Bigg Boss Rakshita Shetty ನಟನೆಗೆ ಹೋಗ್ತಾರಾ? ಮುಂದಿನ ನಡೆ ತಿಳಿಸಿ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಪುಟ್ಟಿ

Published : Jan 19, 2026, 11:19 AM IST

ಬಿಗ್​ಬಾಸ್​ 12ರ ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿರುವ ರಕ್ಷಿತಾ ಶೆಟ್ಟಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುವ ಬದಲು, ತಮ್ಮ ಯೂಟ್ಯೂಬ್ ಚಾನೆಲ್‌ಗೆ ಮರಳುವ ನಿರ್ಧಾರವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.

PREV
15
ಎಲ್ಲರನ್ನೂ ಮೀರಿಸಿದ ರಕ್ಷಿತಾ

ಬಿಗ್​ಬಾಸ್​ (Bigg Boss 12)ರಲ್ಲಿ ಘಟಾನುಘಟಿ ಸ್ಪರ್ಧಿಗಳನ್ನು ಮೀರಿಸಿ 25 ವರ್ಷದ ರಕ್ಷಿತಾ ಶೆಟ್ಟಿ ಮೊದಲ ರನ್ನರ್​ ಅಪ್​ ಆಗಿದ್ದಾರೆ. ಯುಟ್ಯೂಬ್​ ಆರಂಭಿಸಿ ಅರೆಬರೆ ಕನ್ನಡದಲ್ಲಿಯೇ ವಿಷಯ ತಿಳಿಸುತ್ತಲೇ ಆರೇ ತಿಂಗಳಿನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಮಂಗಳೂರು ಪುಟ್ಟಿಗೆ ಬಿಗ್​ಬಾಸ್​​ ಅವಕಾಶ ನೀಡಿತ್ತು.

25
ಕೋಟಿ ಕೋಟಿ ಅಭಿಮಾನಿಗಳು

ಇದೀಗ ಆ ಲಕ್ಷ ಲಕ್ಷದ ಸಂಖ್ಯೆ ಕೋಟಿಕೋಟಿಯನ್ನೂ ಮೀರಿ ಹೋಗಿದೆ. ಕನ್ನಡ ನಾಡಿನಲ್ಲಿಯೇ ಹುಟ್ಟಿ, ಕನ್ನಡ ಬರುವುದಿಲ್ಲ ಎಂದು ಹೆಮ್ಮೆಯಿಂದ ಹೇಳುವ ಇಂದಿನ ಪೀಳಿಗೆಯವರ ಮುಂದೆ, ಕನ್ನಡ ಕಲಿತು ಮಾತನಾಡುತ್ತಿರುವುದರಿಂದಲೇ ರಕ್ಷಿತಾ ಅವರು ಕರುನಾಡ ಜನತೆಗೆ ತೀರಾ ಹತ್ತಿರವಾಗಿಬಿಟ್ಟರು. ಜೊತೆಗೆ ಅವರ ಆಟದ ವೈಖರಿಯೂ ಇಷ್ಟವಾಯಿತು.

35
ದೊಡ್ಡ ಸೆಲೆಬ್ರಿಟಿ

ಇದೀಗ, ಬಿಗ್​ಬಾಸ್​ ರನ್ನರ್​ ಅಪ್​ ಆದ ಬೆನ್ನಲ್ಲೇ ರಕ್ಷಿತಾ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಇದೀಗ ಅವರಿಗೆ ನಟನೆಯ ಕಡೆಗೆ ಆಸಕ್ತಿ ಇದೆಯಾ? ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತೀರಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ಸಂದರ್ಭದಲ್ಲಿ ರಕ್ಷಿತಾ ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡಿದ್ದಾರೆ.

45
ನಟನೆಗೆ ಹೋಗ್ತಾರಾ?

ನಟನೆಗೆ ಹೋಗಲು ನನಗೆ ಇಷ್ಟವಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ತುಂಬಾ ಋಣಿಯಾಗಿದ್ದೇನೆ. ಈ ಹಂತದವರೆಗೆ ನಾನು ಗೆಲ್ಲುತ್ತೇನೆ ಎನ್ನುವುದು ತಿಳಿದಿರಲಿಲ್ಲ ಎಂದು ಖುಷಿಯಿಂದ ಹೇಳಿದ್ದಾರೆ ರಕ್ಷಿತಾ ಶೆಟ್ಟಿ. (Bigg Boss Rakshita Shetty)

55
ಮುಂದಿನ ಗುರಿ ಏನು?

ಇದೇ ವೇಳೆ ಮುಂದಿನ ಗುರಿ ಏನು ಎಂದು ಕೇಳಿದಾಗ, ಬಿಗ್​ಬಾಸ್​ನಲ್ಲಿ ಈ ಹಂತಕ್ಕೆ ಬಂದಾಗಿದೆ. ನಟನೆ ಎಲ್ಲಾ ಇಷ್ಟವಿಲ್ಲ. ಮತ್ತೆ ಬುಡಕ್ಕೇ ಹೋಗುತ್ತೇನೆ ಎನ್ನುವ ಮೂಲಕ ತಮ್ಮ ಯುಟ್ಯೂಬ್​ ಚಾನೆಲ್​ ಮುಂದುವರೆಸುವ ಬಗ್ಗೆ ಮಾತನಾಡಿದ್ದಾರೆ. ಅತಿಯಾದ ಆಸೆಯನ್ನು ಹೊಂದದೇ ಏನಿದ್ದರೂ ತಮ್ಮ ಬುಡವೇ ತಮ್ಮ ಜೀವನದ ಆಧಾರ ಎಂದು ರಕ್ಷಿತಾ ಅರಿತಿರುವುದಕ್ಕೆ ಆಕೆಯ ಅಭಿಮಾನಿಗಳು ಮತ್ತೊಮ್ಮೆ ಭೇಷ್​ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories