ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರದ ಕೊನೆಯ ಟಾಸ್ಕ್ ನೀಡಿದ್ದರು. ‘ಸೇತುವೆ ಸವಾಲು’ ಎನ್ನುವ ಟಾಸ್ಕ್‌ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ತಮ್ಮ ಟೀಂನಿಂದ ಆಡುವವರನ್ನು ಆಯ್ಕೆ ಮಾಡಬೇಕಿತ್ತು. ಈ ಆಟದಲ್ಲಿ ಸಣ್ಣಗಿರುವವರು ಒಬ್ಬರು ಸಿಕ್ಕರೆ ಆಟ ಸುಲಭವಾಗುತ್ತಿತ್ತು.
ಈ ಆಟದಲ್ಲಿ ಎರಡು ಹಂತಗಳಿತ್ತು. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ಟೀಂ ಸೇರಿಕೊಂಡರು. ಅಶ್ವಿನಿ ಗೌಡ ಪ್ರಯತ್ನಪಟ್ಟರೂ ಕೂಡ ರಕ್ಷಿತಾ ಶೆಟ್ಟಿಯಾಗಲೀ, ಕಾವ್ಯ ಶೈವ ಆಗಲೀ ಅವರ ಟೀಂಗೆ ಬರಲಿಲ್ಲ. ಆದರೆ ರಕ್ಷಿತಾ ಮಾತ್ರ ನಾನು ಗಿಲ್ಲಿ ಟೀಂನಲ್ಲಿ ಆಡೋದು ಎಂದು ಫಿಕ್ಸ್ ಆಗಿದ್ದರು. ಕಾವ್ಯ ಶೈವ ಆ ಟೀಂಗೆ ಹೋದರೆ ಕಷ್ಟ ಆಗುತ್ತಿತ್ತು ಎಂದು ಗಿಲ್ಲಿಗೆ ಗೊತ್ತಿತ್ತು. ಆದರೆ ಕಾವ್ಯ ಅವರ ಟೀಂಗೆ ಹೋಗಲಿಲ್ಲ. ಇದು ಗಿಲ್ಲಿಗೆ ವರವಾಗಿತ್ತು.
25
ಟೀಂನಲ್ಲಿ ಯಾರಿದ್ದಾರೆ?
ರಘು, ಸೂರಜ್, ಧ್ರುವಂತ್, ರಾಶಿಕಾ ಶೆಟ್ಟಿ, ರಕ್ಷಿತಾ ಅವರು ಗಿಲ್ಲಿ ಪರವಾಗಿ ಆಡಿದ್ದರು. ಜಾಹ್ನವಿ, ಮಾಳು ನಿಪನಾಳ, ಅಭಿಷೇಕ್, ರಿಷಾ ಗೌಡ, ಧನುಷ್ ಗೌಡ ಅವರು ಅಶ್ವಿನಿ ಗೌಡ ಪರವಾಗಿ ಆಡಿದ್ದರು. ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಅವರು ಉಸ್ತುವಾರಿ ವಹಿಸಿಕೊಂಡಿದ್ದರು.
35
ಗಿಲ್ಲಿ ನಟ ಗೆದ್ದರು
ಕೊನೆಯಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ ಅವರು ಕಾರ್ಡ್ ಜೋಡಿಸಿ, ಬಾಲ್ ಆ ಕಾರ್ಡ್ ಮಧ್ಯೆದಲ್ಲಿರುವ ಚಕ್ರವ್ಯೂಹದಲ್ಲಿ ಹಾಕಿ, ಕೊನೆಯಲ್ಲಿ ಅಲ್ಲಿದ್ದ ತೂತಿನೊಳಗಡೆ ಬಾಲ್ ಹಾಕಬೇಕಿತ್ತು. ಅಶ್ವಿನಿ ಅವರಿಗೆ ಸರಿಯಾಗಿ ಕಾರ್ಡ್ ಜೋಡಿಸಲು ಆಗಲೇ ಇಲ್ಲ, ಆದರೆ ಗಿಲ್ಲಿ ನಟ ಮಾತ್ರ ಸರಿಯಾಗಿ ಜೋಡಿಸಿ, ಬಾಲ್ ಬೀಳುವಂತೆ ಮಾಡಿದ್ದರು.
ಗಿಲ್ಲಿ ಯಾವ ಟೀಂನಲ್ಲಿ ಇರುತ್ತಾರೋ ಅಲ್ಲಿ ಸೋಲು ಖಚಿತ ಎಂದು ಧನುಷ್ ಗೌಡ, ಅಭಿಷೇಕ್, ಅಶ್ವಿನಿ ಗೌಡ, ಜಾಹ್ನವಿ ಕೂಡ ಮಾತನಾಡಿಕೊಂಡಿದ್ದರು. ಇನ್ನೊಮ್ಮೆ ಅವರು ಆಟದಲ್ಲಿ ಏನಾದರೊಂದು ತೊಂದರೆ ಮಾಡುತ್ತಾರೆ, ಅಭಿಪ್ರಾಯ ಹೇಳಲ್ಲ ಎಂದು ಕೂಡ ಆರೋಪವಿತ್ತು.
55
ಅಣ್ಣ-ತಂಗಿ ಒಂದಾದರು
ಈ ಬಾರಿ ಗಿಲ್ಲಿ ನಟ ಅವರು ಮಾತ್ರ ಸಖತ್ ಆಗಿ ಆಡಿದ್ದರು. ರಕ್ಷಿತಾ ಕೂಡ ಇದಕ್ಕೆ ಸಾಥ್ ಕೊಟ್ಟರು, ರಕ್ಷಿತಾ-ಗಿಲ್ಲಿ ನಟ ಸೇರಿದ್ರೆ ಮಾತ್ರ ಸುನಾಮಿ, ಬಿರುಗಾಳಿ ಎಂಬ ಮಾತು ವೀಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಕೊನೆಗೆ ತನಗೂ ಟಾಸ್ಕ್ ಆಡೋಕೆ ಬರುತ್ತದೆ ಎಂದು ಗಿಲ್ಲಿ ಸಾಬೀತುಪಡಿಸಿದ್ದಾರೆ.