ಉಲ್ಟಾ ಹೊಡೆದ Amruthadhaare ವೀಕ್ಷಕರು ; ಅಜ್ಜಿ- ಮೊಮ್ಮಗ ಒಂದಾಗ್ತಿದ್ದಂತೆಯೇ ಸೀರಿಯಲ್​ ವಿರುದ್ಧ ಭಾರಿ ಆಕ್ರೋಶ

Published : Dec 04, 2025, 12:02 PM IST

ಅಮೃತಧಾರೆ ಧಾರಾವಾಹಿಯಲ್ಲಿ, ದೇವರ ಸನ್ನಿಧಿಯಲ್ಲಿ ಭೂಮಿಕಾಳ ಸೀರೆಗೆ ಬೆಂಕಿ ತಗುಲಿದಾಗ ಅದನ್ನು ನೋಡಿ ಕೂಗಿದ ಭಾಗ್ಯಮ್ಮನಿಗೆ ಮಾತು ಮರಳಿ ಬಂದಿದೆ. ಆದರೆ, ಶಕುಂತಲಾಳ ಮಾತಿಗೆ ಕಟ್ಟುಬಿದ್ದ ಭೂಮಿಕಾ, ಗೌತಮ್‌ನೊಂದಿಗೆ ಒಂದಾಗಲು ನಿರಾಕರಿಸಿದ್ದಾಳೆ.  

PREV
17
ದೇವರ ಸನ್ನಿಧಿಯಲ್ಲಿ...

ಅಮೃತಧಾರೆಯಲ್ಲಿ (Amruthadhaare) ದೇವಸ್ಥಾನದಲ್ಲಿ ಈಗ ಎಲ್ಲರೂ ಒಂದಾಗಿದ್ದಾರೆ. ಮಗ-ಸೊಸೆಯ ಸತ್ಯ ಗೊತ್ತಾದ ಭಾಗ್ಯಮ್ಮಾ ಅವರನ್ನು ಹುಡುಕಿ ದೇವಸ್ಥಾನಕ್ಕೆ ಬಂದಿದ್ದಾಳೆ. ಭಾಗ್ಯಮ್ಮ ಕಾಣೆಯಾಗಿದ್ದಾಳೆ ಎಂದು ಗೊತ್ತಾದ ಗೌತಮ್​ ಅದೇ ದೇವಸ್ಥಾನಕ್ಕೆ ಬಂದಿದ್ದಾನೆ.

27
ಎಲ್ಲರೂ ದೇವಸ್ಥಾನದಲ್ಲಿ

ಅತ್ತ ಭೂಮಿಕಾ, ಮಲ್ಲಿ ಮತ್ತು ಆಕಾಶ್​ ಕೂಡ ಪೂಜೆ ಕೊಡಲು ಅಲ್ಲಿಯೇ ಬಂದಿದ್ದಾರೆ. ಭೂಮಿಕಾ ಸೀರೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ, ಅದನ್ನು ನೋಡಿರೋ ಭಾಗ್ಯಮ್ಮಾ ಭೂಮಿಕಾ ಎಂದು ಕೂಗಿದ್ದಾಳೆ. ಅಲ್ಲಿಗೆ ಆಕೆಗೆ ಮರಳಿ ಮಾತು ಬಂದಿದೆ.

37
ಅಜ್ಜಿ-ಮೊಮ್ಮಗ ಒಂದು

ದೇವರ ಸನ್ನಿಧಿಯಲ್ಲಿ ಇನ್ನೇನು ಎಲ್ಲರೂ ಒಂದಾಗಿದ್ದಾರೆ. ಆಕಾಶ್​ನನ್ನು ನೋಡಿದ ಭಾಗ್ಯಮ್ಮ ತಬ್ಬಿ ಮುದ್ದಾಡಿದ್ದಾಳೆ. ಅವನು ನೀವು ಯಾರು ಎಂದು ಅಜ್ಜಿಯನ್ನು ಕೇಳಿದಾಗ ಆಕೆಗೆ ಅದ್ಯಾವ ಭಾವನೆ ಬಂದಿರಬೇಕು ಎಂದು ಊಹಿಸುವುದೂ ಕಷ್ಟ.

47
ಭಾಗ್ಯಮ್ಮ ಪ್ರಶ್ನೆ

ಅದೇ ವೇಳೆ, ಭೂಮಿಕಾಗೆ ಬುದ್ಧಿ ಹೇಳಿರುವ ಭಾಗ್ಯಮ್ಮ, ನೀವಿಬ್ಬರೂ ದೂರ ಇರೋದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ಅವನ ಮಗನ ಮೇಲೆ ನಿನ್ನಷ್ಟೇ ಹಕ್ಕು ಅವನಿಗೂ ಇದೆಯಲ್ವಾ ಎಂದು ಪ್ರಶ್ನಿಸಿದ್ದಾಳೆ. ಆದರೆ ನೀವಿಬ್ಬರೂ ಒಂದಾದರೆ ಗೌತಮ್​ನನ್ನು ಏನು ಮಾಡುತ್ತೇನೋ ಗೊತ್ತಿಲ್ಲ ಎನ್ನುವ ಶಕುಂತಲಾ ಮಾತಿಗೆ ಕಟ್ಟುಬಿದ್ದಿರೋ ಭೂಮಿಕಾ, ಒಂದಾಗಲು ಸಾಧ್ಯವಿಲ್ಲ ಎಂದಿದ್ದಾಳೆ.

57
ಉಲ್ಟಾ ಹೊಡೆದ ವೀಕ್ಷಕರು

ಆದರೆ, ಇಲ್ಲಿಯವರೆಗೆ ಭೂಮಿಕಾ ಮನಸ್ಸು ಬದಲಾಗಲಿ ಎಂದೇ ವೀಕ್ಷಕರು ಹೇಳುತ್ತಿದ್ದರು. ಆದರೆ ಇದೀಗ ಗೌತಮ್​ ಡ್ರೈವರ್​ ಆಗಿ ಬಂದಿದ್ದಾನೆ ಎಂದ ಮೇಲೆ ಮನೆ ಬಿಟ್ಟಿರುವುದು ಗೊತ್ತಾಗಿದೆ. ಇಲ್ಲಿಯವರೆಗೆ ಶಕುಂತಲಾ ಮಾಡಿರುವ ಕಿತಾಪತಿಗಳನ್ನು ದಿಟ್ಟತನದಿಂದ ಎದುರಿಸಿದ್ದಾಳೆ. 

67
ಹುಚ್ಚುತನದ ಪರಮಾವಧಿ

ಇಷ್ಟೆಲ್ಲ ಇದ್ದ ಮೇಲೆ ಅದೇನೋ ಒಂದು ಮಾತು ಹೇಳಿರುವುದನ್ನೇ ಕಟ್ಟಿಕೊಂಡು ಗೌತಮ್​ನನ್ನು ದೂರ ಇಟ್ಟಿರುವುದು ಹುಚ್ಚುತನದ ಪರಮಾವಧಿ, ಇದ್ಯಾಕೋ ಅತಿಯಾಯ್ತು ಎನ್ನುವುದು ವೀಕ್ಷಕರ ಅಭಿಮತ. ಗೌತಮ್​ ಬಳಿಯಾದರೂ ಸತ್ಯ ಹೇಳಬಹುದಿತ್ತು. ಅದನ್ನೂ ಬಿಟ್ಟು ಹುಚ್ಚುಚ್ಚಾಗಿ ಆಡುವುದು ಯಾಕೋ ಸರಿಯಿಲ್ಲ ಎನ್ನುತ್ತಿದ್ದಾರೆ. 

77
ವೀಕ್ಷಕರ ಬೇಸರ

ಭೂಮಿಕಾ ಹುಚ್ಚುತನ ಮಿತಿಮೀರಿ ಹೋಗಿದೆ. ಶಕುಂತಲಾ ಎಂಥವಳು ಎಂದು ಗೊತ್ತಿದ್ದರೂ, ತನ್ನ ಮಗನನ್ನು ಅಪ್ಪನಿಂದ ದೂರ ಮಾಡಿ, ಇಡೀ ಕುಟುಂಬದಿಂದ ದೂರ ಮಾಡಿ ಕ್ಷುಲ್ಲಕ ಕಾರಣಕ್ಕೆ ಹೀಗೆ ಮಾಡ್ತಿರೋ ರೋಲೇ ಸರಿಯಿಲ್ಲ, ಸೀರಿಯಲ್​ ಎಳೆಯಲು ಸುಖಾ ಸುಮ್ಮನೆ ಸೀರಿಯಲ್​ ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Read more Photos on
click me!

Recommended Stories