'ಕರಿಮಣಿ' ನಟಿ ಸ್ಪಂದನಾ ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು? ಅವ್ರು ಆಡ್ತಿರೋ 'ಬಿಗ್ ಬಾಸ್' ಆಟ ಓಕೆ ನಾ?

Published : Nov 07, 2025, 02:00 PM IST

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ರಿಯಾಲಿಟಿ ಶೋನಲ್ಲಿ ಸ್ಪಂದನಾ ಆಟ ಆಡುತ್ತಿದ್ದಾರೆ. ನೆಟ್ಟಿಗರ ಪ್ರಕಾರ, ನಟಿ ಸ್ಪಂದನಾ ಸೋಮಣ್ಣ ಅವರು ಅಷ್ಟೇನೂ ರೆಬೆಲ್ ಆಟ ಆಡುತ್ತಿಲ್ಲ. ಬದಲಾಗಿ, ಸಿಸ್ಟಮ್ಯಾಟಿಕ್ ಆಗಿ ಆಡುತ್ತ ತಮ್ಮದೇ ಸ್ಟೈಲ್‌ನಲ್ಲಿ ಸೇಪ್‌ ಜಾನರ್ ಆಯ್ಕೆ ಮಾಡಿಕೊಂಡಿದ್ದಾರೆ. ಸೇಫ್ ಗೇಮ್ ಸರಿನಾ?

PREV
19
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಇದೀಗ ಕಲರ್ಸ್ ಕನ್ನಡದ 'ಬಿಗ್ ಬಾಸ್ ಕನ್ನಡ 12' ಶೋನಲ್ಲಿ ಸ್ಪರ್ಧಿಯಾಗಿರುವ ಸ್ಪಂದನಾ ಸೋಮಣ್ಣ (Spandana Somanna) ಅವರ ಬಗ್ಗೆ ನಿಮಗೆಷ್ಟು ಗೊತ್ತು? ಸದ್ಯಕ್ಕೆ ಬಿಗ್ ಬಾಸ್ ಕನ್ನಡ ಶೋನಲ್ಲಿ ಸ್ಪರ್ಧಿಯಾಗಿದ್ದು ಟಿವಿ ಶೋ ಮೂಲಕ ಮನೆಮನೆಗಳಲ್ಲಿ 'ದರ್ಶನ' ಕೊಡುತ್ತಿದ್ದಾರೆ ಸ್ಪಂದನಾ ಸೋಮಣ್ಣ.

29
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಮೈಸೂರಿನವರಾದ ಸ್ಪಂದನಾ ಸೋಮಣ್ಣ ಅವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ, ಆದರೆ ಆ ಡಿಗ್ರಿ ಮೂಲಕ ಕೆಲಸ ಮಾಡಲು ಇಷ್ಟವಾಗದೇ ನಟನೆಯ ವೃತ್ತಿ ಆಯ್ದುಕೊಂಡಿದ್ದಾರೆ ಎನ್ನಲಾಗಿದೆ.

39
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಸ್ಪಂದನಾ ಸೋಮಣ್ಣ ಅವರಿಗೆ ತಮ್ಮ ಸ್ಕೂಲು ದಿನಗಳಿಂದಲೂ ಬಣ್ಣದ ಬದುಕಿನ ಸೆಳೆತ ಬೆನ್ನುಬಿದ್ದಿತ್ತು. ಶಾಲಾದಿನಗಳಲ್ಲೇ ಬಣ್ಣ ಹಚ್ಚಿ ಸ್ಟೇಜ್‌ಗಳಲ್ಲಿ ಡಾನ್ಸ್‌-ನಾಟಕ ಹೀಗೆ ಮಿಂಚುತ್ತಿದ್ದರಂತೆ.

49
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ತಂದೆ ಇಂಜಿನಿಯರ್ ಆಗೀರೋ ಕಾರಣಕ್ಕೋ ಏನೋ ಎನ್ನುವಂತೆ ಇವರೂ ಕೂಡ ಇಂಜಿನಿಯರಿಂಗ್ ಪಡದವಿ ಪಡೆದರಾದರೂ ಮುಂದೆ ಓದಲು ಅಥವಾ ಅದೇ ವೃತ್ತಿಯಲ್ಲಿ ಸಾಗಲು ಮನಸ್ಸು ಒಪ್ಪಲಿಲ್ಲ.

59
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಸೀರಿಯಲ್ಹಾಗೂ ಸಿನಿಮಾಗಳ ಮೂಲಕ ಚಿಕ್ಕಪುಟ್ಟ ಪಾತ್ರಗಳಿಂದ ಪ್ರಾರಂಭಿಸಿ, ಬಳಿಕ ಕಲರ್ಸ್ ಕನ್ನಡದ 'ಕರಿಮಣಿ' ಸೀರಿಯಲ್ ಮೂಲಕ ಅವರು ಕರ್ನಾಟಕದಲ್ಲಿ ಮನೆಮಾತಾದರು.

69
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ರಿಯಾಲಿಟಿ ಶೋನಲ್ಲಿ ಸ್ಪಂದನಾ ಆಟ ಆಡುತ್ತಿದ್ದಾರೆ. ನೆಟ್ಟಿಗರ ಪ್ರಕಾರ, ನಟಿ ಸ್ಪಂದನಾ ಸೋಮಣ್ಣ ಅವರು ಅಷ್ಟೇನೂ ರೆಬೆಲ್ ಆಟ ಆಡುತ್ತಿಲ್ಲ.

79
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಬದಲಾಗಿ, ಸಿಸ್ಟಮ್ಯಾಟಿಕ್ ಆಗಿ ಆಡುತ್ತ ತಮ್ಮದೇ ಸ್ಟೈಲ್‌ನಲ್ಲಿ ಸೇಪ್‌ ಜಾನರ್ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರು ಅವರ ಸೇಫ್ ಗೇಮ್ ಸರಿಯಲ್ಲ ಎನ್ನುತ್ತಿದ್ದರು ಹಲವರು ಅವರನ್ನು ಅದಕ್ಕಾಗಿ ಸಪೋರ್ಟ್‌ ಮಾಡುತ್ತಿದ್ದಾರೆ. 'ಲೋಕೋ ಭಿನ್ನ ರುಚಿಃ' ಎಂಬಂತೆ 'ಒಬ್ಬೊಬ್ಬರ ಆಯ್ಕೆ ಒಂದೊಂದು ತರಹ' ಎನ್ನಬಹುದೇನೋ..!

89
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಒಟ್ಟಿನಲ್ಲಿ, ನಟಿ ಸ್ಪಂದನಾ ರಾಮಣ್ಣ ಅವರಿಗೆ ಈ ಮೊದಲು ನಟಿಸಿದ್ದ ಸಿನಿಮಾಗಳಾಗಲೀ ಅಥವಾ 'ಗೃಹಪ್ರವೇಶ' ಹಾಗೂ 'ಕರಿಮಣಿ' ಸೀರಿಯಲ್‌ಗಳಾಗಲೀ ತಂದುಕೊಡದೇ ಇದ್ದ ಪ್ರಸಿದ್ಧಿಯನ್ನು ಈ ಬಿಗ್ ಬಾಸ್ ತಂದುಕೊಟ್ಟಿದೆ ಎನ್ನಬಹುದೇನೋ!

99
ಸ್ಪಂದನಾ ಸೋಮಣ್ಣ ಲೈಫ್ ಜರ್ನಿ ಸ್ಟೋರಿ

ಆದರೆ, ಬಿಗ್ ಬಾಸ್ ಮನೆಯಲ್ಲಿ ನಟಿ ಸ್ಪಂದನಾ ಸೋಮಣ್ಣ ಅದೆಷ್ಟು ದಿನ ಉಳಿಯುತ್ತಾರೆ, ಎಲ್ಲಿಯವರೆಗೆ ಅವರ ಜರ್ನಿ ಸಾಗುತ್ತದೆ, ಬಿಗ್ ಬಾಸ್ ವಿನ್ನರ್ ಆಗ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಮುಂದಿನ ದಿನಗಳಲ್ಲಿ ಕಾಯಲೇಬೇಕು!

Read more Photos on
click me!

Recommended Stories