ಗಿಲ್ಲಿ ನಟನಿಂದ ಬಿಗ್ ಬಾಸ್ ಮನೆ ಮಂದಿಗೆಲ್ಲಾ ಅಂಟಿದ ರೋಗ; ಯಾರಿಗೂ ನೆಟ್ಟಗೆ ಕೂತ್ಕೋಳಕ್ಕಾಗ್ತಿಲ್ಲ!

Published : Jan 02, 2026, 04:54 PM IST

ಬಿಗ್ ಬಾಸ್ ಮನೆ ಅಂದಮೇಲೆ ಅಲ್ಲಿ ಕಿತ್ತಾಟ, ಪ್ರೀತಿ, ಕುತಂತ್ರಗಳ ಜೊತೆಗೆ ವಿಚಿತ್ರ ವರ್ತನೆಗಳೂ ಸುದ್ದಿಯಾಗುವುದು ಸಾಮಾನ್ಯ. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ 'ಸಹವಾಸ ದೋಷ' ಎಂಬ ಪೋಸ್ಟರ್ ಒಂದು ಭಾರಿ ವೈರಲ್ ಆಗುತ್ತಿದೆ.

PREV
16
ಸಹವಾಸ ದೋಷ

ಬಿಗ್ ಬಾಸ್ ಮನೆ ಅಂದಮೇಲೆ ಅಲ್ಲಿ ಕಿತ್ತಾಟ, ಪ್ರೀತಿ, ಕುತಂತ್ರಗಳ ಜೊತೆಗೆ ವಿಚಿತ್ರ ವರ್ತನೆಗಳೂ ಸುದ್ದಿಯಾಗುವುದು ಸಾಮಾನ್ಯ. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ'ಸಹವಾಸ ದೋಷ' ಎಂಬ ಪೋಸ್ಟರ್ ಒಂದು ಭಾರಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಮತ್ಯಾರೂ ಅಲ್ಲ, 'ಗಿಲ್ಲಿ' ಖ್ಯಾತಿಯ ನಟ ಮತ್ತು ಅವರ ವಿಚಿತ್ರವಾದ ಕುಳಿತುಕೊಳ್ಳುವ ಭಂಗಿ!

26
ಮಲಗಿಕೊಂಡು ಮಾತನಾಡುತ್ತಿರುವ ರಘು

ಬಿಗ್ ಬಾಸ್ ಮನೆಯ ಮಂದಿಗೆ ಇದೀಗ ಗಿಲ್ಲಿ ನಟನಿಂದ ಸಹವಾಸ ದೋಷ ಬಂದಿದೆ ಎಂಬ ಪೋಸ್ಟರ್ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟರ್ ನೋಡಿದ ಅನೇಕ ನೆಟ್ಟಿಗರು ಕೂಡ ಹೌದು, ಇದು ಸಹವಾಸ ದೋಷವೇ ಸರಿ ಎಂದು ತಲೆ ಅಲ್ಲಾಡಿಸುತ್ತಾ ಹ್ಹೂ...ಗುಟ್ಟಿದ್ದಾರೆ.

36
ಗಿಲ್ಲಿ ನಟ

ಬಿಗ್ ಬಾಸ್ ಮನೆಯಲ್ಲಿ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಇಲ್ಲದವನಂತೆ ಯಾವಾಗಲೂ ಯಾವುದಕ್ಕಾದರೂ ಒರಗಿಕೊಂಡೇ ಕುಳಿತುಕೊಳ್ಳುವ, ಹೆಚ್ಚಾಗಿ ಮಲಗಿಕೊಂಡು ಮಾತನಾಡುವಂತಹ ಸ್ವಭಾವ ಹೊಂದಿರುವ ವ್ಯಕ್ತಿ ಎಂದರೆ ಅದು ಗಿಲ್ಲಿ ನಟ. ಹೀಗಾಗಿ, ಅಶ್ವಿನಿ ಅವರಿಗೆ ಹಲ್ ಸೆಟ್ ಹಾಕೊಂಡಿರೋದು, ಉದ್ದ ಕೂದಲಿಗೆ ವಿಗ್ ಹಾಕೊಂಡಿರೋದು ಎಂದು ರೇಗಿಸಿದಾಗಲೆಲ್ಲಾ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಇಲ್ಲದವನೇ ಎಂದು ಬೈಯುತ್ತಾರೆ.

46
ಕಾವ್ಯಾ

ಹೀಗೆ ಮಾತನಾಡುವುದಕ್ಕೆ ಕಾರಣ ಗಿಲ್ಲಿ ನಟನಿಗೆ ಯಾವಾಗಲೂ ಒರಗಿಕೊಂಡು ಕುಳಿತೇ ಅಭ್ಯಾಸವಾಗಿದೆ. ನಾಲ್ಕೈದು ಜನರು ಒಟ್ಟಿಗೆ ಕುಳಿತುಕೊಂಡು ಮಾತನಾಡುವಾಗಲೂ ಗಿಲ್ಲಿ ನಟ ಅಲ್ಲಿದ್ದರೆ, ಸ್ವಲ್ಪ ಕಾಲನ್ನು ಉದ್ದಕ್ಕೆ ಚಾಚಿಕೊಂಡು ಅಡ್ಡಕ್ಕೆ ಒರಗಿಕೊಂಡು ಅವರೊಂದಿಗೆ ಮಾತನಾಡುತ್ತಾನೆ.

56
ಸ್ಪಂದನಾ

ಇದೀಗ ಗಿಲ್ಲಿ ನಟನ ಸಹವಾಸದ ದೋಷದಿಂದ ಬಿಗ್ ಬಾಸ್ ಮನೆಯ ಇತರೆ ಸ್ಪರ್ಧಿಗಳು ಕೂಡ ಮಲಗಿಕೊಂಡೇ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನ ಸಹವಾಸದಿಂದ ಬಾಡಿ ಬಿಲ್ಡರ್ ಮ್ಯೂಟೆಂಟ್ ರಘು, ನಟಿಯರಾದ ಕಾವ್ಯ ಶೈವ ಹಾಗೂ ಸ್ಪಂದನಾ ಅವರು ಮಲಗಿಕೊಂಡು ಮಾತನಾಡುವುದನ್ನು ವೀಕ್ಷಕರು ಗಮನಿಸಿದ್ದಾರೆ.

66
ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ

ಈ ಬಗ್ಗೆ ನೆಟ್ಟಿಗರು ಮಲಗಿರುವ ಎಲ್ಲ ಸ್ಪರ್ಧಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇದು ಸಹವಾಸ ದೋಷವೆಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಮತ್ತೊಬ್ಬರು ಯೂಟೂಬರ್ ರಕ್ಷಿತಾ ಕೂಡ ಮಲಗಿಕೊಂಡು ಮಾತನಾಡಿವಂತಹ ಫೋಟೋ ಶೇರ್ ಮಾಡಿಕೊಂಡು, ಮತ್ತೊಬ್ಬ ಕ್ಯಾಂಡಿಡೇಟ್ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ, ಬೆನ್ನು ಮೂಳೆ ಇಲ್ಲದವನು ಎಂದು ಬೈಯುತ್ತಿದ್ದ ಅಶ್ವಿನಿ ಗೌಡ ಕೂಡ ಧ್ರುವಂತ್ ಜೊತೆಗೆ ಮಲಗಿಕೊಂಡು ಮಾತನಾಡುವ ದೃಶ್ಯಗಳು ಕೂಡ ವೈರಲ್ ಆಗುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories