BBK ಮಲ್ಲಮ್ಮಳನ್ನು ಬಳಸ್ಕೊಂಡು ದುಡ್ಡು ಮಾಡ್ತಿದೀಯಾ ಅಂತ ಕನ್ನಡದ ಈ ಧಾರಾವಾಹಿ ನಟನ ಮೇಲೆ ಆರೋಪ ಬಂದಿತ್ತು!

Published : Oct 05, 2025, 05:09 PM IST

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಲ್ಲಮ್ಮ ಸ್ಪರ್ಧಿ. ಇದಕ್ಕೂ ಮೊದಲು ಅವರು ಫೇಮಸ್‌ ಆಗುವಂತೆ ಮಾಡಿದ್ದು ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಹೀರೋ ಮನೋಜ್‌ ಕುಮಾರ್‌. 

PREV
15
ಪಾಸಿಟಿವ್‌ ಉತ್ತರ

ಮಲ್ಲಮ್ಮ ಅವರು ಬ್ಯೂಟಿಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ನಟ ಮನೋಜ್‌ ಕುಮಾರ್‌ ಅಲ್ಲಿಗೆ ಭೇಟಿ ನೀಡಿದಾಗ ಮಲ್ಲಮ್ಮ ಮಾತುಗಳು ಅವರಿಗೆ ಇಷ್ಟವಾಗಿ ವಿಡಿಯೋಗಳನ್ನು ಮಾಡುತ್ತಿದ್ದರು. ಆ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದಾಗ ಸಾಕಷ್ಟು ಪಾಸಿಟಿವ್‌ ಉತ್ತರ ಸಿಕ್ಕಿತ್ತು.

25
ಪಾಸಿಟಿವ್‌ ರೆಸ್ಪಾನ್ಸ್‌

ಮಲ್ಲಮ್ಮ ವಿಡಿಯೋಗಳಿಗೆ ಪಾಸಿಟಿವ್‌ ಉತ್ತರ ಸಿಕ್ಕಿದಾಗ, ಮನೋಜ್‌ ಅವರು ಮಲ್ಲಮ್ಮ ಟಾಕ್ಸ್‌ ಎಂದು ಇನ್‌ಸ್ಟಾಗ್ರಾಮ್‌ ಅಕೌಂಟ್‌ ಆರಂಭಿಸಿದ್ದಾರೆ. ಅಲ್ಲಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲು ಆರಂಭಿಸಿದರು. ಮಲ್ಲಮ್ಮರಿಗೆ ಕೆಲವೊಮ್ಮೆ ತಾನು ಮಾತಾಡಿರೋದು ವಿಡಿಯೋ ಆಗ್ತಿದೆ ಎನ್ನೋದು ಕೂಡ ಗೊತ್ತಿರೋದಿಲ್ಲ.

35
ದುಡ್ಡು ಮಾಡ್ತಿದ್ದಾರೆ

ಮಲ್ಲಮ್ಮ ಅವರ ಹೆಸರಿನಲ್ಲಿ ಯುಟ್ಯೂಬ್‌ ಚಾನೆಲ್‌ ಕೂಡ ಇದೆ. ಮಲ್ಲಮ್ಮ ಹೆಸರಿನಲ್ಲಿ ಮನೋಜ್‌ ಕುಮಾರ್‌ ಅವರು ದುಡ್ಡು ಮಾಡ್ತಾರೆ ಎಂದು ಕೆಲವರು ನೆಗೆಟಿವ್‌ ಮಾತುಗಳನ್ನಾಡಿದ್ದರು. ಇದು ಮನೋಜ್‌ಗೆ ಬೇಸರ ತಂದಿತ್ತು.

45
ನೆಗೆಟಿವ್‌ ಕಾಮೆಂಟ್‌ ಡಿಲಿಟ್‌

ಮಲ್ಲಮ್ಮ ಪೇಜ್‌ಗೆ ಒಂದೇ ಒಂದು ಕಾಮೆಂಟ್‌ ಬಂದರೂ ಕೂಡ, ಮನೋಜ್‌ ಅದನ್ನು ಡಿಲಿಟ್‌ ಮಾಡುತ್ತಾರಂತೆ. ಹೌದು, ಮಲ್ಲಮ್ಮ ಪೇಜ್‌ನಲ್ಲಿ ನೆಗೆಟಿವ್‌ ವಿಷಯಗಳು ಇರೋದು ಬೇಡ ಎನ್ನೋದು ಅವರ ಆಶಯ.

55
ಮಲ್ಲಮ್ಮ ಹೇಳೋದು ಏನು?

ಮಲ್ಲಮ್ಮ ಅವರು ಮನೋಜ್‌ಗೆ ಜನರು ಮಾತಾಡುತ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರಂರೆ. ಮನೋಜ್‌ ಕಂಡರೆ ಮಲ್ಲಮ್ಮಗೆ ತುಂಬ ಇಷ್ಟ. ಮಲ್ಲಮ್ಮ ಕಂಡರೆ ಮನೋಜ್‌ಗೆ ತುಂಬ ಇಷ್ಟ.

Read more Photos on
click me!

Recommended Stories