ಮಾಲ್ಡೀವ್ಸ್ ನಲ್ಲಿ ಬಿಗ್ ಬಾಸ್ ಬೆಡಗಿ ದಿವ್ಯಾ ಸುರೇಶ್ ಬಿಂದಾಸ್ ಲುಕ್

First Published | Jan 15, 2025, 4:16 PM IST

ಬಿಗ್ ಬಾಸ್ ಸೀಸನ್ 8ರ ಚೆಲುವೆ ದಿವ್ಯಾ ಸುರೇಶ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದು ಅಲ್ಲಿ ಸಖತ್ ಬಿಂದಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

ಬಿಗ್ ಬಾಸ್ ಸೀಸನ್ 8 ರಲ್ಲಿ ಮಿಂಚಿದ ಬೆಡಗಿ ದಿವ್ಯಾ ಸುರೇಶ್ (Divya Suresh). ಆರಂಭದಲ್ಲಿ ವೀಕ್ ಎನಿಸಿದ್ದ ದಿವ್ಯಾ, ನಂತರದ ದಿನಗಳಲ್ಲಿ ಟಫ್ ಕಂಟೆಸ್ಟಂಟ್ ಆಗಿ ಸ್ಪರ್ಧಿಸಿದ್ದರು. ಕೊನೆಯ ವಾರದವರೆಗೂ ಆಟವಾಡಿದ್ದರು ದಿವ್ಯಾ ಸುರೇಶ್. 
 

ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ದಿವ್ಯಾ ಸುರೇಶ್ ಗೆ ಸಿನಿಮಾಗಳಲ್ಲಿ ಆರಂಭದಲ್ಲಿ ಸಿಕ್ಕಿದ್ದು ಬರಿ ಸೋಲು ಮಾತ್ರ. ಯಾಕಂದ್ರೆ ಅವರು ನಟಿಸಿದ್ದ ಸಿನಿಮಾಗಳು ಪೂರ್ತಿಯಾಗಲೇ ಇಲ್ಲ, ಕೆಲವು ತೆರೆಯೂ ಕಂಡಿಲ್ಲ. ಆದರೆ ಇವರಿಗೆ ಅದೃಷ್ಟ ತಂದುಕೊಟ್ಟಿದ್ದು ಅಂದ್ರೆ ಅದು ಬಿಗ್ ಬಾಸ್. 
 

Tap to resize

ದಿವ್ಯಾ ಸುರೇಶ್ 2017ರಲ್ಲಿ ಕನ್ನಡದ "#9, ಹಿಲ್ಟನ್ ಕ್ರಾಸ್" ಸಿನಿಮಾದ ಮೂಲಕ ಸಿನಿ ಪಯಣ ಆರಂಭಿಸಿದರು, ಬಳಿಕ ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್, ಜೋಡಿ ಹಕ್ಕಿ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಯಾವ ಸಿನಿಮಾವೂ ಜನರನ್ನು ತಲುಪಲಿಲ್ಲ, ಬಳಿಕ ತೆಲುಗಿನಲ್ಲಿ ಟೆಮ್ಟ್ ರಾಜ, ಡಿಗ್ರಿ ಕಾಲೇಜು ಸಿನಿಮಾದಲ್ಲಿ ನಟಿಸಿ ಸೋತಿದ್ದರು.
 

ಬಿಗ್ ಬಾಸ್ ಸೀಸನ್ 8ರ (Bigg boss Season 8) ಮೂಲಕ ಜನಪ್ರಿಯತೆ ಗಳಿಸಿದ ದಿವ್ಯಾ ಸುರೇಶ್, ಅಲ್ಲಿಂದ ಹೊರ ಬಂದ ತಕ್ಷಣ ಕಲರ್ಸ್ ಕನ್ನಡದ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಈ ಧಾರಾವಾಹಿಯಲ್ಲಿ ಆಮ್ರಪಾಲಿಯಾಗಿ ದಿವ್ಯಾ ನಟಿಸಿದ್ದರು. 
 

ತ್ರಿಪುರ ಸುಂದರಿ  (tripura Sundari) ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸೀರಿಯಲ್ ನಲ್ಲಿ ದಿವ್ಯಾ ಸುರೇಶ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು. ಆದಾದ ನಂತರ ಆ ಸೀರಿಯಲ್ ಮುಂದುವರಿದ ಭಾಗ ಬರುತ್ತೆ ಎಂದು ಜನ ಕಾದಿದ್ದೆ ಬಂತು, ಆದರೆ ಸೀರಿಯಲ್ ಎರಡನೇ ಭಾಗ ಮತ್ತೆ ಬರಲೇ ಇಲ್ಲ. 
 

ಆ ಸೀರಿಯಲ್ ಬಳಿಕ ನಟಿ ಸದ್ಯ ಟ್ರಾವೆಲ್ ಮಾಡೊದ್ರಲ್ಲಿ ಬ್ಯುಸಿಯಾಗಿದ್ದಾರೆ. ಬೇರೆ ಯಾವುದೇ ಸಿರಿಯಲ್ ಸಿನಿಮಾಗಳಲ್ಲಿ ದಿವ್ಯಾ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಬೆಡಗಿ ಹೆಚ್ಚಾಗಿ ತಮ್ಮ ಫೋಟೋಸ್ ಮೂಲಕವೇ ಕಾಣಿಸಿಕೊಳ್ಳುತ್ತಿರುತ್ತಾರೆ. 
 

ಇತ್ತೀಚೆಗೆ ಮಾಲ್ಡೀವ್ಸ್ ಗೆ (Moldives)ಹೋಗಿ ಬಂದಿರುವ ದಿವ್ಯಾ ಸುರೇಶ್. ಅಲ್ಲಿನ ಸುಂದರವಾದ ತಾಣಗಳಲ್ಲಿ ಬಿಂದಾಸ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಬ್ಯೂಟಿ, ಕ್ರಶ್, ಸುಂದರಿ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. 
 

Latest Videos

click me!