Bigg Boss Gilli Nata New Movie: ಗಿಲ್ಲಿ ನಟ ಅವರಿಗೆ ಇಂದು ಜನ್ಮದಿನದ ವಿಶೇಷ. ಈ ದಿನವೇ ಅವರ ‘ಪಳಾರ್’ ಸಿನಿಮಾ ಘೋಷಣೆ ಆಗಿದೆ. ಈ ಹಿಂದೆ ಬಿಗ್ ಬಾಸ್ ಶೋನಲ್ಲಿದ್ದಾಗ ಗಿಲ್ಲಿ ನಟ ಅವರಿಗೆ ಪಳಾರ್ ಗಿಲ್ಲಿ ಎಂಬ ಬಿರುದು ಸಿಕ್ಕಿತ್ತು. ಈಗ ಈ ಹೆಸರಿನಲ್ಲೇ ಸಿನಿಮಾ ಅವಕಾಶ ಸಿಕ್ಕಿದೆ.
ಪಳಾರ್ ಶಬ್ದ ಫೇಮಸ್ ಆಗಿದೆ. ಈ ಪಾತ್ರಕ್ಕೆ ಪಳಾರ್ ಎನ್ನೋ ಹೆಸರು ಹೊಂದಿಕೆ ಆಗುತ್ತೆ, ಪಳಾರ್ ಅಂದರೆ ಬುದ್ಧಿವಂತ, ಕಿಲಾಡಿ ಎಂದರ್ಥ ಎಂದು ನಿರ್ದೇಶಕ ಚಂದ್ರಮೋಹನ್ ಹೇಳಿದ್ದಾರೆ. ಈಗಾಗಲೇ ನಿರ್ದೇಶಕರು 4-5 ಸಿನಿಮಾಗಳನ್ನು ಮಾಡಿದ್ದಾರಂತೆ. ನನಗೆ ಸಿನಿಮಾ ಎನ್ನೋದು ಹೊಸತು, ಈಗ ಸಿನಿಮಾ ತಂಡದಲ್ಲಿ ಎಲ್ಲರಿಗೂ ಅನುಭವ ಇರೋದರಿಂದ ಇದನ್ನು ಆಯ್ಕೆ ಮಾಡಿಕೊಳ್ಳೋದು ಒಳ್ಳೆಯದು ಎಂದು ಹೇಳಿದ್ದಾರೆ.
24
ಗಿಲ್ಲಿ ನಟ ಏನಂದ್ರು?
“ನಾನು ಈ ಹಿಂದೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಹೀಗಾಗಿ ನಾನು ಎಲ್ಲ ಅವಕಾಶಗಳನ್ನು ಸ್ವೀಕಾರ ಮಾಡಲಿಲ್ಲ. ಚಂದ್ರಮೋಹನ್ ಅವರು ಬಾಂಬೆ ಮಿಠಾಯಿ ಸಿನಿಮಾ ಮಾಡಿದ್ದರು. ಆ ಸಿನಿಮಾ ನೋಡಿ ಇಷ್ಟಪಟ್ಟಿದ್ದೆ. ಈಗ ಇವರ ಜೊತೆ ಸಿನಿಮಾ ಮಾಡೋದು ಖುಷಿ ಕೊಡ್ತಿದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.
34
ಎಷ್ಟು ಸಂಭಾವನೆ ತಗೊಂಡ್ರು?
ಗಿಲ್ಲಿ ನಟ ಅವರು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಅವರು ಇಲ್ಲ ಎಂದು ಹೇಳಿದ್ದಾರೆ, ಆದರೆ ಸ್ಪಷ್ಟವಾಗಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಕೆವಿಎನ್ ಸಂಸ್ಥೆ ಜೊತೆ ಸಿನಿಮಾ ಮಾಡುತ್ತಿರೋದು ಖುಷಿ ಇದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಗಿಲ್ಲಿ ನಟ ಅವರ ‘ಪಳಾರ್’ ಸಿನಿಮಾಗೆ ಹೀರೋಯಿನ್ ಯಾರು ಎಂಬ ಪ್ರಶ್ನೆ ಇದೆ. ಬಿಗ್ ಬಾಸ್ ಶೋನಲ್ಲಿ ಕಾವ್ಯ, ಗಿಲ್ಲಿ ಸ್ನೇಹ ಅನೇಕರಿಗೆ ಇಷ್ಟ ಆಗಿತ್ತು. ಈಗ ಕಾವ್ಯ ಅವರೇ ಹೀರೋಯಿನ್ ಎನ್ನಲಾಗಿತ್ತು. ಈ ಬಗ್ಗೆ ಈಗಲೇ ಏನೂ ಹೇಳೋದಿಲ್ಲ ಎಂದು ನಿರ್ದೇಶಕ ಚಂದ್ರ ಮೋಹನ್ ಅವರು ಹೇಳಿದ್ದಾರೆ. “ಆ ಸಸ್ಪೆನ್ಸ್ ಹಾಗೆ ಇರಲಿ, ಮುಂದಿನ ದಿನಗಳಲ್ಲಿ ಹೇಳ್ತೀವಿ” ಎಂದು ಹೇಳಿದ್ದಾರೆ ಗಿಲ್ಲಿ ನಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.