ಶನಿವಾರದ ಸಂಚಿಕೆಯಲ್ಲಿ, ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ನಿಯಮ ಉಲ್ಲಂಘನೆ ಮತ್ತು ಅವಮಾನಕರ ಹೇಳಿಕೆಗಳಿಗಾಗಿ ಖಡಕ್ ಕ್ಲಾಸ್ ತೆಗೆದುಕೊಂಡರು. ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಗೆ ಸಂಬಂಧಿಸಿದ ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು, ಕೊನೆಗೆ ಇಬ್ಬರೂ ಸ್ಪರ್ಧಿಗಳು ಸೇವ್ ಆದರು.
ಶನಿವಾರದ ಸಂಚಿಕೆಯಲ್ಲಿ ಮನೆಮಂದಿಯ ಚಳಿಯನ್ನು ಬಿಡಿಸುವ ಕೆಲಸವನ್ನು ಮಾಡಿದರು. ಸ್ಪರ್ಧಿಗಳು ಈ ವಾರ ನಡೆದುಕೊಂಡ ರೀತಿ, ಅವಮಾನಕರವನ್ನುಂಟು ಮಾಡುವ ಹೇಳಿಕೆ, ನಿಯಮಗಳ ಉಲ್ಲಂಘನೆ ಮಾಡಿದವರಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡರು. ಶನಿವಾರದ ಸಂಚಿಕೆಯ ಪಂಚಾಯ್ತಿಯಲ್ಲಿ ಸುದೀಪ್ ಗರಂ ಆಗಿರೋದು ಕಂಡು ಬಂತು.
25
ಸುದೀರ್ಘವಾಗಿ ಚರ್ಚೆ
ಈ ಬಾರಿ ಸಂಚಿಕೆಯಲ್ಲಿ ಸಣ್ಣ ಸಣ್ಣ ತಪ್ಪುಗಳು ಹೊರಗೆ ಹೇಗೆ ಕಾಣಿಸಿರಬಹದು ಎಂಬುದನ್ನು ಸ್ಪರ್ಧಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಅಶ್ವಿನಿ ಗೌಡ ಮತ್ತು ಜಾನ್ವಿ ನಡುವಿನ ಸಂಭಾಷಣೆ, ಧ್ರುವಂತ್-ರಾಶಿಕಾ, ರಕ್ಷಿತಾ-ಗಿಲ್ಲಿಯ ವಿಷಯವನ್ನು ಸುದೀಪ್ ಪ್ರಸ್ತಾಪಿಸಿದರು. ಒಂದೊಂದೇ ವಿಷಯವನ್ನು ಸುದೀರ್ಘವಾಗಿ ಚರ್ಚಿಸಲಾಯ್ತು. ಶನಿವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಸೇವ್ ಆಗಿದ್ದಾರೆ.
35
ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ
ನಾಮಿನೇಟ್ ತಂಡದವರು ರಕ್ಷಿತಾ ಶೆಟ್ಟಿ ನಿರ್ಧಾರವನ್ನು ಒಪ್ಪಿಕೊಂಡಿದ್ದರು. ಈ ನಿರ್ಧಾರವನ್ನು ಎಲ್ಲರ ಮುಂದೆ ತಿಳಿಸುವಾಗ ಅಶ್ವಿನಿ ಗೌಡ ಸಣ್ಣದೊಂದು ತಪ್ಪನ್ನು ಮಾಡಿದ್ದರು. ಇದು ಕೇವಲ ರಕ್ಷಿತಾ ಶೆಟ್ಟಿ ನಿರ್ಧಾರವಾಗಿದ್ದು, ನಾವೆಲ್ಲರೂ ಅನಿವಾರ್ಯವಾಗಿ ಒಪ್ಪಿಕೊಂಡು ನಿಮ್ಮ ಮುಂದೆ ಹೇಳುತ್ತಿರೋದಾಗಿ ಅಶ್ವಿನಿ ಗೌಡ ಹೇಳಿದ್ದರು.
ಈ ಬಗ್ಗೆ ಮಾತನಾಡಿದ ಸುದೀಪ್, ನಿಮಗೆಲ್ಲರಿಗೂ ಪ್ರತ್ಯೇಕವಾಗಿ ಚರ್ಚೆ ನಡೆಸಲು ಅವಕಾಶ ನೀಡಿತ್ತು. ನೀವು ಹೇಳುತ್ತಿರೋದು ಒಮ್ಮತದ ನಿರ್ಧಾರವಾಗಿತ್ತು. ಆದ್ರೆ ಅದನ್ನು ಪ್ರಸ್ತುತಪಡಿಸುವಾಗ ರಕ್ಷಿತಾ ಶೆಟ್ಟಿ ಹೆಸರು ಹೇಳಿದೆಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ಗೌಡ, ನಾನು ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ನಾನು ಆ ರೀತಿ ಒಬ್ಬರ ಹೆಸರನ್ನು ಉಲ್ಲೇಖಿಸಿ ತಂಡದ ನಿರ್ಧಾರ ತಿಳಿಸಬಾರದಿತ್ತು ಎಂದು ಒಪ್ಪಿಕೊಂಡರು. ಹಾಗೆಯೇ ಎಲ್ಲರೊಂದಿಗೆ ಚರ್ಚಿಸಿ ಕಳಪೆ ನೀಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ನಾಮಿನೇಟ್ ತಂಡದಲ್ಲಿರುವ ಅಶ್ವಿನಿ ಗೌಡ, ಈ ಬಾರಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡು ಉತ್ತಮ ಪದಕ ಪಡೆದುಕೊಂಡಿದ್ದಾರೆ.