BBK 12: ದಿನಸಿ ಕಳೆದುಕೊಂಡ ಸದಸ್ಯರು; ಅಂದು ಗಿಲ್ಲಿ, ಇಂದು ಅಶ್ವಿನಿ; ಕಿಡಿ ಹಚ್ಚಿದ್ರಾ ರಾಶಿಕಾ?

Published : Dec 22, 2025, 07:44 AM IST

ಬಿಗ್‌ಬಾಸ್ ಮನೆಯಲ್ಲಿ ದಿನಸಿ ಟಾಸ್ಕ್ ವೇಳೆ ಅಶ್ವಿನಿ ಗೌಡ ಮಾಡಿದ ತಪ್ಪಿನಿಂದಾಗಿ ಅವರು ಮತ್ತು ಗಿಲ್ಲಿ ನಡುವೆ ತೀವ್ರ ಜಗಳ ಉಂಟಾಗಿದೆ. ರಾಶಿಕಾ ಹಳೆಯ ಘಟನೆಯನ್ನು ಪ್ರಸ್ತಾಪಿಸಿದ್ದು, ಮಾತಿಗೆ ಮಾತು ಬೆಳೆದು ಮನೆಯಲ್ಲಿ ವಾತಾವರಣ ಬಿಸಿಯಾಗಿದೆ.

PREV
15
ಅಶ್ವಿನಿ ಗೌಡ ಮತ್ತು ಗಿಲ್ಲಿ

ಬಿಗ್‌ಬಾಸ್ ಕನ್ನಡ ಫಿನಾಲೆಗೆ ಸಮೀಪಿಸಿದ್ದು, ವೈಲ್ಡ್ ಕಾರ್ಡ್ ರೂಪದಲ್ಲಿ ಬಂದಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಮನೆಯಲ್ಲಿರುವ ಸದಸ್ಯರಿಗೆ ಕೆಲವು ಸಲಹೆಗಳನ್ನು ನೀಡಿ ತೆರಳಿದ್ದಾರೆ. ಹಾಗಾಗಿ ಈ ವಾರದ ಆರಂಭದಿಂದಲೇ ಸ್ಪರ್ಧಿಗಳು ಆಲರ್ಟ್ ಅಗಬೇಕಿದೆ. ಇದೀಗ ದಿನಸಿ ಕಳೆದುಕೊಂಡಿದ್ದಕ್ಕೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಜಗಳ ಶುರುವಾಗಿದೆ.

25
10 ಸೆಕೆಂಡ್‌

ಈ ವಾರ ಮನೆ ದಿನಸಿ ಪಡೆದುಕೊಳ್ಳಬೇಕಾದ್ರೆ ಬಿಗ್‌ಬಾಸ್ ಸೂಚಿಸುವ ಸ್ಥಳಕ್ಕೆ 10 ಸೆಕೆಂಡ್‌ನಲ್ಲಿ ತೆರಳಿ ಡ್ಯಾನ್ಸ್ ಮಾಡಬೇಕು. ಇದೇ ರೀತಿಯಾಗಿ ಮನೆಯ ಸದಸ್ಯರು ಬೆಡ್‌ರೂಮ್, ಗಾರ್ಡನ್ ಏರಿಯಾ, ಈಜುಕೊಳ ಮತ್ತು ಕಿಚನ್ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ.

35
ಜಗಳಕ್ಕೆ ಕಿಡಿ

ಇಂದು ಬಿಡಗಡೆಯಾದ ಪ್ರೋಮೋದಲ್ಲಿ ಕಿಚನ್ ಏರಿಯಾಗೆ ಬರಲು ಅಶ್ವಿನಿ ಗೌಡ ಸೂಚಿಸಿದ ಸಮಯದಲ್ಲಿ ಸಾಧ್ಯವಾಗದ ಕಾರಣ ಆ ಸುತ್ತನ್ನು ಸೋಲಬೇಕಾಗುತ್ತದೆ. ಈ ಸೋಲಿನ ಬಳಿಕ ಅಶ್ವಿನಿ ಗೌಡ ವಿರುದ್ಧ ನೇರವಾಗಿಯೇ ಗಿಲ್ಲಿ ನಟ ಬೇಸರ ವ್ಯಕ್ತಪಡಿಸುತ್ತಾರೆ. ಈ ವೇಳೆ ಹಿಂದಿನ ಘಟನೆಯನ್ನು ಮೆಲಕು ಹಾಕಿದ ರಾಶಿಕಾ ಇಬ್ಬರ ನಡುವಿನ ಜಗಳಕ್ಕೆ ಕಿಡಿ ಹಚ್ಚಿದಂತೆ ಕಾಣಿಸುತ್ತಿದೆ.

ಇದನ್ನೂ ಓದಿ: ಶುಭಾ ಪೂಂಜಾ ಶೂಟಿಂಗ್‌ ಸೆಟ್‌ನಲ್ಲಿ ಹೇಗಿರ್ತಾರೆ? ಕಾಮಿಡಿ ಕಿಲಾಡಿ ಬಿಚ್ಚಿಟ್ಟ ಸತ್ಯ ಏನು?

45
ಗಿಲ್ಲಿ ಬೇಸರ

ಹೇಳಿದ್ರೆ ಕೇಳಲ್ಲಾ ಎಂದು ಗಿಲ್ಲಿ ಬೇಸರ ವ್ಯಕ್ತಪಡಿಸಿದಾಗ, ಈ ಹಿಂದೆ ನಿನ್ನಿಂದಲೂ ಬಾಸ್ಕೆಟ್ ವಾಪಸ್ ಹೋಗಿತ್ತಲ್ಲವಾ ಎಂದು ರಾಶಿಕಾ ಹೇಳುತ್ತಾರೆ. ನಾನು ಉದ್ದೇಶಪೂರ್ವಕವಾಗಿ ಮಾಡಿದ್ದನಾ ಅಂತಾರೆ. ಇದರಿಂದ ಕೋಪಗೊಂಡ ಅಶ್ವಿನಿ ಗೌಡ, ಹೌದು ನಾನು ಬೇಕಂತಲೆ ಆಟ ಸೋತೆ, ಏನಿವಾಗ ಎಂದು ಹೇಳುತ್ತಾರೆ.

ಇದನ್ನೂ ಓದಿ: ಕೊನೆಯ ಬಾರಿ ಅತ್ತಿದ್ದನ್ನು ಹೇಳಿಕೊಂಡ ಉಪೇಂದ್ರ; ಈಗ ಕಣ್ಣೀರು ಬತ್ತಿದೆ ಎಂದ ರಿಯಲ್ ಸ್ಟಾರ್

55
ನಾನು ಬೇಕು ಅಂತ ಮಾಡ್ಲಾ

ನಿಮಗೊಬ್ಬರಿಗೆ ಇಲ್ಲಿ ನಷ್ಟವಾಗಿಲ್ಲ. ನಿಮ್ಮಿಂದ ಮನೆಯಲ್ಲಿರೋರಿಗೆ ನಷ್ಟವಾಗಿದೆ. ಮುಂದಿನ ಎಲ್ಲಾ ಸುತ್ತುಗಳಲ್ಲಿ ನಾನು ಬೇಕು ಅಂತ ಮಾಡ್ಲಾ ಎಂದು ಗಿಲ್ಲಿ ತಿರುಗೇಟು ನೀಡುತ್ತಾರೆ. ಮನೆಯ ಕ್ಯಾಪ್ಟನ್ ಕಾವ್ಯಾ ಇದೆಲ್ಲವನ್ನು ವೀಕ್ಷಕರಾಗಿ ನೋಡುತ್ತಿರೋದನ್ನು ಇಂದಿನ ಪ್ರೋಮೋದಲ್ಲಿ ಕಾಣಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories