BBK 12: ನನ್ನ ಹಣೆಬರಹ ಸರಿ ಇಲ್ಲ, ಕಿಚ್ಚ ಸುದೀಪ್‌ ಅವ್ರು ಉಗಿದು ಉಪ್ಪಿನಕಾಯಿ ಹಾಕ್ತಾರೆ: ಗಿಲ್ಲಿ ನಟ

Published : Jan 02, 2026, 04:38 PM IST

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಾಸ್ಕ್‌ ಆಡೋಕೆ ಬರೋದಿಲ್ಲ ಎಂಬ ಆರೋಪದ ಮಧ್ಯೆ ಗಿಲ್ಲಿ ನಟ ಅವರು ಅಶ್ವಿನಿ ಗೌಡ ವಿರುದ್ಧ ಟಾಸ್ಕ್‌ ಆಡಿ ಕ್ಯಾಪ್ಟನ್‌ ಆದರು. ಈಗ ಕಿಚ್ಚ ಸುದೀಪ್‌ ಅವರು ಬೈತಾರೆ ಎಂದು ಸಹಸ್ಪರ್ಧಿಗಳ ಜೊತೆ ಚರ್ಚೆ ಮಾಡಿದ್ದಾರೆ. ಹಾಗಾದರೆ ಮಾಡಿದ ತಪ್ಪೇನು? 

PREV
15
ಕೆಲಸವನ್ನೇ ಮಾಡದ ಗಿಲ್ಲಿ ನಟ

ಕ್ಯಾಪ್ಟನ್‌ ಆದ ಗಿಲ್ಲಿ ನಟ ಅವರು ಉಳಿದವರಿಗೆ ಕೆಲಸ ಮಾಡು ಎಂದು ಹೇಳುತ್ತಲೇ ಇದ್ದರು, ಇದೇ ವಿಚಾರಕ್ಕೆ ಅಶ್ವಿನಿ ಗೌಡ ಜೊತೆ ಜಗಳವೂ ಆಯ್ತು, ಅವರನ್ನು ಏಕವಚನದಲ್ಲಿ ಮಾತನಾಡಿಸಿದರು. ಯಾರ ಕ್ಯಾಪ್ಟನ್ಸಿಯಲ್ಲಿಯೂ ಕೆಲಸ ಮಾಡದ ಗಿಲ್ಲಿ ನಟ ಅವರು, ಈ ಬಾರಿ ಬೇರೆಯವರ ಹತ್ರ ಕೆಲಸ ಮಾಡಿಸೋದು ಸವಾಲಾಗಿತ್ತು.

25
ಕಿಚ್ಚ ಸುದೀಪ್‌ ಬಳಿ ಬೈಸ್ಕೊಳ್ತೀನಿ

ಟಾಸ್ಕ್‌ ವಿಚಾರದಲ್ಲಿ ಗಿಲ್ಲಿ ನಟ ಅವರು ತೀರ್ಪು ಹೇಳುವಾಗ ತಾರತಮ್ಯ ಮಾಡಿದರು, ಕಾವ್ಯ ಪರವಾಗಿದ್ದರು ಎಂಬ ಆರೋಪ ಇತ್ತು. ಇನ್ನು ಅಶ್ವಿನಿ ಗೌಡ ಕೂಡ ಗಿಲ್ಲಿ ನಟನ ತಾರತಮ್ಯ, ಆಟದ ಬಗ್ಗೆ ಹೇಳಿದ್ದರು. ಹೀಗಾಗಿಯೋ ಏನೋ ಈ ಬಾರಿ ಕಿಚ್ಚ ಸುದೀಪ್‌ ಬಳಿ ಬೈಸ್ಕೊಳ್ತೀನಿ ಎಂದು ಗಿಲ್ಲಿಗೆ ಭಯ ಆಗಿತ್ತು.

35
ಕ್ಯಾಪ್ಟನ್ಸಿ ಬಗ್ಗೆ ಮಾತಾಡ್ತಾರೆ

ಸ್ಪಂದನಾ ಸೋಮಣ್ಣ ಅವರು ಗಾರ್ಡನ್‌ ಏರಿಯಾದಲ್ಲಿ ಮಾತನಾಡುವಾಗ,

ವೀಕೆಂಡ್‌ ಎಪಿಸೋಡ್‌ನಲ್ಲಿ ನಿನ್ನ ಕ್ಯಾಪ್ಟನ್ಸಿ ಬಗ್ಗೆ ಮಾತಾಡ್ತಾರೆ” ಎಂದು ಗಿಲ್ಲಿಗೆ ಹೇಳಿದ್ದರು.

45
ಉಗಿದು ಉಪ್ಪಿನಕಾಯಿ ಹಾಕ್ತಾರೆ

ಆಗ ಗಿಲ್ಲಿ ನಟ ಅವರು, “ಉಗಿದು ಉಪ್ಪಿನಕಾಯಿ ಹಾಕ್ತಾರೆ, ಯಾವುದಕ್ಕೂ ಡಲ್‌ ಡ್ರೆಸ್‌ ಹಾಕ್ತೀನಿ. ಬೈದರೆ ಇಬ್ಬರು ಸೇರಿ ಬೈಸಿಕೊಳ್ಳಬೇಕು, ಅದೇ ಖುಷಿ. ಸಮಪಾಲು, ಸಮಬಾಳು. ಅವರಿಗೆ ಅರ್ಧ, ನನಗೆ ಅರ್ಧ” ಎಂದಿದ್ದಾರೆ. 

ಆಗ ಸ್ಪಂದನಾ ಅವರು, “ರಾಜ ಎಂದುಕೊಂಡು ರೆಡಿಯಾಗಿದ್ದಾನೆ" ಎಂದಿದ್ದಾರೆ.

55
ಈವಮ್ಮನ ತಂದು ತಗಲಾಕಿದ್ರು

ಸಿಂಹಾಸನ ಎತ್ತರು, ಚೇರ್‌ ಎತ್ತಿದರು. ಉಸ್ತುವಾರಿ ನೋಡಿ ಚೇರ್‌ ಎತ್ತರು. ಈ ನನ್‌ ಮಕ್ಕಳ ದುರಹಂಕಾರ ನೋಡಿ ಎಂದರು. ನನ್ನ ಹಣೆಬರಹವೇ ಸರಿ ಇಲ್ಲ, ಏನ್‌ ಪಾಪ ಮಾಡಿದ್ನೋ ಏನೋ! ಸಮ್ಮಿಶ್ರ ಸರ್ಕಾರದ ಥರದ ಕ್ಯಾಪ್ಟನ್ಸಿ ಯಾವನಿಗೆ ಬೇಕಿತ್ತು. ಪಂಚೆ ಇಟ್ಟುಕೊಂಡು ಸಿಂಹದ ಪಕ್ಕ ಸೆಲ್ಫಿ ತಗೊಂಡೆ. ಮುಕ್ಕಾಲು ಭಾಗ ಕ್ಯಾಪ್ಟನ್ಸಿ ಮಾಡ್ತಿದ್ದೆ, ಈವಮ್ಮನ ತಂದು ತಗಲಾಕಿದ್ರು” ಎಂದು ಬೇಸರ ಹೊರಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories