Bigg Bossನಲ್ಲಿ ಟ್ವಿಸ್ಟೋ ಟ್ವಿಸ್ಟ್​: ವೈಲ್ಡ್​ ಕಾರ್ಡ್​ ಸುದ್ದಿಯ ನಡುವೆಯೇ ಸೀರಿಯಲ್​ ತಾರೆಯರ ಎಂಟ್ರಿ!

Published : Oct 05, 2025, 04:50 PM IST

ಕಲರ್ಸ್ ಕನ್ನಡದಲ್ಲಿ 'ಗಂಧದ ಗುಡಿ' ಎಂಬ ಹೊಸ ಧಾರಾವಾಹಿ ಆರಂಭವಾಗಲಿದ್ದು,  ಅದರ ತಾರೆಯರು ಬಿಗ್ ಬಾಸ್ ವೇದಿಕೆಗೆ ಆಗಮಿಸಿದ್ದಾರೆ. ಭವಿಷ್ ಗೌಡ ಮತ್ತು ಸಂಜನಾ ಬುರ್ಲಿ ನಟನೆಯದ್ದಯ ಈ ಸೀರಿಯಲ್. ಇವರು ಬಿಗ್​ಬಾಸ್​​ ಮನೆಯಲ್ಲಿ ಕಾಣಿಸಿಕೊಂಡಿದ್ದು ಏಕೆ? ಇಲ್ಲಿದೆ ವಿವರ… 

PREV
16
ವೈಲ್ಡ್​ ಕಾರ್ಡ್​ ಎಂಟ್ರಿ

ಬಿಗ್​ಬಾಸ್​ ಸೀಸನ್​ 12 (Bigg Boss Season 12) ನಲ್ಲಿ ಸದ್ಯ ವೈಲ್ಡ್​ ಕಾರ್ಡ್​ ಎಂಟ್ರಿ (wild card entry) ಸದ್ದು ಮಾಡುತ್ತಿದೆ. ಹಲವಾರು ಸ್ಪರ್ಧಿಗಳನ್ನು ಒಟ್ಟಿಗೇ ಕಳುಹಿಸಿ, ಮತ್ತೆ ಕೆಲವರನ್ನು ಸೇರಿಸಿಕೊಳ್ತಾರೆ ಎನ್ನುವ ಸದ್ದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಾಗಲೇ ಮೊದಲ ದಿನವೇ ಮನೆಯಿಂದ ಹೊರಕ್ಕೆ ಕಳುಹಿಸಲಾಗಿದ್ದ ರಕ್ಷಿತಾ ಶೆಟ್ಟಿ (Bigg Boss Rakshita Shetty) ಅವರನ್ನು ಪುನಃ ಕರೆಸಿಕೊಳ್ಳಲಾಗಿದೆ.

26
ಸೀರಿಯಲ್​​ ತಾರೆಯರ ಎಂಟ್ರಿ

ಇದರ ನಡುವೆಯೇ ಇದೀಗ ಸೀರಿಯಲ್​ ತಾರೆಯರು ಎಂಟ್ರಿ ಕೊಟ್ಟು ಟ್ವಿಸ್ಟ್​ ಕೊಟ್ಟಿದ್ದಾರೆ. ಈ ಬಗ್ಗೆ ಸುದೀಪ್​ ಅವರು ಕೂಡ ಮಾತನಾಡಿದ್ದಾರೆ. ಹಾಗಿದ್ದರೆ ಈ ಸೀರಿಯಲ್​ ತಾರೆಯರು ಯಾರು ಮತ್ತು ಅವರು ಎಂಟ್ರಿ ಕೊಟ್ಟಿದ್ದು ಯಾಕೆ ಎನ್ನುವ ವಿಷಯ ಕೂಡ ಕುತೂಹಲವಾಗಿದೆ.

36
ಗಂಧದ ಗುಡಿ ಸೀರಿಯಲ್​

ನಾಳೆಯಿಂದ ಕಲರ್ಸ್​ ಕನ್ನಡದಲ್ಲಿ ಗಂಧದ ಗುಡಿ (Gandhada Gudi) ಎನ್ನುವ ಸೀರಿಯಲ್​ ಶುರುವಾಗಲಿದೆ. ಅದರ ಬಗ್ಗೆ ಪ್ರಮೋಷನ್​ಗಾಗಿ ಈ ಸೀರಿಯಲ್​​ ತಾರೆಯರು ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಣ್ತಮ್ಮಂದಿರಿಂದ ಸೂಪರ್​ ಡಾನ್ಸ್​ ಕೂಡ ನಡೆಯಲಿದೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ.

46
ಸೀರಿಯಲ್​ನಿಂದ ಹೊರಬಂದ ನಟ-ನಟಿ

ಇದರಲ್ಲಿ ನಾಯಕನಾಗಿ ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ವಿಶ್ವನ ಪಾತ್ರದಿಂದ ಹೊರಬಂದ ಭವಿಷ್‌ ಗೌಡ (Bhavish Gowda) ಹಾಗೂ ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್​​ನ ಸ್ನೇಹಾ ಪಾತ್ರದಿಂದ ಹೊರಬಂದಿದ್ದ ಸಂಜನಾ ಬುರ್ಲಿ (Sanjana Burli) ಕಾಣಿಸಿಕೊಳ್ಳಲಿದ್ದಾರೆ.

56
ತೊಂದರೆ ಅರಿಯದ ನಾಯಕಿ

ನಾಯಕಿ ತೊಂದರೆ ಎಂದರೆ ಏನು ಎನ್ನುವುದನ್ನೇ ಕಾಣದ ಹುಡುಗಿ. ಆಕೆಯ ಮದುವೆ ಅಚಾನಕ್​ ಆಗಿ ನಡೆಯುತ್ತದೆ. ಆದರೆ ನಾಯಕ ತನ್ನ ಸ್ನೇಹಿತರ ಜೊತೆ ಪಾಳು ಮನೆಯಲ್ಲಿ ವಾಸವಾಗಿದ್ದಾನೆ. ಅಲ್ಲಿಗೆ ಬಂದಾಗ ನಾಯಕಿ ಶಾಕ್​ ಆಗುತ್ತಾಳೆ. ಆಕೆಯನ್ನು ಬರ ಮಾಡಿಕೊಳ್ಳುವುದು ಕೂಡ ಈ ಗಂಡು ಮಕ್ಕಳೇ. ಆ ಮನೆಯಲ್ಲಿನ ಅವ್ಯವಸ್ಥೆ ನೋಡಿ ನಾಯಕಿ ರೋಸಿ ಹೋಗುತ್ತಾಳೆ. ಯಾವ ವ್ಯವಸ್ಥೆಯೂ ಸರಿ ಇಲ್ಲ. ಯಾವ ವಸ್ತುಗಳೂ ಸರಿ ಇಲ್ಲ. ಎಲ್ಲವೂ ಹಾಳು. ಮನೆಯ ಬಾಗಿಲಿನಿಂದ ಹಿಡಿದು ಅವರ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳೂ ಮುಟ್ಟಿದರೆ ಬಿದ್ದು ಹೋಗುವ ಸ್ಥಿತಿಯಲ್ಲಿ ಇವೆ.

66
ಕುತೂಹಲದ ಕಥನ

ಇದನ್ನು ನೋಡಿ ನಾಯಕಿಗೆ ಸುಸ್ತಾಗಿ ಹೋಗುತ್ತದೆ. ಇಡೀ ಮನೆ ಬದಲಿಸಬೇಕು ಎಂದು ಗಂಡನಿಗೆ ಹೇಳುತ್ತಾಳೆ. ಆ ಮನೆಯನ್ನು ಆಕೆ ಗಂಧದ ಗುಡಿಯಾಗಿ ಹೇಗೆ ಬದಲಿಸುತ್ತಾಳೆ ಎನ್ನುವುದು ಸೀರಿಯಲ್​ ಸ್ಟೋರಿ. ಕಷ್ಟವೇ ಅರಿಯದ ಹೆಣ್ಣುಮಗಳೊಬ್ಬಳು ಇಂಥ ಮನೆಯನ್ನು ಬದಲಿಸುವ ಕುತೂಹಲದ ಕಥನ ಇದು ಒಳಗೊಂಡಿದೆ.

Read more Photos on
click me!

Recommended Stories