Bigg Boss Kannada Season 12: ಬಿಗ್ ಬಾಸ್ ಶೋನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ಆ ವೇಳೆ ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಜೋಡಿಯಾಗಿದ್ದರು. ಅಂದು ಎಲ್ಲರಿಗೂ ಇಷ್ಟವಾಗುತ್ತಿದ್ದ ರಕ್ಷಿತಾ ಶೆಟ್ಟಿ, ಈ ಬಾರಿ ಇರಿಟೇಟ್ ಆಗುವ ಹಾಗೆ ಮಾಡುತ್ತಿದ್ದಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.
ಕಲರ್ಸ್ ಕನ್ನಡವು ಹೊಸ ಪ್ರೋಮೋ ರಿಲೀಸ್ ಮಾಡಿದೆ. ಅದರಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಬಾಲ್‌ನ್ನು ಇಬ್ಬರು ಕೋಲಿನಿಂದ ತಗೊಂಡು, ಬಾಕ್ಸ್‌ನೊಳಗಡೆ ಹಾಕಬೇಕಿತ್ತು. ಆದರೆ ಯಾವುದೇ ಕಾರಣಕ್ಕೂ ಬಾಲ್ ಎತ್ತಲು ಕೈಬೆರಳು ಬಳಸಿ, ಮುಟ್ಟುವ ಹಾಗಿಲ್ಲ.
26
ನಿಯಮ ಪಾಲಿಸದ ರಕ್ಷಿತಾ ಶೆಟ್ಟಿ
ಮಾಳು ನಿಪನಾಳ, ರಕ್ಷಿತಾ ಶೆಟ್ಟಿ ಜೊತೆಯಾಗಿದ್ದರು. ಆ ವೇಳೆ ರಕ್ಷಿತಾ, ಮಾಳು ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಬಾಲ್ ಎತ್ತಿಕೊಂಡು, ಬರುವಾಗ ಕೈ ಬೆರಳು ಬಳಸಿಕೊಂಡಿದ್ದರು. ಇದು ಉಸ್ತುವಾರಿಯಾಗಿದ್ದ ಧ್ರುವಂತ್ ಕಣ್ಣಿಗೆ ಬಿದ್ದಿದೆ. ಅದನ್ನು ಅವರು ಹೇಳಿದಾಗ ರಕ್ಷಿತಾ ಪಾಲಿಸಲೇ ಇಲ್ಲ.
36
ಧ್ರುವಂತ್‌ಗೆ ಮೊದಲೇ ಗೊತ್ತಿತ್ತು
ರಕ್ಷಿತಾಗೆ ಕನ್ನಡ ಬಂದರೂ ಸರಿಯಾಗಿ ಮಾತನಾಡೋದಿಲ್ಲ, ಅವಳದ್ದು ನಾಟಕ ಎಂದು ಧ್ರುವಂತ್ ಹೇಳಿದ್ದರು. ಧ್ರುವಂತ್‌ಗೆ ಮೊದಲೇ ಅರ್ಥ ಆಗಿತ್ತು, ನಮಗೆ ಈಗ ಗೊತ್ತಾಗಿದೆ ಎಂದು ಹೊರಗಡೆ ಬಂದಿರೋ ಜಾಹ್ನವಿ ಹೇಳಿದ್ದಾರೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ರಕ್ಷಿತಾ ಶೆಟ್ಟಿ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ, ಧ್ರುವಂತ್ ಮಾತಿಗೆ ತಿರುಗಿ ಬಿದ್ದಿದ್ದಾರೆ. ಇದರ ಜೊತೆಗೆ ಉಳಿದವರು ಏನೂ ಹೇಳಿದರೂ ಕೇಳದೆ, ವ್ಯಂಗ್ಯ ಮಾಡಿದ್ದಾರೆ. ಆಮೇಲೆ ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ನೀರಿನಲ್ಲಿ ಕೋಲಿನಿಂದ ಹೊಡೆದಿದ್ದಾರೆ. ನಿಲ್ಲಿಸು ಎಂದರೂ ಕೂಡ ಅವರು ಕೇಳಲಿಲ್ಲ.
56
ವೀಕ್ಷಕರು ಏನು ಹೇಳಿದರು?
ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದು, ರಕ್ಷಿತಾ ಶೆಟ್ಟಿಯದ್ದು ತುಂಬ ಓವರ್ ಆಯ್ತು. ಕಿಚ್ಚನ ಚಪ್ಪಾಳೆ ಸಿಕ್ಕಿದಮೇಲೆ ಇವಳೇ ಯಾವಾಗಲೂ ಹೋಗಿ ನಿದ್ದೆ ಮಾಡ್ತಾಳೆ. ಗಿಲ್ಲಿಗೆ ಮನೆ ಕೆಲಸ ಮಾಡಲ್ಲ ಅಂತ ಡಬ್ಬ ರೀಸನ್ ಕೊಡ್ತಾಳೆ. ರಕ್ಷಿತಾ ಮೊದಲು ಬಂದು ಹೊರ ಕೂರಿಸಿದಾಗ ತುಂಬಾನೆ ಬೇಜಾರ್ ಆಗಿತ್ತು. ಒಂದೇ ದಿನದಲ್ಲಿ ಆಕೆಯ ಮುಗ್ಧತೆ ಮಾತು ಮನಸ್ಸಿಗೆ ಇಷ್ಟ ಆಗಿತ್ತು. ಆದರೆ ಆಕೆ ಮುಖವಾಡ ಹಾಕಿಕೊಂಡು, ಲೆಕ್ಕಾಚಾರ ಇಟ್ಟು ಆಡೋಳು ಅಂತ ಧ್ರುವಂತ್ ಹೇಳಿದಾಗಲೂ ಕೂಡ ನಂಬಿರಲಿಲ್ಲ. ಈಗ ರಕ್ಷಿತಾಗಿಂತ ಅಶ್ವಿನಿ ಅವರು ಬೆಟರ್ ಅನಿಸ್ತಾರೆ ಎಂದು ಅರ್ಥ ಆಗಿದೆ ಎಂದಿದ್ದಾರೆ.
66
ಓವರ್ ಆಗಿ ಆಡ್ತಿದ್ದಾರೆ ಎಂದ ವೀಕ್ಷಕರು
ರಕ್ಷಿತಾ ಬರ್ತಾ ಬರ್ತಾ ತುಂಬ ಓವರ್ ಆಗಿ ಆಡ್ತಿದಾಳೆ
ತೀರ್ಪುಗರಿಕೆ ಅಂದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಆಗಬಾರದು. ಕೊಟ್ಟಿರೋ ನಿಯಮನುಸಾರ ಅಚ್ಚುಕಟ್ಟಾಗಿ ನಿಯಮ ಉಲ್ಲಂಘನೆಯಾದಾಗ ಅದನ್ನು ವಿರೋಧಿಸಿ ಸೂಕ್ತ ಸರಿಯಾಗಿ ಆಡೋ ಆಟಗಾರರಿಗೆ ನ್ಯಾಯ ಒದಗಿಸೋದು. ಬಿಗ್ ಬಾಸ್ ಶೋನ ನಿಯಮನುಸಾರ ಧ್ರುವಂತ್ ಅವರು ಈ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ, ಮನೆಯ ಕೆಲಸ ಕೂಡ ಅತ್ಯಂತ ಶಿಸ್ತಿನಿಂದ ಮಾಡುತ್ತಾರೆ. ಈ ವಾರದ ಕಿಚ್ಚನ ಚಪ್ಪಾಳೆ ಧ್ರುವಂತ್ ಅವರಿಗೆ ಸಿಗಬೇಕು.