ಬಿಗ್ ಬಾಸ್ ಟ್ರೋಫಿ ಗಿಲ್ಲಿ ಪಾಲಾಗುತ್ತಾ? ಈ ಪ್ರಶ್ನೆಗೆ ನಾಳೇ ಉತ್ತರ ಸಿಗಲಿದೆ. ಕಪ್ ಸಿಗಲಿ ಬಿಡಲಿ ಗಿಲ್ಲಿ ಬದುಕು ಮಾತ್ರ ಬಿಗ್ ಬಾಸ್ ನಿಂದ ಶೈನ್ ಆಗಿದೆ. ಇನ್ಸ್ಟಾದಲ್ಲಿ ಗಿಲ್ಲಿ ದಾಖಲೆ ಮಟ್ಟದಲ್ಲಿ ಫಾಲೋವರ್ಸ್ ಪಡೆದಿದ್ದಾರೆ.
ಬಿಗ್ ಬಾಸ್ ಶೋ ಗಿಲ್ಲಿ ನಟನ ಬದುಕನ್ನೇ ಬದಲಿಸಿದೆ. ಬಿಗ್ ಬಾಸ್ ಗೆ ಜಂಟಿಯಾಗಿ ಎಂಟ್ರಿಯಾದ್ರೂ ಒಂಟಿಯಾಗಿ ಬಿಗ್ ಬಾಸ್ ಗೆಲ್ಲೋದಕ್ಕೆ ಗಿಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಈಗಾಗಲೇ ಗಿಲ್ಲಿ ಫ್ಯಾನ್ಸ್, ಗಿಲ್ಲಿ ಬಿಗ್ ಬಾಸ್ ಕಪ್ ಗೆದ್ದಿರುವ ಕನಸು ಕಾಣ್ತಿದ್ದಾರೆ. ಒಂದಿಷ್ಟು ಎಐ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಿವೆ.
28
ಸಕಲಕಲಾ ವಲ್ಲಭ, ಎಲ್ಲ ಆಟ ಬಲ್ಲವ
ಬಿಗ್ ಬಾಸ್ ಫಿನಾಲೆ ನಡೆಯುತ್ತಿದೆ. ನಾಳೆ ಯಾರು ವಿನ್ ಎಂಬುದು ಅಧಿಕೃತವಾಗಿ ಹೊರಗೆ ಬರಲಿದೆ. ಆದ್ರೆ ಗಿಲ್ಲಿ ನಟ ಮಾತ್ರ ತಮ್ಮ ಅದೃಷ್ಟದ ಆಟದಲ್ಲಿ ಸಂಪೂರ್ಣ ಗೆದ್ದಿದ್ದಾರೆ. ಕಪ್ ಬರ್ಲಿ ಬಿಡಲಿ ಮುಂದಿನ ಉಜ್ವಲ ಭವಿಷ್ಯಕ್ಕೆ ಗಿಲ್ಲಿ ಅಡಿಯಿಟ್ಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಹವಾ ಆಕಾಶ ಮುಟ್ಟಿರೋದೇ ಇದಕ್ಕೆ ಉತ್ತಮ ನಿದರ್ಶನ.
38
ದಾಖಲೆ ವೀರ
ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ರಿಯಾಲಿಟಿ ಶೋಗಳ ಮೂಲಕ ಒಂದಿಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದ ಗಿಲ್ಲಿ ಇನ್ಸ್ಟಾಗ್ರಾಮ್ ನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದರು. ಆದ್ರೆ ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಿದ್ದಂತೆ ಗಿಲ್ಲಿ ಫಾಲೋವರ್ಸ್ ಸಂಖ್ಯೆ ಏರಿಕೆಯಾಗ್ತಾ ಹೋಯ್ತು. 8ನೇ ವಾರಕ್ಕೆ ಗಿಲ್ಲಿ ಫಾಲೋವರ್ಸ್ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿತ್ತು. ಆದ್ರೀಗ 1.5 ಮಿಲಿಯನ್ ತಲುಪಿದೆ.
ಬಿಗ್ ಬಾಸ್ ಫಿನಾಲೆ ಶೋ ಇಂದು ಮತ್ತು ನಾಳೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಫಿನಾಲೆ ಮುಗಿಯೋದ್ರಲ್ಲಿ ಗಿಲ್ಲಿ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
58
ಥ್ಯಾಂಕ್ಸ್ ನೋಟ್
ಗಿಲ್ಲಿ ನಟನ ಫಾಲೋವರ್ಸ್ ಸಂಖ್ಯೆ ಹೆಚ್ಚಾದ ಖುಷಿಯನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ. ಮಹಾಸಾಗರದಂತೆ ಹರಿದು ಬರ್ತಿರುವ ಈ ಪ್ರೀತಿ ಬೆಂಬಲಕ್ಕೆ ಏನಂತ ಹೇಳೋದು. ತುಂಬು ಹೃದಯದ ಧನ್ಯವಾದಗಳು ಅಂತ ಪೋಸ್ಟ್ ಮಾಡಲಾಗಿದೆ.
68
ಗಿಲ್ಲಿ ಗಿಲ್ಲಿ
ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೆಟ್ ಮಾಡಿದೆ. ಇಷ್ಟು ವರ್ಷಕ್ಕಿಂತ ಈ ಬಾರಿ ಸ್ಪರ್ಧಿಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗ್ತಿದೆ. ಗಿಲ್ಲಿ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಮಾನ ತೋರಿಸ್ತಿದ್ದಾರೆ. ಕೆಲವರು ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ್ರೆ ಮತ್ತೆ ಕೆಲವರು ಹಾಡಿನ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
78
ಉಜ್ವಲ ಭವಿಷ್ಯ
ಗಿಲ್ಲಿ ನಟ ಈ ಬಾರಿ ಕಪ್ ಗೆದ್ರೂ ಗೆಲ್ಲದೆ ಇದ್ರೂ ಬಿಗ್ ಬಾಸ್ ಅವರ ಜೀವನಕ್ಕೆ ಹೊಸ ದಾರಿ ನೀಡಿದೆ. ಈಗಾಗಲೇ ಅವರು ಅಭಿನಯದ ಸಿನಿಮಾ ರಿಲೀಸ್ ಆಗಿದೆ. ಇನ್ನೂ ಎರಡು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದಿಷ್ಟು ಸ್ಕ್ರಿಪ್ಟ್ ರೆಡಿಯಾದಂತಿದೆ. ಇದ್ರ ಜೊತೆ ಇನ್ಸ್ಟಾಖಾತೆಯಲ್ಲೂ ಗಿಲ್ಲಿ ಫಾಲೋವರ್ಸ್ ಹೆಚ್ಚಾಗಿರೋದ್ರಿಂದ ಗಿಲ್ಲಿ ಇನ್ಸ್ಟಾ ಮೂಲಕವೂ ಹಣ ಸಂಪಾದನೆ ಶುರು ಮಾಡಲಿದ್ದಾರೆ.
88
ಪಿನಾಲೆಗೆ ಗಿಲ್ಲಿ ರೆಡಿ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ ಸಿದ್ಧರಾಗ್ತಿದ್ದಾರೆ. ಅವರು ಮುಖಕ್ಕೆ ಫೇಶಿಯಲ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಗಿಲ್ಲಿ ಎಲ್ಲ ವಿಡಿಯೋಗಳು ಅತಿ ವೇಗದಲ್ಲಿ ವೈರಲ್ ಆಗ್ತಿದ್ದು, ಇದ್ರಿಂದ ಗಿಲ್ಲಿ ಮಾತ್ರವಲ್ಲ ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾ ಕೂಡ ದಾಖಲೆ ಮಟ್ಟದಲ್ಲಿ ವೀವ್ಸ್ ಪಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.