ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda

Published : Nov 26, 2025, 12:30 PM IST

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಪ್ರವೇಶಿಸಿದ್ದ ರಿಷಾ ಗೌಡ ಇದೀಗ ಹೊರಬಂದಿದ್ದಾರೆ. ಮನೆಯಿಂದ ಹೊರಬಂದ ನಂತರ, ಮುಂದಿನ ವಾರ ಸ್ಪಂದನಾ ಎಲಿಮಿನೇಟ್ ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದು, ತಮ್ಮ ವಿಭಿನ್ನ ಎಲಿಮಿನೇಷನ್​ ಬಗ್ಗೆಯೂ ಮಾತನಾಡಿದ್ದಾರೆ.

PREV
17
ಹೊರಕ್ಕೆ ಬಂದ ರಿಷಾ ಗೌಡ

ಬಿಗ್​ಬಾಸ್​ನಿಂದ (Bigg Boss 12 Kannada) ಈಗಲೇ ರಿಷಾ ಗೌಡ ಹೊರಕ್ಕೆ ಬಂದಿದ್ದಾರೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಎಂಟರ್​ ಆಗಿದ್ದ ರಿಷಾ ಗೌಡ ಅರ್ಧದಲ್ಲಿಯೇ ವಾಪಸ್​ ಆಗಿದ್ದಾರೆ.

27
ಬಿಗ್​ಬಾಸ್​ ಜರ್ನಿ

ತಮ್ಮ ಬಿಗ್​ಬಾಸ್​​ ಜರ್ನಿ ಕುರಿತು ಹಲವು ಮಾಧ್ಯಮಗಳಲ್ಲಿ ಅವರು ಮಾತನಾಡುತ್ತಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ತಮ್ಮ ಅನುಭವಗಳನ್ನು ತೆರೆದಿಡುತ್ತಿದ್ದಾರೆ.

37
ರಿಷಾ ಗೌಡ ರಿವೀಲ್​

ಇದೀಗ ಅವರ ಮುಂದಿನ ವಾರ ಮನೆಯಿಂದ ಹೊರಕ್ಕೆ ಬರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಇದಾಗಲೇ ರಿಷಾ ಗೌಡ ಟಾಪ್​ 5 ಸ್ಪರ್ಧಿಗಳು ಯಾರು, ವಿನ್ನರ್​ ಯಾರು ಎನ್ನುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದೇ ರೀತಿ ಈಗ ಮುಂದಿನ ವಾರ ಹೊರಕ್ಕೆ ಬರುವ ಸ್ಪರ್ಧಿಯ ಬಗ್ಗೆಯೂ ಹೇಳಿದ್ದಾರೆ.

47
ಮುಂದಿನ ಎಲಿಮಿನೇಷನ್​ ಯಾರು?

ರಿಷಾ ಗೌಡ (Bigg Boss Risha Gowda) ಅವರು ಮುಂದಿನ ಎಲಿಮಿನೇಷನ್​ ಬಗ್ಗೆ ಮಾತನಾಡುತ್ತಾ, ಸ್ಪಂದನಾ ಬರುತ್ತಾರೆ ಎನ್ನಿಸುತ್ತದೆ. ಈ ವಾರವೇ ಹೊರಕ್ಕೆ ಬರುತ್ತಾರೆ ಎಂದುಕೊಂಡಿದ್ದೆ. ಆಕೆ ಏನೂ ಗೇಮ್​ ಆಡುತ್ತಿಲ್ಲ. ಅವರ ಬಗ್ಗೆ ಏನೂ ದ್ವೇಷ ಇಲ್ಲ, ಆದರೆ ಬಿಗ್​ಬಾಸ್​​ ಮನೆಗೆ ಆಕೆಯ ಕಾಂಟ್ರಿಬ್ಯೂಷನ್​ ಏನೂ ಇಲ್ಲ ಎಂದಿದ್ದಾರೆ.

57
ನಾನೇ ಅವರ ಟಾರ್ಗೆಟ್​

ಇದರ ಜೊತೆ ಮಾಳು ಅವರೂ ಹೊರಕ್ಕೆ ಬರುವ ಛಾನ್ಸ್​ ಇದೆ. ಏಕೆಂದ್ರೆ ಅವರು ಕೂಡ ಸೈಲೆಂಟ್​ ಇದ್ದಾರೆ, ಆದರೆ ಈ ವಾರವೇ ಹೊರಕ್ಕೆ ಬರುವಷ್ಟು ಸೈಲೆಂಟ್​ ಇಲ್ಲ. ಮೊದಲ ದಿನದಿಂದಲೂ ಮಾಳು ನನ್ನನ್ನು ಟಾರ್ಗೆಟ್​ ಮಾಡುತ್ತಿದ್ದರು. ಪ್ರತಿಬಾರಿಯೂ ನನ್ನದೇ ಹೆಸರು ತೆಗೆದುಕೊಳ್ಳುತ್ತಿದ್ದರು ಎಂದಿದ್ದಾರೆ.

67
ರಿಷಾ ಎಲಿಮಿನೇಷನ್​ ಕುರಿತು

ಇನ್ನು ರಿಷಾ ಗೌಡ ಅವರ ಎಲಿಮಿನೇಷನ್​ ಕೂಡ ಸ್ವಲ್ಪ ಡಿಫರೆಂಟ್​ ಆಗಿ ನಡೆದಿತ್ತು. ಸಾಮಾನ್ಯವಾಗಿ ಮನೆಯಿಂದ ಯಾವುದೇ ಸ್ಪರ್ಧಿ ಎಲಿಮಿನೇಟ್ ಆದ್ರೆ ಮುಖ್ಯದ್ವಾರದಿಂದಲೇ ಕಳುಹಿಸಿ ಕೊಡುತ್ತಾನೆ. ಬಳಿಕ ವೇದಿಕೆ ಮೇಲೆ ಕರೆಸಿ ಸುದೀಪ್ ಬೀಳ್ಕೊಡುತ್ತಾರೆ. ಆದ್ರೆ ರಿಷಾ ಅವರನ್ನು ಕನ್ಫೆಷನ್ ರೂಮ್ ಮೂಲಕ ಹೊರಗೆ ಕರೆಸಿಕೊಳ್ಳಲಾಗಿತ್ತು.

77
ಕನ್ಫೇಷನ್ ರೂಮ್​

ಇದಕ್ಕೆ ಕಾರಣವೂ ಇದೆ. ಭಾನುವಾರದ ಸಂಚಿಕೆ ಕೊನೆಗೆ ಸ್ಪರ್ಧಿಗಳಿಗೆ ಗಾರ್ಡನ್ ಏರಿಯಾದಲ್ಲಿ ಟಾಸ್ಕ್ ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಯಾವುದೇ ಟಿವಿ ಇಲ್ಲದ ಕಾರಣ, ತಾತ್ಕಾಲಿಕವಾಗಿ ಮುಖ್ಯದ್ವಾರದ ಬಳಿಯಲ್ಲಿಯೇ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಆದ್ದರಿಂದ ಮುಖ್ಯದ್ವಾರ ತೆರೆಯೋದು ಸಾಧ್ಯವಾಗದೇ ಕನ್ಫೇಷನ್ ರೂಮ್​ನಿಂದ ಕಳುಹಿಸಿಕೊಡಲಾಗಿತ್ತು.

Read more Photos on
click me!

Recommended Stories