Bigg Boss Jahnavi ex-husband interview: ಬಿಗ್‌ಬಾಸ್ ಮನೆಯಲ್ಲಿ ಜಾಹ್ನವಿ ನೀಡಿದ ಡಿವೋರ್ಸ್ ಹೇಳಿಕೆಗೆ ಅವರ ಮಾಜಿ ಪತಿ ಕಾರ್ತಿಕ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಜಾಹ್ನವಿಯ ಆರೋಪಗಳಿಂದ ತನ್ನ ಹೊಸ ಸಂಸಾರಕ್ಕೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿಯಾಗಿರುವ ಜಾಹ್ನವಿ ಅವರ ಮಾಜಿ ಪತಿ ಕಾರ್ತಿಕ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ಯಾಕಾಯ್ತು ಎಂಬುದರ ಬಗ್ಗೆ ಜಾಹ್ನವಿ ಮಾತನಾಡಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ
25
ಮೊದಲ ಬಾರಿಗೆ ಪ್ರತಿಕ್ರಿಯೆ
ಜಾಹ್ನವಿ ಮಾಡಿರುವ ಆರೋಪಗಳಿಗೆ ಕಾರ್ತಿಕ್ ಮಹಡಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರದ್ದು ಡಿವೋರ್ಸ್ ಆಗಿದೆ. ಜಾಹ್ನವಿ ನೀಡುತ್ತಿರುವ ಹೇಳಿಕೆಗಳಿಂದ ಡಿಸ್ಟರ್ಬ್ ಆಗುತ್ತಿದೆ. ಈಗ ನನಗೂ ಒಂದು ಸಂಸಾರವಿದೆ, 10 ತಿಂಗಳ ಮಗಳಿದ್ದಾಳೆ. ಪದೇ ಪದೇ ಇಂತಹ ಹೇಳಿಕೆಗಳಿಂದ ಮನಸ್ಸಿಗೆ ಬೇಸರವಾಗುತ್ತಿದೆ ಎಂದು ಹೇಳಿದರು.
35
ಅವಮಾನ ಮಾಡಿದ್ದಾರೆ
ನಮ್ಮ ತಂದೆಗೆ ನನ್ನ ಮಗ ಅಂದ್ರೆ ತುಂಬಾ ಇಷ್ಟ. ಡಿವೋರ್ಸ್ ಆದ್ಮೇಲೆಯೂ ಮೊಮ್ಮಗನನ್ನು ನೋಡಲು ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು. ನಮ್ಮ ತಂದೆಗೆ 72 ವರ್ಷ ವಯಸ್ಸು, ಅವರನ್ನು ಒಳಗಡೆಯೂ ಕರೆಯದೇ ಹೊರಗೆ ನಿಲ್ಲಿಸಿಯೇ ಅವಮಾನ ಮಾಡಿದ್ದಾರೆ. ಮೊಮ್ಮಗನ ಮುಖವನ್ನು ಸಹ ತೋರಿಸಿಲ್ಲ. ನಮ್ಮ ತಂದೆ ಮೊಮ್ಮಗನನ್ನು ನೋಡಬೇಕು ಅಂತಿದ್ದು, ಕಳುಹಿಸು ಅಂದರೂ ಕಳುಹಿಸಲಿಲ್ಲ. ಏಪ್ರಿಲ್‌ನಲ್ಲಿ ತಂದೆಯ ಸಾವಾದ್ರೂ ಜಾಹ್ನವಿ ಬರಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ನಮ್ಮ ತಾಯಿಗೂ ವಯಸ್ಸಾಗಿದೆ. ಮಾಧ್ಯಮ ಮತ್ತು ರಿಯಾಲಿಟಿ ಶೋಗಳಲ್ಲಿ ಈ ರೀತಿ ಹೇಳಿಕೆ ನೀಡುತ್ತಿರೋದರಿಂದ ನಮ್ಮ ಮನೆತನದ ಗೌರವಕ್ಕೆ ಧಕ್ಕೆಯನ್ನುಂಡು ಮಾಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಜಾಹ್ನವಿ ಹೇಳಿಕೆಗಳಿಂದ ನನ್ನ ಮತ್ತು ಹೆಂಡ್ತಿ ಕುಟುಂಬ ತುಂಬಾನೇ ಸಫರ್ ಆಗುತ್ತಿದೆ ಎಂದು ಕಾರ್ತಿಕ್ ಬೇಸರ ವ್ಯಕ್ತಪಡಿಸಿದರು.
ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡು ಒಂದು ವರ್ಷ ಆಗಿದೆ. ಆದರೂ ನನ್ನ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ತಪ್ಪು ಹೇಳಿಕೆಯನ್ನು ನೀಡುತ್ತಿರೋದನ್ನು ಗಮನಿಸಿದ್ರೆ ಜಾಹ್ನವಿಯದ್ದು ವಿಕೃತ ಮನಸ್ಸು ಎಂದು ಅರ್ಥವಾಗುತ್ತದೆ ಎಂದು ಕಾರ್ತಿಕ್ ಮೊದಲ ಪತ್ನಿಯ ಬಗ್ಗೆ ಕಿಡಿಕಾರಿದರು. ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಂತಿಷ್ಟು ಹಣ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಆ ಹಣವನ್ನು ಜಾಹ್ನವಿ ಖಾತೆಗೆ ಹಾಕುತ್ತಿದ್ದೇನೆ. ಏನೇ ಆಗಲಿ ಅವನು ನನ್ನ ಮಗ ಎಂದು ಹೇಳಿದರು.