ಹಸಿರು ಸೀರೆಯಲ್ಲಿ ಮಿಂಚಿದ ಶ್ವೇತಾ ಚಂಗಪ್ಪ; ಕತ್ತಲ್ಲಿರೋ ಚಿನ್ನದ ಮೇಲೆ ನೆಟ್ಟಿಗರ ಕಣ್ಣು

First Published | Jan 15, 2025, 12:57 PM IST

ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೂರ್ಗ್‌ ಶೈಲಿಯಲ್ಲಿ ಸೀರೆ ಧರಿಸಿದ ಶ್ವೇತಾ ಚಂಗಪ್ಪ. ಲುಕ್ ಸಿಂಪಲ್ ಆಗಿದ್ದರೂ ದುಬಾರಿ ಎಂದ ನೆಟ್ಟಿಗರು 

ಕನ್ನಡ ಕಿರುತೆರೆ ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶ್ವೇತಾ ಚಂಗಪ್ಪ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. 

ಹಸಿರು ಮತ್ತು ಆರೇಂಜ್‌ ಕಾಂಬಿನೇಷನ್‌ನಲ್ಲಿ ಇರುವ ರೇಶ್ಮೆ ಸೀರೆಯಲ್ಲಿ ಶ್ವೇಥಾ ಮಿಂಚಿದ್ದಾರೆ. ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

Tap to resize

ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿರುವ ಶ್ವೇತಾ... ಒಂದು ಕೈಗೆ ಚಿನ್ನದ ಬಳ, ಮತ್ತೊಂದು ಕೈಗೆ ವಾಚ್ ಹಾಗೂ ಕೊಡವ ಶೈಲಿಯ ಚಿನ್ನದ ಸರ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವ ಚಿನ್ನದ ಓಲೆ ಧರಿಸಿದ್ದಾರೆ. 

ಮೇಡಂ ನಿಮ್ಮ ಕತ್ತಿನಲ್ಲಿ ಇರುವ ಚಿನ್ನದ ಬೆಲೆ ಎಷ್ಟು? ಎಷ್ಟು ಗ್ರಾಂ ಇದೆ ಹಾಗೂ ಎಲ್ಲಿಂದ ತೆಗೆದುಕೊಂಡಿದ್ದು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಡಿಸೈನ್ ಸೂಪರ್ ಎಂದಿದ್ದಾರೆ. 

2023ರಿಂದ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಶ್ವೇತಾ ಚಂಗಪ್ಪ ನಾಯಕಿ ಪೋಸ್ಟ್‌ನಿಂದ ನಿರೂಪಕಿ ಪೋಸ್ಟ್‌ಗೆ ಚಂಪ್ ಆಗಿದ್ದಾರೆ. ಈಗಾಗಲೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡಿದ್ದಾರೆ. 

ಡ್ಯಾನ್ಸ್ ಡ್ಯಾನ್ಸ್‌ ಜ್ಯೂನಿಯರ್, ಜೋಡಿ ನಂ 1. ಸೂಪರ್ ಕ್ವೀನ್, ಚೋಟ ಚಾಂಪಿಯನ್, ಜೋಡಿ ನಂ 1 ಸೀಸನ್ 2 ನಿರೂಪಣೆ ಮಾಡಿದ್ದಾರೆ ಶ್ವೇತಾ ಚಂಗಪ್ಪ. ಮೂರ್ನಾಲ್ಕು ಶೋಗಳಲ್ಲಿ ಕುರಿ ಪ್ರತಾಪ್ ಸಾಥ್ ಕೊಟ್ಟಿದ್ದಾರೆ. 

Latest Videos

click me!