ಪಬ್‌ನಲ್ಲಿ ಮಿಂಚಿದ ಬಿಕಿನಿ ಬ್ಯೂಟಿ: ಪ್ಯಾಂಟ್ ಉದ್ರೋಗ್ತಿದೀಯಾ ಸೋನು ಎಂದ ಫ್ಯಾನ್ಸ್‌!

First Published Feb 1, 2024, 3:58 PM IST

ಬಿಗ್ ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಗೌಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಅವರ ಫೊಟೋಸ್ ವೈರಲ್ ಆಗುತ್ತವೆ.

ಸೋನು ಗೌಡ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಪಬ್‌ನಲ್ಲಿ ವೈಟ್ ಟಿ-ಶರ್ಟ್ ಪಿಂಕ್ ಪ್ಯಾಂಟ್‌ನಲ್ಲಿರುವ ಫೊಟೋಸ್ ಶೇರ್ ಮಾಡಿದ್ದಾರೆ.

ಇತ್ತೀಚೆಗೆ ಸೋನು ಗೌಡ ಜ್ಯಾಮಿತಿ ಗ್ಯಾಸ್ಟ್ರೋಪಬ್‌ಗೆ ಭೇಟಿ ನೀಡಿದ್ದಾರೆ, ಅಲ್ಲಿ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಜೊತೆಗೆ ಪಬ್‌ನಲ್ಲಿನ ಡ್ರಿಂಕ್ ಅಂಡ್ ಫುಡ್ ಫೋಟೋಸ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. 

Latest Videos


ನೆಟ್ಟಿಗರು ಸೋನು ಫೋಟೋಸ್ ನೋಡಿ ಲೈಕ್ಸ್ ಕೊಟ್ಟು ದೇವತೆ, ಸೆಕ್ಸಿ, ನೈಸ್, ಬ್ಯೂಟಿಫುಲ್‌, ಸೋನು ಅಕ್ಕ ಚೆನ್ನಾಗಿದ್ದೀಯಾ, ಪ್ಯಾಂಟ್ ಉದ್ರೋಗ್ತಿದೀಯಾ ಜೊತೆಗೆ ರೆಡ್ ಎಮೋಜಿ ಹಾಕಿ ಕಮೆಂಟ್ ಮಾಡುತ್ತಿದ್ದಾರೆ.

ಸೋನು ಗೌಡ ಫೋಟೋಗಳಿಗೆ 16 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅವರ ಫೋಟೋಸ್ ನೋಡಿ ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡುತ್ತಲೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೋನು ಗೌಡ ಅವರು 1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆಗಿರೋ ಸೋನು ಶ್ರೀನಿವಾಸ್ ಗೌಡ, ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು.

ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಇದ್ರಿಂದಲೇ ಸೋನು ಗೌಡ ಸಖತ್ ಟ್ರೋಲ್ ಆಗಿದ್ರು.

click me!