ನಟನ ಕ್ಷೇತ್ರವೇ ಹಾಗೇ ಅಲ್ವಾ? ಒಮ್ಮೆ ಯಾವುದೋ ಸಣ್ಣ ಪಾತ್ರದಲ್ಲಿ ಮಿಂಚುತ್ತಿದ್ದವರು ಇನ್ನೊಂದು ದಿನ ನಾಯಕರಾಗಿ ಎಂಟ್ರಿ ಕೊಡುತ್ತಾರೆ. ಅದಕ್ಕೆ ಉದಾಹರಣೆ ಈ ಸೀರಿಯಲ್ ಕಲಾವಿದರು. ಯಾರೆಲ್ಲಾ ಪೋಷಕ ಪಾತ್ರದಿಂದ ಲೀಡ್ ರೋಲ್ ಗೆ ಭಡ್ತಿ ಪಡೆದಿದ್ದರೆ ನೋಡೊಣ.
ನಟನೆಯ ಕ್ಷೇತ್ರವೇ ಹಾಗೆ ನಿನ್ನೆ ಯಾರೂ ಗುರುತಿಸದ ಪೋಷಕ ಪಾತ್ರ ಮಾಡುತ್ತಿದ್ದವರು, ಮುಂದೊಂದು ದಿನ ನಾಯಕರಾಗಿಯೋ, ನಾಯಕಿಯಾಗಿಯೋ ಮಿಂಚುತ್ತಾರೆ. ಅಂತಹ ಕಿರುತೆರೆ ನಟರು ತುಂಬಾ ಜನ ಇದ್ದಾರೆ. ಅವರ ಲಿಸ್ಟ್ ಇಲ್ಲಿದೆ.
29
ನಮ್ರತಾ ಗೌಡ
ನಮ್ರತಾ ಗೌಡ ಬಾಲ ನಟಿಯಾಗಿ ಗುರುತಿಸಿಕೊಂಡವರು. ಇವರು ಆಕಾಶದೀಪ, ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದರು. ನಾಗಿಣಿ ಸೀರಿಯಲ್ ಮೂಲಕ ನಾಯಕಿಯಾಗಿ ಮಿಂಚಿದರು.
39
ನಿಶಾ ರವಿಕೃಷ್ಣನ್
ಗಟ್ಟಿಮೇಳ ಮತ್ತು ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿಯಾಗಿ ರೌಡಿ ಬೇಬಿಯಾಗಿ ಮಿಂಚುತ್ತಿರುವ ನಿಶಾ ರವಿಕೃಷ್ಣನ್ ಸರ್ವ ಮಂಗಲ ಮಾಂಗಲ್ಯೆ ಧಾರಾವಾಹಿಯಲ್ಲಿ ಸಹ ನಟಿಯಾಗಿದ್ದರು.
ಅಮೃತಧಾರೆ, ಕನ್ಯಾದಾನ, ವರಲಕ್ಷ್ಮೀ ಸ್ಟೋರ್ಸ್ ನಲ್ಲಿ ನಟಿಸಿದ್ದ ರಾಣವ್ ಗೌಡ, ಇದೀಗ ಮೊದಲ ಬಾರಿಗೆ ಶುಭಸ್ಯ ಶೀಘ್ರಂನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
59
ರಾಧಾ ಭಗವತಿ
ರಾಧಾ ಭಗವತಿ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಂಗಿಯಾಗಿ ಹಾಗೂ ಅಮೃತಧಾರೆಯಲ್ಲಿ ಜೈದೇವ್ ಹೆಂಡತಿ ಮಲ್ಲಿಯಾಗಿ ಗುರುತಿಸಿಕೊಂಡವರು ಇದೀಗ ಭಾರ್ಗವಿ LLB ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.
69
ಮಾನ್ಸಿ ಜೋಷಿ
ನಟಿ ಮಾನ್ಸಿ ಜೋಷಿ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಪಾರು, ಮೈನಾ, ರಾಧಾ ರಮಣ ಧಾರಾವಾಹಿಯಲ್ಲಿ ಸಹ ನಟಿಯಾಗಿದ್ದ ಇವರು ಇದೀಗ ಜೋಡಿಹಕ್ಕಿಯ ನಾಯಕಿಯಾಗಿದ್ದಾರೆ.
79
ಆಶಾ ಅಯ್ಯನಾರ್
ಭಾಗ್ಯಲಕ್ಷ್ಮೀ ಸೇರಿ ಹಲವು ಧಾರಾವಾಹಿಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದ ಆಶಾ ಅಯ್ಯನಾರ್ ಇದೇ ಮೊದಲ ಬಾರಿಗೆ ಆದಿ ಲಕ್ಷ್ಮೀ ಪುರಾಣ ಮೂಲಕ ನಾಯಕಿಯಾಗಿ ಭಡ್ತಿ ಪಡೆದಿದ್ದಾರೆ.
89
ಪ್ರತಿಮಾ ಠಾಕೂರ್
ಮುದ್ದು ಸೊಸೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವ ಪ್ರತಿಮಾ ಠಾಕೂರ್ ಈ ಹಿಂದೆ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸುತ್ತಿದ್ದರು.
99
ರಜನೀಶ್
ಕರಿಮಣಿ ಧಾರಾವಾಹಿ ನೋಡಿದವರ ಕರ್ಣನ ಮುದ್ದು ತಮ್ಮ ಭರತ್ ನೆನೆಪು ಖಂಡಿತಾ ಇದ್ದೇ ಇರುತ್ತೆ. ಕೆಲವು ಸಿನಿಮಾಗಳಲ್ಲೂ ನಟಿಸಿದ್ದ ರಜನೀಶ್ ಈಗ ಆದಿ ಲಕ್ಷ್ಮೀ ಪುರಾಣದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.