Bigg Bossನಲ್ಲಿ ಹವಾ ಸೃಷ್ಟಿಸಿರೋ ಗಿಲ್ಲಿ ನಟನ ಯುಟ್ಯೂಬ್​ ಆದಾಯ ಎಷ್ಟು ಗೊತ್ತಾ? ನಲ್ಲಿಮೂಳೆಯಿಂದ್ಲೇ ಸಕತ್​ ಫೇಮಸ್​ ಇವ್ರು!

Published : Nov 21, 2025, 02:02 PM IST

ಬಿಗ್ ಬಾಸ್‌ನಲ್ಲಿ ಜನಪ್ರಿಯರಾಗಿರುವ ಗಿಲ್ಲಿ ನಟ ಅಲಿಯಾಸ್ ನಟರಾಜ್, ಮಂಡ್ಯದ ರೈತ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ 'ನಲ್ಲಿಮೂಳೆ' ಕಾಮಿಡಿ ವಿಡಿಯೋಗಳಿಂದ ಯೂಟ್ಯೂಬ್‌ನಲ್ಲಿ ಪ್ರಸಿದ್ಧರಾದ ಇವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
17
ಗಿಲ್ಲಿ ನಟ ಹವಾ

ಈ ಬಾರಿಯ ಬಿಗ್​ಬಾಸ್​ (Bigg Boss)ನಲ್ಲಿ ಗಿಲ್ಲಿ ನಟನ ಹವಾ ಜೋರಾಗಿಯೇ ಇದೆ. ಇವರೇ ವಿನ್ನರ್​ ಎಂದು ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಘೋಷಿಸಿಯೂ ಆಗಿದ್ದು, ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿರೋ ಸ್ಪರ್ಧಿಗಳು ಹಾಗೂ ಹಿಂದಿನ ಸ್ಪರ್ಧಿಗಳ ಪೈಕಿ ಹಲವರು ಕೂಡ ಗಿಲ್ಲಿ ನಟನ ಹೆಸರನ್ನೇ ಹೇಳಿದ್ದಾರೆ.

27
ಜನಮನ ಗೆದ್ದ ಗಿಲ್ಲಿ ನಟ

ಕಾಮಿಡಿಯ ಮೂಲಕವೇ ಜನಮನ ಗೆದ್ದಿರೋ ಗಿಲ್ಲಿ ನಟ (Bigg Boss Gilli Nata) ರಿಯಲ್​ ಹೆಸರು ನಟರಾಜ್​. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ರೈತಾಪಿ ಕುಟುಂಬದವರು ಇವರು. ಎಸ್​ಎಸ್​ಎಲ್​ಸಿ ಬಳಿಕ 2 ವರ್ಷಗಳ ಐಟಿಐ ಕೋರ್ಸ್​ ಮುಗಿಸಿ ಯುಟ್ಯೂಬ್​ ಶುರು ಮಾಡಿ ಅಲ್ಲಿಂದಲೇ ಜನಪ್ರಿಯವಾದವರು.

37
ನಲ್ಲಿಮೂಳೆ ಫೇಮಸ್​

ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿ ಕಾಮಿಡಿ ಸ್ಕಿಟ್‌ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಇವರ ʻನಲ್ಲಿಮೂಳೆʼ ಸಕತ್​ ಫೇಮಸ್​​ ಆಗಿ, ಮಿಲಿಯನ್‌ಗಟ್ಟಲೇ ವ್ಯೂವ್ಸ್​ ಬಂದು, ರಿಯಾಲಿಟಿ ಷೋಗೆ ಅವಕಾಶ ಸಿಕ್ಕು, ಈಗ ಬಿಗ್​ಬಾಸ್​ವರೆಗೂ ಹೋಗಿದ್ದಾರೆ.

47
ಯುಟ್ಯೂಬ್​ ಆದಾಯ

ಇನ್ನು ಇವರ ಯುಟ್ಯೂಬ್​ ಆದಾಯದ ಕುರಿತು ಯುಟ್ಯೂಬರ್​ ಪ್ರಶಾಂತ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದಾರೆ. ಗಿಲ್ಲಿ ನಟ ಹಾಕಿರುವ ವಿಡಿಯೋ ಇತ್ಯಾದಿಗಳ ಲೆಕ್ಕಾಚಾರದ ಆಧಾರದ ಮೇಲೆ ಅವರು ಈ ಮಾಹಿತಿಯನ್ನು ಶೇರ್​ ಮಾಡಿದ್ದಾರೆ.

57
2.34 ಲಕ್ಷ ಜನ ಚಂದಾದಾರರು

ಇವರ ಚಾನೆಲ್​ನಲ್ಲಿ 2.34 ಲಕ್ಷ ಜನ ಚಂದಾದಾರರು ಇದ್ದಾರೆ. 14 ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಏಕೆಂದರೆ ಇವರ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳು ಇದ್ದರೂ, ಅವುಗಳನ್ನೆಲ್ಲಾ ಗಿಲ್ಲಿ ನಟ ನಿರ್ದೇಶಿಸಿರುವುದು ಮಾತ್ರ ಆಗಿರುವ ಕಾರಣ, ಈ ಲೆಕ್ಕಾಚಾರ ಗಿಲ್ಲಿನಟ ಶೇರ್​ ಮಾಡಿರುವ ವಿಡಿಯೋಗಳ ಸಂಪಾದನೆ ಲೆಕ್ಕಾಚಾರವಾಗಿದೆ.

67
ಮನೋರಂಜನಾ ಕ್ಯಾಟಗರಿ

ಇವರ ವಿಡಿಯೋ ಡ್ಯುರೇಷನ್​ 8 ರಿಂದ 12 ನಿಮಿಷಗಳು ಇವೆ. ಮನೋರಂಜನಾ ಕ್ಯಾಟಗರಿಗೆ ಸೇರಿವೆ. ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡರೆ ಇವರ ಒಂದು ಲಕ್ಷ ವ್ಯೂವ್ಸ್​ಗೆ 50 ಸಾವಿರ ರೂಪಾಯಿ ಸಿಗುತ್ತದೆ. ಏಕೆಂದರೆ ಒಂದು ಸಾವಿರ ವ್ಯೂವ್ಸ್​ಗೆ ಸಿಗುವುದು 50 ರೂಪಾಯಿಗಳು.

77
37.33 ಮಿಲಿಯನ್​ ವೀಕ್ಷಣೆ

ಗಿಲ್ಲಿ ನಟನ ಇದುವರೆಗಿನ ವಿಡಿಯೋಗಳ ವೀಕ್ಷಣೆ 37.33 ಮಿಲಿಯನ್​ ಆಗಿರುವ ಕಾರಣ, 18 ಲಕ್ಷದ 66 ಸಾವಿರ ರೂಪಾಯಿಗಳನ್ನು ಅಂದಾಜು ಗಳಿಸಿದ್ದಾರೆ ಎಂದು ಪ್ರಶಾಂತ್​ ಅವರು ಲೆಕ್ಕಾಚಾರ ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories