ಡಿಕೆಡಿ ವೇದಿಕೆಯಲ್ಲಿ ಭೈರತಿ ರಣಗಲ್ ದೃಶ್ಯ ರೀಕ್ರಿಯೇಟ್ ಮಾಡಿದ ಶಿವಣ್ಣ- ಛಾಯಾ ಸಿಂಗ್!

Published : Nov 16, 2024, 07:16 PM ISTUpdated : Nov 17, 2024, 09:36 AM IST

ಡಿಕೆಡಿ ವೇದಿಕೆಯಲ್ಲಿ ಭೈರತಿ ರಣಗಲ್ ಸಿನಿಮಾದ ಸೀನ್ ರೀಕ್ರಿಯೇಟ್ ಮಾಡಿದ್ದು, ಶಿವಣ್ಣ ಮತ್ತು ಛಾಯಾ ಸಿಂಗ್ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದಾರೆ.   

PREV
17
ಡಿಕೆಡಿ ವೇದಿಕೆಯಲ್ಲಿ ಭೈರತಿ ರಣಗಲ್ ದೃಶ್ಯ ರೀಕ್ರಿಯೇಟ್ ಮಾಡಿದ ಶಿವಣ್ಣ- ಛಾಯಾ ಸಿಂಗ್!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅಭಿನಯಿಸಿದ ಭೈರತಿ ರಣಗಲ್ ಸಿನಿಮಾ ಇದೀಗ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಇದರ ಮಧ್ಯೆ ಝೀ ಕನ್ನಡದ ಡಿಕೆಡಿ ವೇದಿಕೆಯ ಮೇಲೂ ಬೈರತಿ ರಣಗಲ್ ಸಖತ್ ಸೌಂಡ್ ಮಾಡ್ತಿದೆ. 

27

ಹೌದು, ಡಿಕೆಡಿ ವೇದಿಕೆಯಲ್ಲಿ ಸ್ಪರ್ಧಿಗಳಾದ ಬಾಲ ನಟಿ ಸಿಹಿ ಮತ್ತು ಸುಮುಖ್ ಭೈರತಿ ರಣಗಲ್ ಸಿನಿಮಾದ ಹಾಡನ್ನು ಭರ್ಜರಿಯಾಗಿ ಪರ್ಫಾಮ್ ಮಾಡಿದ್ದು, ಶಿವಣ್ಣ ಸೇರಿ, ಎಲ್ಲಾ ಜಡ್ಜ್ ಗಳು ಸಹ ಈ ಫೈರ್ ಬ್ರಾಂಡ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. 
 

37

ಇನ್ನೊಂದು ವಿಶೇಷ ಅಂದ್ರೆ, ಡಿಕೆಡಿ ವೇದಿಕೆಗೆ ನಟಿ ಛಾಯಾ ಸಿಂಗ್ (Chaya Singh) ಅವರು ಎಂಟ್ರಿ ಕೊಟ್ಟದು. ಹೌದು, ನಟಿ ಛಾಯಾ ಸಿಂಗ್ ಭೈರತಿ ರಣಗಲ್ ಸಿನಿಮಾದಲ್ಲಿ ಶಿವಣ್ಣನ ತಂಗಿಯಾಗಿ ನಟಿಸಿದ್ದಾರೆ. ಇವರು ಮಫ್ತಿ ಸಿನಿಮಾದಲ್ಲೂ ಶಿವಣ್ಣನ ತಂಗಿಯಾಗಿ ನಟಿಸಿದ್ದರು. 
 

47

ಮಫ್ತಿ ಸಿನಿಮಾದಲ್ಲಿನ ಈ ಅಣ್ಣ - ತಂಗಿ ಜೋಡಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಭೈರತಿ ರಣಗಲ್ (Bhairati Ranagal) ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಿದೆ. ಅಲ್ಲದೇ ಸಿನಿಮಾದಲ್ಲಿ ಇಮೋಷನಲ್ ಸೀನ್ ಒಂದು ಜನಮನ ಗೆಲ್ಲುತ್ತಿದ್ದು, ಅದೇ ಸೀನ್ ಅನ್ನು ಶಿವಣ್ಣ ಮತ್ತು ಛಾಯಾ ಸಿಂಗ್ ವೇದಿಕೆಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ. 
 

57

ಕಣ್ಣಲ್ಲೇ ಮಾತನಾಡುವ ಶಿವಣ್ಣ ಮತ್ತು ಛಾಯಾ ಭಾವುಕ ಅಭಿನಯವನ್ನು ನೋಡಿ ಡಿಕೆಡಿಯ ಎಲ್ಲರೂ ತಲೆದೂಗಿದ್ದಾರೆ. ಅಷ್ಟೇ ಅಲ್ಲ ಈ ಜೋಡಿ ಜೊತೆಯಾಗಿ ಡ್ಯಾನ್ಸ್ ಒಂದಕ್ಕೆ ಹೆಜ್ಜೆ ಕೂಡ ಹಾಕಿದ್ದಾರೆ. ಆದರೆ ಶಿವಣ್ಣನ ಎನರ್ಜಿ ಮುಂದೆ ಅದ್ಭುತ ಡ್ಯಾನ್ಸರ್ ಆಗಿರುವ ಛಾಯಾ ಸಿಂಗ್ ಕೂಡ ಡ್ಯಾನ್ಸ್ ಮಾಡೋದು ಬಿಟ್ಟು ಕ್ಲಾಪ್ ಮಾಡುತ್ತಾ ಎಂಜಾಯ್ ಮಾಡಿದ್ದರು. 
 

67

ವೇದಿಕೆ ಮೇಲೆ ಶಿವಣ್ಣನ ಬಗ್ಗೆ ಮಾತನಾಡಿದ ಛಾಯಾ ಸಿಂಗ್, ನನಗೆ ಇನ್ನೊಂದು ಜನ್ಮ ಅಂತ ಇದ್ರೆ, ಕೇವಲ ತೆರೆ ಮೇಲೆ ಮಾತ್ರ ಅಲ್ಲ, ನಿಜವಾಗಿಯೂ ನಿಮ್ಮ ತಂಗಿಯಾಗಿ ಹುಟ್ಟಬೇಕೆಂಬ ಆಸೆ ಇದೆ ಎಂದರು. ಅಷ್ಟೇ ಅಲ್ಲದೇ ಭೈರತಿ ರಣಗಲ್ ನ ಭಾಗವಾಗಿರೋದಕ್ಕೆ ಖುಷಿ ಎಂದಿದ್ದಾರೆ. 
 

77

ಇನ್ನು ಶಿವರಾಜ್ ಕುಮಾರ್ ಜೊತೆ ನಟನೆ ಮಾಡೋವಾಗ ನಾವು ಹೆಚ್ಚಾಗಿ ಏನೂ ಮಾಡೋದು ಬೇಕಾಗಿಲ್ಲ.  ಶಿವಣ್ಣನ ವೈಬ್ ಹಾಗೇ ಇರುತ್ತೆ. ಶಿವಣ್ಣನಿಗೆ ಕನ್ನಡಿಯಾಗಿ ನಾವು ನಿಂತ್ರೆ ಸಾಕು, ಎಲ್ಲಾ ಆಗೋಗುತ್ತೆ, ನಾನು ಮಾಡಿರೋದು ಅದೇ ಎಂದಿದ್ದಾರೆ ಛಾಯಾ ಸಿಂಗ್. 
 

Read more Photos on
click me!

Recommended Stories