ಬಿಗ್ ಬಾಸ್ ಫಿನಾಲೆ: ಕಿಚ್ಚ ಸುದೀಪ್ ಜೊತೆ ಮಗಳು ಹೀಗ್ ರೆಡಿಯಾಗಿದ್ರಾ?

Published : Feb 01, 2024, 03:12 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಭರ್ಜರಿಯಾಗಿಯೇ ಮುಗಿದಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಮಗಳು ಸಾನ್ವಿ ರೆಡಿಯಾಗಿ ಬಂದಿದ್ರು, ತಂದೆ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ, ಮುದ್ದಿನ ಮಗಳು ಸಾನ್ವಿ.   

PREV
17
ಬಿಗ್ ಬಾಸ್ ಫಿನಾಲೆ: ಕಿಚ್ಚ ಸುದೀಪ್ ಜೊತೆ ಮಗಳು ಹೀಗ್ ರೆಡಿಯಾಗಿದ್ರಾ?

ಅಭಿನಯ ಚಕ್ರವರ್ತಿ ಎಂದೇ ಜನರಿಂದ ಬಿರುದು ಪಡೆದಿರೋ ಕಿಚ್ಚ ಸುದೀಪ್ (Kiccha Sudeep) ಅವರಿಗೆ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇವರ ಮಗಳು ಸಾನ್ವಿ ಸಹ ಸದ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸಾನ್ವಿ (Sanvi Sudeep) ಹೆಚ್ಚಾಗಿ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಲೈಫ್ ಸ್ಟೈಲ್ (Lifestyle), ವರ್ಕ್ ಔಟ್ (Workout), ಹಾಡುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. 
 

37

ನಟನೆಯಿಂದ ದೂರವಿದ್ದರೂ ಸಹ ಸಾನ್ವಿ ಸುದೀಪ್ ತಮ್ಮ ಹಾಡುಗಳ ಮೂಲಕವೇ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ತಮ್ಮ ಸೋದರ ಸಂಬಂಧಿಯ ಸಿನಿಮಾ ಒಂದಕ್ಕೆ ಇಂಗ್ಲಿಷ್ ಹಾಡು ಹಾಡುವ ಮೂಲಕ ಸುದ್ದಿಯಾಗಿದ್ದರು. 
 

47

ಸಾನ್ವಿ ಹೆಚ್ಚಾಗಿ ಫೋಟೋ ಶೂಟ್ (photoshoot) ಮಾಡಿಯೂ ಫೋಟೊ ಶೇರ್ ಮಾಡುತ್ತಿರುತ್ತಾರೆ. ಅವರ ಫೋಟೋ ನೋಡಿದ ಅಭಿಮಾನಿಗಳಂತೂ ಕಿಚ್ಚ ಸುದೀಪ್ ಅವರಂತೆ ಮಗಳು ಕೂಡ ಶೀಘ್ರದಲ್ಲೇ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆಯೇ ಎಂದು ಕೇಳುತ್ತಿದ್ದಾರೆ. 
 

57

ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಇಲ್ಲಿವರೆಯೂ ಸುದೀಪ್ ಆಗಲಿ, ಸಾನ್ವಿಯಾಗಲಿ ಏನೂ ಹೇಳೆ ಇಲ್ಲ. ಸದ್ಯಕ್ಕಂತೂ ಸಾನ್ವಿ ವಿದ್ಯಾಭ್ಯಾಸ (Education), ಸಂಗೀತ (Music) ಎಂದು ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಇವರು ಅದ್ಭುತ ಚಿತ್ರಗಾರ್ತಿ ಕೂಡ ಹೌದು. 

67

ಇನ್ನು ಕನ್ನಡ ಕಿರುತೆರೆಯ (Kannada Small Screen) ನೆಚ್ಚಿನ ಶೋ ಬಿಗ್ ಬಾಸ್ (Bigg Boss Kannada) ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ. ಸಾನ್ವಿ ಕೂಡ ಬಿಗ್ ಬಾಸ್ ಅಭಿಮಾನಿಯಾಗಿದ್ದೂ, ಪ್ರತಿವರ್ಷ ಫಿನಾಲೆಯಲ್ಲಿ ತಪ್ಪದೇ ತಂದೆಯ ನಿರೂಪಣೆ, ಕಾರ್ಯಕ್ರಮ ನೋಡೋಕೆ ಹಾಜರಾಗಿರ್ತಾರೆ. 

77

ಈ ಬಾರಿಯೂ ಬ್ಲ್ಯಾಕ್ ಡೀಪ್ ನೆಕ್ ಗೌನ್, ಜೊತೆಗೆ ಸಿಲ್ವರ್ ಹೆವಿ ನೆಕ್ ಪೀಸ್ ಧರಿಸಿರುವ ಸಾನ್ವಿ ಕಿಚ್ಚ ಸುದೀಪ್ ಫಿನಾಲೆ ಲುಕ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ನಿಮ್ಮಂತೆ ನಿರೂಪಣೆ ಮಾಡಲು ಯಾರಿಂದರೂ ಸಾಧ್ಯ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ (social media) ಬರೆದುಕೊಂಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories