Bigg Bossನಿಂದ ಹೊರಬರುತ್ತಿದ್ದಂತೆಯೇ 2ನೇ ಮದುವೆ ಬಗ್ಗೆ ಮೌನ ಮುರಿದ ಜಾಹ್ನವಿ ಹೇಳಿದ್ದೇನು?

Published : Dec 03, 2025, 12:35 PM IST

ಬಿಗ್​ಬಾಸ್​ 12 ರಿಂದ ಅಚ್ಚರಿಯ ರೀತಿಯಲ್ಲಿ ಹೊರಬಂದಿರುವ ನಟಿ ಜಾಹ್ನವಿ, ತಮ್ಮ ಮುಂದಿನ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಎರಡನೇ ಮದುವೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,  ಮನದಾಳದ ಮಾತುಗಳನ್ನು ಹೇಳಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

PREV
18
ಬಿಗ್​ಬಾಸ್​ನಿಂದ ಹೊರಬಂದ ಜಾಹ್ನವಿ

ಬಿಗ್​ಬಾಸ್​ 12 (Bigg Boss 12)ರಲ್ಲಿ ಫೈನಲಿಸ್ಟ್​ ಆಗಬಹುದು ಎಂದು ಹಲವರು ಅಂದುಕೊಂಡಿದ್ದ ಜಾಹ್ನವಿ ಅವರು ಅಚ್ಚರಿ ಎನ್ನುವಂತೆ ಹೊರಕ್ಕೆ ಬಂದಿದ್ದಾರೆ. ನಾನು ಅಲ್ಲಿಯೇ ಇರುವಂಥ ಸ್ಪರ್ಧಿ ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಯಾಕೆ ಹೊರಕ್ಕೆ ಬಂದೆನೋ ಗೊತ್ತಾಗುತ್ತಿಲ್ಲ. ನಾನು ಫೈನಲಿಸ್ಟ್​ ಆಗಬೇಕಿತ್ತು ಎಂದು ಇದಾಗಲೇ ನೋವು ತೋಡಿಕೊಂಡಿದ್ದಾರೆ ನಟಿ.

28
ಬಿಗ್​ಬಾಸ್​​ನಲ್ಲಿ ಅವಕಾಶ

ಅಷ್ಟಕ್ಕೂ ಜಾಹ್ನವಿ (Bigg Boss Jhanvi) ಅವರು ಇದಾಗಲೇ ನಟಿ ಮತ್ತು ಆ್ಯಂಕರ್​ ಆಗಿ ಗುರುತಿಸಿಕೊಂಡವರು. ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಕೆಲವೇ ದಿನಗಳ ಮೊದಲು ಅವರು ಹಲವಾರು ವಾಹಿನಿ ಮತ್ತು ಯುಟ್ಯೂಬ್​ಗಳಿಗೆ ಡಿವೋರ್ಸ್​ ಬಗ್ಗೆ ಸಂದರ್ಶನ ನೀಡಿ ಫೇಮಸ್​ ಆಗಿದ್ದರು. ಬಳಿಕ ಬಿಗ್​ಬಾಸ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡರು.

38
ಮದುವೆ ಬಗ್ಗೆ ಚರ್ಚೆ

ಬಿಗ್​ಬಾಸ್​​ ಮನೆಯಲ್ಲಿ ಇರುವಾಗಲೂ ಅವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಿಗ್​ಬಾಸ್​ ಮನೆಯ ಒಳಗೆ ಜಾಹ್ನವಿ ಅವರು ತಮ್ಮ ಮಾಜಿ ಪತಿಯ ವಿರುದ್ಧ ಮಾತನಾಡಿದ್ದರೆ, ಇತ್ತ ಅವರ ಮಾಜಿ ಪತಿ ಹಲವಾರು ಮಾಧ್ಯಮಗಳ ಮುಂದೆ ಜಾಹ್ನವಿ ಅವರ ಚರಿತ್ರೆಯ ಬಗ್ಗೆಯೂ ವಿವಾದಿತ ಹೇಳಿಕೆಗಳನ್ನೂ ನೀಡಿದ್ದರು.

48
ಖಾಸಗಿ ಜೀವನ

ಇವರು ಸರಿಯಲ್ಲ ಎಂದು ಅವರು, ಅವರು ಸರಿಯಿಲ್ಲ ಎಂದು ಇವರು ಒಟ್ಟಿನಲ್ಲಿ ಇವರ ಖಾಸಗಿ ಜೀವನವು ಜನರ ಬಾಯಲ್ಲಿ ಆಹಾರವಾಗಿತ್ತು, ಒಂದರ್ಥದಲ್ಲಿ ಖುದ್ದು ಜಾಹ್ನವಿ ಅವರೇ ಬಿಗ್​ಬಾಸ್​ಗೆ ಹೋಗುವ ಮುನ್ನವೇ ತಮ್ಮ ಖಾಸಗಿ ಸಂಗತಿಗಳನ್ನು ಹಲವು ಕಡೆ ಹೇಳಿದಾಗಲೇ ಇದರ ಬಗ್ಗೆ ಬಹಳ ಚರ್ಚೆಯಾಗುತ್ತಲೇ ಇತ್ತು.

58
ಎರಡನೆಯ ಮದುವೆಯ ಬಗ್ಗೆ...

ಇದೀಗ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಸಹಜವಾಗಿ ಹಲವಾರು ಮಾಧ್ಯಮಗಳಲ್ಲಿ, ಯುಟ್ಯೂಬ್​ಗಳಲ್ಲಿ ಜಾಹ್ನವಿಯವರ ಸಂದರ್ಶನ ತೆಗೆದುಕೊಳ್ಳಲಾಗುತ್ತಿದೆ. ಅವರಿಗೆ ಒಂದೆಡೆ ಎರಡನೆಯ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅದರ ಬಗ್ಗೆ ನಟಿ ಓಪನ್​ ಆಗಿಯೇ ಮಾತನಾಡಿದ್ದಾರೆ.

68
ಮದುವೆ ಆಲೋಚನೆ ಇಲ್ಲ

ನನಗೆ ಎರಡನೆಯ ಮದುವೆಯ ಬಗ್ಗೆ ಆಲೋಚನೆ ಇಲ್ಲ. ನಾನು ಇನ್ನೊಂದು ಮದುವೆಯನ್ನೂ ಆಗುವುದಿಲ್ಲ. ನನಗೆ ಒಬ್ಬ ಮಗನಿದ್ದು, ಅವನೇ ನನ್ನ ಸರ್ವಸ್ವ. ಅವನನ್ನು ಚೆನ್ನಾಗಿ ಬೆಳೆಸುವುದೇ ನನ್ನ ಗುರಿ ಎಂದಿದ್ದಾರೆ.

78
ಇನ್ನೊಬ್ಬ ಪರ್ಸನ್​

ಮತ್ತೊಂದು ಮದುವೆಯಿಂದ ಲೈಫ್​ನಲ್ಲಿ ಬದಲಾವಣೆ ಆಗುತ್ತದೆ ಎಂದು ನನಗೆ ಎನ್ನಿಸುವುದಿಲ್ಲ. ನನ್ನ ಮಗನ ಜೊತೆ ಚೆನ್ನಾಗಿದ್ದರೆ ನನಗೆ ಅದೇ ಖುಷಿ. ಇನ್ನೊಬ್ಬ ಪರ್ಸನ್​ ನನ್ನ ಲೈಫ್​ನಲ್ಲಿ ಬೇಕು ಎಂದು ನನಗೆ ಎನ್ನಿಸುವುದಿಲ್ಲ, ಇನ್ನು ಮುಂದೆ ಕೂಡ ಎನ್ನಿಸುವುದಿಲ್ಲ ಎಂದಿದ್ದಾರೆ.

88
ಖಡಾಖಂಡಿತ ಮಾತು

ಅಲ್ಲಿಗೆ ಜಾಹ್ನವಿ ಮತ್ತೊಂದು ಮದುವೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇನ್ನು ಮುಂದೆ ಜಾಹ್ನವಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡಬೇಕು ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ​

Read more Photos on
click me!

Recommended Stories