ಶ್ರೀ ಗೌರಿಯ ಸಮಸ್ಯೆ ಪರಿಹಾರಕ್ಕೆ ಎಚ್. ಡಿ ರೇವಣ್ಣ ಹತ್ರ ಹೋಗಿ ನಿಂಬೆ ಹಣ್ಣು ತರ್ಬೇಕಂತೆ!

First Published | Feb 1, 2024, 3:17 PM IST

ಧಾರಾವಾಹಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೊ ಬಿಟ್ರೆ ಸಾಕು ತಮಗೆ ಅನಿಸಿದ್ದನ್ನೆಲ್ಲಾ ಕಾಮೆಂಟ್ ಮಾಡ್ತಾರೆ. ಇದೀಗ ಹೊಸದಾಗಿ ಆರಂಭವಾದ ಶ್ರೀ ಗೌರಿ ಸೀರಿಯಲ್ ನೋಡಿ ಜನ ಏನಂದ್ರು ಗೊತ್ತಾ? ಇದನ್ನ ಪೂರ್ತಿಯಾಗಿ ಓದಿ… 
 

ಪ್ರೋಮೋ ಮೂಲಕವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ ಧಾರಾವಾಹಿ (serial) ಅಂದ್ರೆ ಅದು ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭವಾದ ಶ್ರೀ ಗೌರಿ ಸೀರಿಯಲ್. ಹೊಸ ಕಥೆಯೊಂದಿಗೆ ಸೀರಿಯಲ್ ಆರಂಭವಾಗಿದ್ದು, ಜನಕ್ಕೆ ಸಿಕ್ಕಾಪಟ್ಟೆ ಇಷ್ಟವಾಗಿದೆ. 
 

ಕರಾವಳಿ ತೀರದಲ್ಲಿ (coastal Karnataka) ನಡೆಯುವ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಮಾಡಿದ ಕಥೆ ಇದಾಗಿದ್ದು, ಕಂಬಳ ಈ ಸೀರಿಯಲ್ ನ ಹೈ ಲೈಟ್ ಆಗಿದೆ. ಇನ್ನು ನಾಯಕಿಗೆ ಏನೋ ಕಾಯಿಲೆ ಇರೋದಂತೂ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. 
 

Tap to resize

ಅಪ್ಪನ ಪ್ರೀತಿಯ ಮಗಳಿಗೆ ಪ್ರತಿದಿನವೂ ಗ್ರಹಣ ಎನ್ನುತ್ತಾ ಪ್ರೋಮೋ (serial promo)  ಶೇರ್ ಮಾಡಿದ್ದು, ಜನರು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಸೀರಿಯಲ್ ಪ್ರೇಕ್ಷಕರಲ್ಲಿ ಎಷ್ಟೊಂದು ಕ್ರೇಜ್ ಹುಟ್ಟಿಸಿದೆ ಅನ್ನೋದನ್ನು ತೋರಿಸಿದೆ. 
 

ಸೀರಿಯಲ್ ವಿಷಯಕ್ಕೆ ಬಂದ್ರೆ ಅಂದವಾದ ಲಕ್ಷಣವಾದ, ಗುಣ, ರೂಪವಂತೆ ಹುಡುಗಿ ಗೌರಿ. ಆ ಮನೆಯ ಸಂತೋಷವೇ ಗೌರಿ. ತಂದೆ ಮತ್ತು ಅಜ್ಜನ ಪ್ರೀತಿಯ ಮನೆ ಮಗಳು. ಆದ್ರೆ ಅಜ್ಜಿಗೆ ಮಾತ್ರ ಮೊಮ್ಮಗಳು ಅಂದ್ರೆ ಆಗೋದೇ ಇಲ್ಲ. ಅದಕ್ಕೆ ಕಾರಣ ಆಕೆಯಲ್ಲಿರೋ ಸಮಸ್ಯೆ. 
 

ದಿನವಿಡೀ ನಗುತ್ತಲೇ ಓಡಾಡಿಕೊಂಡಿರುವ ಗೌರಿಗೆ ರಾತ್ರಿಯಾಗುತ್ತಿದ್ದಂತೆ ಸಮಸ್ಯೆ ಕಾಡೋದಕ್ಕೆ ಆರಂಭವಾಗುತ್ತೆ. ಅದಕ್ಕಾಗಿ ಗೌರಿಗೆ ಪ್ರತಿ ರಾತ್ರಿ ಗ್ರಹಣ ಎಂದು ಹೇಳಿದ್ದಾರೆ. ಆಕೆ ಮಲಗುವಾಗ ಕಾಲಿಗೆ ಸರಪಳಿ ಕಟ್ಟಿ, ಬೀಗ ಹಾಕಿ ಮಲಗೋದು. ಸಮಸ್ಯೆ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. 
 

ಇನ್ನು ಮೊದಲ ದಿನದ ಸೀರಿಯಲ್ ನೋಡಿದ ಪ್ರೇಕ್ಷಕರಲ್ಲಿ ಒಬ್ಬರು ಗೌರಿಯ ಸಮಸ್ಯೆ ನೋಡಿ H D ರೇವಣ್ಣ ಅವರ ಹತ್ರ ಹೋಗಿ ಮಂತ್ರಿಸಿ ಇರೋ ಎರಡು ನಿಬ್ಬೇ ಹಣ್ಣಿನಲ್ಲಿ. ಒಂದು ನಿಂಬೆ ಹಣ್ಣು ತರುವುದು, ಇದರಿಂದ ಪರಿಹಾರ ಸಿಗುತ್ತೆ ಎಂದು ಬರೆದುಕೊಂಡಿದ್ದಾರೆ. 
 

ಮತ್ತೊಬ್ಬರು ಕಾಮೆಂಟ್ (comment) ಮಾಡಿ ನಿದ್ದೇಲಿ ನಡೆಯೋ ಖಾಯಿಲೆ... ಬೇಡಿ ಬದಲು ರೂಮ್ ಗೇ ಬಿಗ ಹಾಕ ಬಹುದಿತ್ತು ಎಂದಿದ್ದಾರೆ. ಮತ್ತೊಬ್ರು ಅಮಾವಾಸ್ಯೆಗೆ ಒಂದು ತಡೆ ಒಡ್ಸಿ, ಸರಿಹೋಗುತ್ತೆ ಎಂದು ಕೂಡ ಬರೆದಿದ್ದಾರೆ. ಇನ್ನೂ ಹೆಚ್ಚಿನ ಜನರು ಮೊದಲೆರಡು ದಿನದ ಸಂಚಿಕೆ ನೋಡಿ, ತುಂಬಾನೆ ಚೆನ್ನಾಗಿದೆ ಎಂದಿದ್ದಾರೆ. 
 

Latest Videos

click me!