ಮಗ, ಮೊಮ್ಮಕ್ಕಳಿದ್ರೂ ಒಂಟಿಯಾಗಿ ಬದುಕ್ತಿರೋ ಸೂಪರ್‌ ಹಿಟ್‌ ಧಾರಾವಾಹಿ ನಟಿ; ಈಗ 80ರ ಹರೆಯ

Published : Jun 21, 2026, 10:44 AM IST

Usha Nadkarni: ಖ್ಯಾತ ಧಾರಾವಾಹಿ ನಟಿಯೋರ್ವರು ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾರೆ. 1987ರಿಂದ ಇಲ್ಲಿಯವರೆಗೆ ಅವರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ಅವರೇ ಉಷಾ ನಾಡಕರ್ಣಿ. ಇದಕ್ಕೆ ಕಾರಣ ಏನು? ಏನಾಯಿತು? 

PREV
14
ನಾಲ್ಕನೇ ತರಗತಿಯಿಂದ ನಟನೆ

ಉಷಾ ನಾಡಕರ್ಣಿ ತಮ್ಮ ನಟನಾ ಪಯಣವನ್ನು ನಾಲ್ಕನೇ ತರಗತಿಯಲ್ಲಿದ್ದಾಗಲೇ ಆರಂಭಿಸಿದರು. ತಾಯಿಯ ವಿರೋಧದ ನಡುವೆಯೂ ನಟನೆಯ ಮೇಲಿನ ತಮ್ಮ ಆಸಕ್ತಿಯನ್ನು ಬಿಡದೆ ಮುಂದುವರೆಸಿದರು.

24
ಸ್ವಾವಲಂಬಿ ಜೀವನ

80ನೇ ವಯಸ್ಸಿನಲ್ಲೂ ಉಷಾ ನಾಡಕರ್ಣಿ ಸಂಪೂರ್ಣ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶೂಟಿಂಗ್‌ಗೆ ಹೋಗುವಾಗ ಬೆಳಗ್ಗೆ 5 ಗಂಟೆಗೆ ಎದ್ದು ತಾವೇ ಟಿಫಿನ್ ಸಿದ್ಧಪಡಿಸಿಕೊಳ್ಳುತ್ತಾರೆ.

34
ನನಗಾಗಿ ನಾನೇ ನಿಲ್ಲಬೇಕು

'ಜನ ಏನು ಹೇಳ್ತಾರೆ' ಎಂದು ತಲೆಕೆಡಿಸಿಕೊಳ್ಳಬಾರದು. ನಮಗೆ ಸರಿ ಎನಿಸಿದ್ದನ್ನು ಮಾಡಬೇಕು ಎಂದು ಉಷಾ ನಾಡಕರ್ಣಿ ತಮ್ಮ ಖಡಕ್ ಮಾತುಗಳಿಂದಲೇ ಸಮಾಜಕ್ಕೆ ಉತ್ತರ ನೀಡಿದ್ದಾರೆ.

ಜೀವನದಲ್ಲಿ ನಿಮಗಾಗಿ ಯಾರು ನಿಲ್ಲುತ್ತಾರೆ ಎಂಬ ಪ್ರಶ್ನೆಗೆ, 'ಉಷಾಗಾಗಿ ಯಾರೂ ನಿಲ್ಲುವ ಅಗತ್ಯವಿಲ್ಲ, ಉಷಾ ತನಗಾಗಿ ತಾನೇ ನಿಲ್ಲುತ್ತಾಳೆ' ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದ್ದಾರೆ.

44
'ಪವಿತ್ರ ರಿಶ್ತಾ' ಧಾರಾವಾಹಿ

'ಪವಿತ್ರ ರಿಶ್ತಾ' ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಾಯಿ ಮತ್ತು ಅಂಕಿತಾ ಲೋಖಂಡೆ ಅವರ ಅತ್ತೆಯ ಪಾತ್ರವು ಉಷಾ ನಾಡಕರ್ಣಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories