮ್ಯಾನೇಜ್​

ಅದೇ ಇನ್ನೊಂದೆಡೆ, ನಿಧಿಗೂ ನೋವಾಗದಂತೆ ನೋಡಿಕೊಳ್ಳುತ್ತಿದ್ದಾನೆ. ಆಕೆಗೆ ಸಂಕಟವಾದರೆ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ನಿಧಿಯ ವಿಷಯ ನಿತ್ಯಾಗೆ ಇನ್ನೂ ಗೊತ್ತಿಲ್ಲ.

46
ಕರ್ಣನ ರೊಮಾನ್ಸ್​

ಇವುಗಳ ನಡುವೆಯೇ, ನಿತ್ಯಾ ಮತ್ತು ನಿಧಿಯ ಇಬ್ಬರ ಜೊತೆಯೂ ಕರ್ಣ ರೊಮಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಇಬ್ಬರ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾನೆ ಕರ್ಣ.

56
ಸೀರಿಯಲ್​ ಸಂತೆ

ಅಷ್ಟಕ್ಕೂ ಇದು ಸೀರಿಯಲ್​ ಅಲ್ಲ, ನಿಜ ಜೀವನವಂತೂ ಅಲ್ಲದೇ ಅಲ್ಲ. ಈ ಸೀರಿಯಲ್​ ಸಂತೆ ತುಮಕೂರಿನಲ್ಲಿ ನಡೆದಿದೆ. ಇದರ ಪ್ರೊಮೋ ಬಿಡುಗಡೆಯಾಗಿದೆ.

66
ನಿತ್ಯಾ ಮತ್ತು ನಿಧಿ

ನಿತ್ಯಾ ಮತ್ತು ನಿಧಿ ಇಬ್ಬರೂ ಸಕತ್​ ಡಾನ್ಸ್​ ಮಾಡಿದ್ದು, ಅವರ ಜೊತೆ ಕರ್ಣನೂ ಜೊತೆಯಾಗಿದ್ದಾನೆ. ಇದರ ಪ್ರೊಮೋ ಅನ್ನು ಜೀ ಕನ್ನಡ ಹಂಚಿಕೊಂಡಿದೆ.

Read more Photos on
click me!

Recommended Stories