Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​

Published : Dec 23, 2025, 12:00 PM IST

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಆ್ಯಂಕರ್​ ಜಾಹ್ನವಿ, ತಮ್ಮ ಎಲಿಮಿನೇಷನ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮನೆಯೊಳಗಿನ ಜಗಳಗಳಿಂದಾಗಿ ತಮ್ಮ ಇಮೇಜ್ ಬದಲಾಗಿದ್ದು, ಮದುವೆ ಪ್ರಸ್ತಾಪಗಳು ಬರುವುದೂ ನಿಂತುಹೋಗಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

PREV
15
ಬಿಗ್​ಬಾಸ್​ನಲ್ಲಿ ಜಾಹ್ನವಿ ಹವಾ

ಬಿಗ್​ಬಾಸ್​ (BBK 12) ಮೂಲಕ ಹೈಪ್​ ಕ್ರಿಯೇಟ್​ ಮಾಡಿದ್ದ ಆ್ಯಂಕರ್​ ಜಾಹ್ನವಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಿರುವ ಕಾರಣ, ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ತಾವೇ ಫೈನಲಿಸ್ಟ್​ ಆಗಲು ಸೂಕ್ತ ಸ್ಪರ್ಧಿಯಾಗಿತ್ತು ಎಂದು ಈಗಲೂ ಅಂದುಕೊಂಡಿರುವ ಜಾಹ್ನವಿ ಅವರಿಗೆ ಎಲಿಮಿನೇಷನ್​ ಶಾಕ್​ ಕೊಟ್ಟಿದೆ.

25
ಪರ್ಸನಲ್​ ವಿಷ್ಯ

ಬಿಗ್​ಬಾಸ್​ನಲ್ಲಿ (Bigg Boss Kannada 12) ಇದ್ದ ಸಂದರ್ಭದಲ್ಲಿ ಜಾಹ್ನವಿ ಅವರ ಪರ್ಸನಲ್​ ವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅವರ ಮಾಜಿ ಪತಿ ಹೊರಗಡೆ ಮಾಧ್ಯಮಗಳ ಎದುರು ಜಾಹ್ನವಿ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದರು. ಜಾಹ್ನವಿ ಬಿಗ್​ಬಾಸ್​​ ಮನೆಯಲ್ಲಿ ತಮ್ಮ ಡಿವೋರ್ಸ್​ ಬಗ್ಗೆ ಮಾತನಾಡಿದ್ದ ಹಿನ್ನೆಲೆಯಲ್ಲಿ, ಹೊರಗಡೆ ಈ ರೀತಿ ವಾತಾವರಣ ಸೃಷ್ಟಿಯಾಗಿತ್ತು.

35
2ನೇ ಮದುವೆ

ಇದೀಗ ಜಾಹ್ನವಿ ಅವರಿಗೆ ಓರ್ವ ಮಗ ಕೂಡ ಇದ್ದು, 2ನೇ ಮದುವೆಯ ಮಾತೇ ಇಲ್ಲ ಎಂದು ಮಾಧ್ಯಮಗಳ ಮುಂದೆ ಸಾಕಷ್ಟು ಬಾರಿ ಹೇಳಿದ್ದರೂ, ಈಗಲೇ ಅಷ್ಟೇ ಸ್ಮಾರ್ಟ್​ ಆ್ಯಂಡ್ ಯಂಗ್​ ಆಗಿರೋ ಜಾಹ್ನವಿ 2ನೇ ಮದುವೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯಾಗುತ್ತಲೇ ಇರುತ್ತದೆ.

45
ಜಗಳದಿಂದ ಫೇಮಸ್​

ಅಷ್ಟಕ್ಕೂ ಜಾಹ್ನವಿ ಅವರು ಬಿಗ್​ಬಾಸ್​ ಮನೆಯಲ್ಲಿ ಇದ್ದಾಗ ಜಗಳದಿಂದಲೇ ಸಕತ್​ ಫೇಮಸ್​ ಆದವರು. ಅಶ್ವಿನಿ ಗೌಡ (Bigg Boss Ashwini Gowda) ಅವರ ಜೊತೆ ಸೇರಿ ಇಬ್ಬರೂ ಅದಕ್ಕೇ ಫೇಮಸ್​ ಆಗಿದ್ದರು. ಆಟದಲ್ಲಿ ಇವೆಲ್ಲಾ ಮಾಮೂಲು ಆದರೂ ವೀಕ್ಷಕರ ಕಣ್ಣಲ್ಲಿ ಕೆಲವರು ಜಗಳ ಮಾಡಿ ಅದೇ ಇಮೇಜ್​ ಕ್ರಿಯೇಟ್​ ಮಾಡಿಬಿಟ್ಟಿರುತ್ತಾರೆ.

55
ಮೆಸೇಜ್​ ಕೂಡ ಸ್ಟಾಪ್​

ಇದೀಗ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಜಾಹ್ನವಿ ಅದಂತೂ ಸಾಧ್ಯವೇ ಇಲ್ಲ. ಅಷ್ಟೇ ಏಕೆ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಅಲ್ಲಿಯ ಜಗಳ ನೋಡಿ ನನಗೆ ಮೆಸೇಜ್​ ಮಾಡುವವರೂ ಸ್ಟಾಪ್​ ಮಾಡಿಬಿಟ್ಟಿದ್ದಾರೆ. ಅಂಥ ಇಮೇಜ್​ ಕ್ರಿಯೇಟ್​ ಆಗಿ ಬಿಟ್ಟಿದೆ ಎಂದು ಸುಮನ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories