ಅರೆರೆ.. ಬಿಗ್ ಬಾಸ್ ಫೇಮ್ ದೀಪಿಕಾ ದಾಸ್‌ಗೆ ಇದೇನಾಯ್ತು? ಭಯಾನಕ ಕೋರೆ ಹಲ್ಲು ನೋಡಿ ಆತಂಕಗೊಂಡ ಫ್ಯಾನ್ಸ್!

Published : Nov 04, 2025, 08:03 PM IST

ಹ್ಯಾಲೋವಿನ್‌ ಒಂದು ಪಾಶ್ಚಾತ್ಯ ಸಂಪ್ರದಾಯದ ಹಬ್ಬವಾಗಿದ್ದು, ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಕೂಡಾ ಹ್ಯಾಲೋವಿನ್‌ ಲುಕ್‌ನಲ್ಲಿ ಮಿಂಚಿದ್ದಾರೆ.

PREV
19
ಪಾಶ್ಚಾತ್ಯ ಸಂಪ್ರದಾಯದ ಹಬ್ಬ

ಹ್ಯಾಲೋವಿನ್‌ ಒಂದು ಪಾಶ್ಚಾತ್ಯ ಸಂಪ್ರದಾಯದ ಹಬ್ಬವಾಗಿದ್ದು, ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಪಾಶ್ಚಿಮಾತ್ಯ ಜನರು ಭೂತ, ಪ್ರೇತ, ಪಿಶಾಚಿ ಮುಂತಾದ ವೇಷಭೂಷಣ ಧರಿಸಿ, ಆತ್ಮಗಳನ್ನು ದೂರವಿಡಲು ಪ್ರಯತ್ನಿಸುತ್ತಿದ್ದರು.

29
ಹ್ಯಾಲೋವಿನ್‌ ಲುಕ್‌ನಲ್ಲಿ ದೀಪಿಕಾ

ಈಗ ಇದು ಮುಖ್ಯವಾಗಿ ಮನರಂಜನೆ ಮತ್ತು ಕಾಸ್ಟ್ಯೂಮ್ ಪಾರ್ಟಿಗಳ ಹಬ್ಬವಾಗಿ ರೂಪಾಂತರಗೊಂಡಿದೆ. ವಿದೇಶದ ಈ ಹಬ್ಬ ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಕೂಡಾ ಹ್ಯಾಲೋವಿನ್‌ ಲುಕ್‌ನಲ್ಲಿ ಮಿಂಚಿದ್ದಾರೆ.

39
ಅಭಿಮಾನಿಗಳು ಆತಂಕ

ಹೌದು! ನಟಿ ದೀಪಿಕಾ ದಾಸ್ ದೆವ್ವದ ಲುಕ್‌ನಲ್ಲಿ (ಹ್ಯಾಲೋವಿನ್‌) ಕಾಣಿಸಿಕೊಂಡಿದ್ದು, ನೋಡುಗರಿಗೆ ಭಯಭೀತಗೊಳಿಸಿದ್ದಾರೆ. ಒಂದು ಕ್ಷಣ ದೀಪಿಕಾ ದಾಸ್‌ಗೆ ಏನಾಯ್ತು ಅಂತ ಅಭಿಮಾನಿಗಳು ಆತಂಕಗೊಂಡಿದ್ದಾರೆ.

49
ಬ್ಲ್ಯಾಕ್ ಶಾರ್ಟ್ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ ದಾಸ್‌

ಬ್ಲ್ಯಾಕ್ ಶಾರ್ಟ್ ಡ್ರೆಸ್‌ನಲ್ಲಿ ದೀಪಿಕಾ ದಾಸ್‌ ಮಿಂಚಿದ್ದು, ಫೋಟೋಗಳಲ್ಲಿ ವಿಭಿನ್ನವಾಗಿ ಮಿಂಚಿದ್ದಾರೆ. ವಿಶೇಷವಾಗಿ ಮುಖಕ್ಕೆ ದೆವ್ವದ ಮುಖವಾಡ ಹಾಕಿಕೊಂಡಿದ್ದು, ಮತ್ತೊಂದು ಫೋಟೋದಲ್ಲಿ ಕೃತಕ ಕೋರೆ ಹಲ್ಲನ್ನು ಹಾಕಿಕೊಂಡಿದ್ದಾರೆ.

59
ಹ್ಯಾಪಿ ಹ್ಯಾಲೋವಿನ್‌ 2025

ದೀಪಿಕಾ ದಾಸ್‌ ಹಂಚಿಕೊಂಡ ಪೋಸ್ಟ್‌ಗೆ 'ಹ್ಯಾಪಿ ಹ್ಯಾಲೋವಿನ್‌ 2025' ಎಂದು ಕ್ಯಾಪ್ಶನ್ ಕೊಟ್ಟಿದ್ದು, ನೆಟಿಜನ್ಸ್ ಕೂಡಾ ವಾವ್ ಲುಕಿಂಗ್ ನೈಸ್ ಮೇಡಂ, ಗಾರ್ಜಿಯಸ್ ಸೇರಿದಂತೆ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

69
ಪಾರು ಪಾರ್ವತಿ ಮೂಲಕ ನಾಯಕಿ

ದೀಪಿಕಾ ‘ಪಾರು ಪಾರ್ವತಿ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಿದರು. ಆ ನಂತರ ಆ ಸಿನಿಮಾ ಒಟಿಟಿಯಲ್ಲೂ ಸಿನಿಮಾ ರಿಲೀಸ್ ಆಯ್ತು.

79
ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ

ನಾಗಿಣಿ ಸೀರಿಯಲ್‌ ಸೇರಿದಂತೆ, ಶೈನ್ ಶೆಟ್ಟಿ ಗೆದ್ದಿದ್ದ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ದೀಪಿಕಾ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ 9ರಲ್ಲೂ ಭಾಗವಹಿಸಿದ್ದರು. 2 ಸೀಸನ್‌ನಲ್ಲೂ ಟಾಪ್ ಫೈನಲಿಸ್ಟ್ ಆಗಿದ್ರು. 2 ಬಾರಿಯೂ ಬಿಗ್ ಬಾಸ್ ಗೆಲುವಿನ ಪಟ್ಟ ಮಿಸ್ ಆಗಿತ್ತು.

89
ಸೆಲ್ಟಿಕ್ ಹಬ್ಬದ ಹಳೆಯ ಸಂಪ್ರದಾಯ

ಇನ್ನು ಹ್ಯಾಲೋವಿನ್ ಎನ್ನುವುದು ಅಕ್ಟೋಬರ್ 31ರಂದು ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದ್ದು, ಇದು ಮೂಲತಃ ಸೆಲ್ಟಿಕ್ ಹಬ್ಬದ ಹಳೆಯ ಸಂಪ್ರದಾಯವಾಗಿದೆ ಮತ್ತು ಕ್ರಿಶ್ಚಿಯನ್ 'ಆಲ್ ಸೇಂಟ್ಸ್ ಡೇ'ಯೊಂದಿಗೆ ಸಂಬಂಧ ಹೊಂದಿದೆ.

99
ಧಾರ್ಮಿಕ ಭೇದವಿಲ್ಲದೆ ಆಚರಣೆ

ಪ್ರಸ್ತುತ ಇದನ್ನು ದೊಡ್ಡ ಪ್ರಮಾಣದಲ್ಲಿ, ಧಾರ್ಮಿಕ ಭೇದವಿಲ್ಲದೆ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಜನರು ವೇಷಭೂಷಣ ಧರಿಸಿ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ, "ಟ್ರಿಕ್-ಓರ್-ಟ್ರೀಟಿಂಗ್" ಮಾಡುತ್ತಾರೆ, "ಜ್ಯಾಕ್-ಒ'-ಲ್ಯಾಂಟರ್ನ್" ಗಳನ್ನು ಕೆತ್ತುತ್ತಾರೆ ಮತ್ತು ಭಯಾನಕ ಕಥೆಗಳನ್ನು ಹೇಳುತ್ತಾರೆ.

Read more Photos on
click me!

Recommended Stories