ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ, ಸ್ಪರ್ಧಿ ರಕ್ಷಿತಾ ಶೆಟ್ಟಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೀನುಗಾರರಿಗೆ ವೇದಿಕೆ, ಕರಾವಳಿಯ ಹುಲಿವೇಷ ನೃತ್ಯ ಮತ್ತು ಕನ್ನಡ ನಾಟಕ ನೋಡುವ ಆಕೆಯ ಆಸೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ಸೀಸನ್ 12 ಫಿನಾಲೆ ವಾರದಲ್ಲಿ ಸ್ಪರ್ಧಿಗಳು ತಮ್ಮ ಬೇಡಿಕೆಗಳನ್ನು ಬಿಗ್‌ಬಾಸ್ ಮುಂದೆ ಇರಿಸುತ್ತಿದ್ದಾರೆ. ಸ್ಪರ್ಧಿಗಳು ಹೇಳುವ ಮೂರು ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಬಿಗ್‌ಬಾಸ್ ವಚನ ನೀಡಿದ್ದಾರೆ. ಸೋಮವಾರದ ಸಂಚಿಕಯಲ್ಲಿ ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು.
25
ರಕ್ಷಿತಾ ಹೇಳಿದ ಮೂರು ಬೇಡಿಕೆ
ಈ ನಾಲ್ವರ ಪೈಕಿ ರಕ್ಷಿತಾ ಹೇಳಿದ ಮೂರು ಬೇಡಿಕೆಗಳಿಗೆ ಕರುನಾಡಿನ ಜನತೆ ಫಿದಾ ಆಗಿದ್ದಾರೆ. ಈ ಮೂರು ಬೇಡಿಕೆಗಳನ್ನು ಈಡೇರಿಸುವಲ್ಲಿ ಬಿಗ್‌ಬಾಸ್ ಹಿಂದೇಟು ಹಾಕಬಾರದು. ವಯಸ್ಸಿಗೆ ಮೀರಿದ ಈ ಆಸೆಗಳು ರಕ್ಷಿತಾ ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
35
ರಕ್ಷಿತಾ ಆಸೆ 1
1.ಬಿಗ್‌ಬಾಸ್ ಮನೆಗೆ ಕಡಲಿನ ಮಕ್ಕಳಾದ ಮೀನುಗಾರರು ಬರಬೇಕು. ಸಮುದ್ರಕ್ಕಿಳಿಯುವ ಮೀನುಗಾರರು ಎದುರಿಸುವ ಸವಾಲುಗಳ ಬಗ್ಗೆ ಎಲ್ಲರ ಮುಂದೆ ಮಾತನಾಡಲು ಅವಕಾಶ ನೀಡಬೇಕು. ಈ ಮೂಲಕ ಮೀನುಗಾರರಿಗೆ ವೇದಿಕೆ ಕಲ್ಪಿಸಲು ರಕ್ಷಿತಾ ಶೆಟ್ಟಿ ಪ್ರಯತ್ನಿಸುತ್ತಿ
2.ಕರಾವಳಿ ಭಾಗದ ಹುಲಿವೇಷಧಾರಿಗಳ ನೃತ್ಯ ತುಂಬಾನೇ ಜನಪ್ರಿಯವಾಗಿದೆ. ಬಿಗ್‌ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು ಮತ್ತು ಅವರೊಂದಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದು ರಕ್ಷಿತಾ ಕೇಳಿಕೊಂಡಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಕಾರಣ ಆರಂಭದಿಂದಲೂ ರಕ್ಷಿತಾ ಶೆಟ್ಟಿ ಭಾಷೆ ತೊಡಕು ಅನುಭವಿಸಿದ್ದಾರೆ. ಇದೇ ವಿಷಯವಾಗಿ ಹಲವರ ಕೋಪಕ್ಕೂ ರಕ್ಷಿತಾ ಶೆಟ್ಟಿ ಗುರಿಯಾಗಿದ್ದರು. ಕಳೆದ ಮೂರು ತಿಂಗಳಲ್ಲಿ ರಕ್ಷಿತಾ ಅವರ ಕನ್ನಡ ಸುಧಾರಣೆಯಾಗಿರೋದನ್ನು ವೀಕ್ಷಕರು ಗಮನಿಸಿದ್ದಾರೆ. ಮೂರನೇ ಬೇಡಿಕೆಯಾಗಿ ತಾನು ಈ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ನಾಟಕ ನೋಡಬೇಕೆಂದು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.