Amruthadhaare Serial: ಗೌತಮ್‌, ಭೂಮಿಕಾ ಬದುಕಿನಲ್ಲಿ ಮತ್ತೊಂದು ಊಹಿಸದ ತಿರುವು! ವೀಕ್ಷಕರನ್ನು ಕಾಪಾಡಪ್ಪಾ..!

Published : Nov 04, 2025, 03:17 PM IST

Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ವಿವಾಹ ವಾರ್ಷಿಕೋತ್ಸವ ಬಂದಿದೆ. ಇವರಿಬ್ಬರೂ ದೂರ ಇದ್ದರೂ ಕೂಡ ಪ್ರೀತಿ ಮಾಡುತ್ತಿದ್ದಾರೆ. ಈಗ ಇದನ್ನೆಲ್ಲ ನೋಡಿದರೆ ಈ ಜೋಡಿ ಒಂದಾಗುವ ಲಕ್ಷಣ ಕಾಣುತ್ತಿದೆ. ಹೊಸ ಪ್ರೋಮೋ ರಿಲೀಸ್‌ ಆಗಿದೆ.

PREV
16
ಹೂವಿನಲ್ಲೇ ರೂಮ್‌ ಮುಳುಗಿಸಿದ್ದನು

ಈ ಜೋಡಿ ಒಂದೇ ಮನೆಯಲ್ಲಿದ್ದಾಗ ಗೌತಮ್‌, ಭೂಮಿಕಾಗೆ ಹೂವು ಕೊಡಿಸುತ್ತಿದ್ದನು. ಭೂಮಿಕಾಗೆ ಹೂವು ಅಂದರೆ ತುಂಬ ಇಷ್ಟ. ಆದರೆ ಗೌತಮ್‌ಗೆ ಹೂವು ಅಂದರೆ ಅಲರ್ಜಿ. ಒಮ್ಮೆಯಂತೂ ಭೂಮಿಕಾಗೋಸ್ಕರ ಇಡೀ ರೂಮ್‌ನ್ನು ಹೂವಿನಲ್ಲಿ ಅಲಂಕಾರ ಮಾಡಿದ್ದನು. ಆಗ ಗೌತಮ್‌ ಅಲರ್ಜಿ ಮಾತ್ರೆ ತಗೊಂಡಿದ್ದನು.

26
ಒಂದೇ ವಠಾರದಲ್ಲಿರೋ ಜೋಡಿ

ಈಗ ಇವರಿಬ್ಬರು ಒಂದೇ ವಠಾರದಲ್ಲಿದ್ದಾರೆ. ಗೌತಮ್‌, ಭೂಮಿಕಾಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇವರಿಬ್ಬರು ಮದುವೆಯ ಫೋಟೋ ನೋಡಿಕೊಂಡು ಪರಸ್ಪರ ಮನಸ್ಸಿನಲ್ಲಿ ಶುಭಾಶಯ ಕೋರಿದ್ದಾರೆ.

36
ವಿವಾಹ ವಾರ್ಷಿಕೋತ್ಸವದ ಸಂಭ್ರಮ

ವಿವಾಹ ವಾರ್ಷಿಕೋತ್ಸವ ಎಂದು ಗೌತಮ್‌, ತನ್ನ ವಠಾರದಲ್ಲಿರುವವರಿಗೆ ಹೂವನ್ನು ಗಿಫ್ಟ್‌ ನೀಡಿದ್ದಾನೆ. ಮಲ್ಲಿಗೆ ಹೂವನ್ನು ಭೂಮಿಕಾಗೆ ಕೊಟ್ಟ ಭೂಮಿ, “ಬಾವ ಎಲ್ಲರಿಗೂ ಹೂವು ಕೊಡಿಸಿದ್ದಾರೆ, ನಿಮಗೆ ಬೇಕಿದ್ರೆ ತಗೋಳಿ” ಎಂದು ಹೇಳಿದ್ದಾರೆ. ಇದನ್ನು ನೋಡಿ ಭೂಮಿ ಖುಷಿಪಟ್ಟಿದ್ದಾಳೆ.

46
ಪ್ಲ್ಯಾನ್‌ ರೆಡಿಯಾಗಿದೆ

ಗೌತಮ್‌ ಹಾಗೂ ಭೂಮಿಕಾರನ್ನು ಒಂದು ಮಾಡಬೇಕು ಎಂದು ಲಕ್ಷ್ಮೀಕಾಂತ್‌ ಮಾವ, ಆನಂದ್‌, ಮಲ್ಲಿ, ಕಾವೇರಿ ಒಂದಾಗಿದ್ದಾರೆ. ವಿವಾಹ ವಾರ್ಷಿಕೋತ್ಸವದ ದಿನ ಇವರಿಬ್ಬರ ಮುಖಾಮುಖಿ ಮಾಡಲು ಯೋಜನೆ ರೆಡಿಯಾಗಿದೆ. ಗೌತಮ್‌, ಭೂಮಿಕಾ ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಿದರೆ ಇವರಿಬ್ಬರು ಪಕ್ಕಾ ಒಂದಾಗ್ತಾರೆ.

56
ಜಯದೇವ್‌, ಶಕುಂತಲಾ ನೀಚತನ

ಒಂದು ಕಡೆ ಜಯದೇವ್‌, ಎಂಎಲ್‌ಎ, ಶಕುಂತಲಾ ಸೇರಿಕೊಂಡು ಗೌತಮ್‌, ಭೂಮಿಕಾರನ್ನು ಟಾರ್ಗೆಟ್‌ ಮಾಡಿದ್ದಾರೆ. ಗೌತಮ್‌ ಕುಟುಂಬ ಕಣ್ಣೀರಲ್ಲಿ ಕೈತೊಳೆಯಬೇಕು ಎನ್ನೋದು ಇವರ ಗುರಿಯಾಗಿದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

66
ವೀಕ್ಷಕರ ಆಸೆ ಏನು?

ಗೌತಮ್ ಭೂಮಿ ಬೇಗ ಒಂದಾಗಬೇಕು. ಅವರ ಅವಳಿ ಜವಳಿ ಮಕ್ಕಳು, ಭಾಗ್ಯಮ್ಮ, ಸುಧಾ ಫ್ಯಾಮಿಲಿ, ಆನಂದ್ ಫ್ಯಾಮಿಲಿ ಎಲ್ಲರನ್ನು ಒಟ್ಟಾಗಿ ನೋಡಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ.

Read more Photos on
click me!

Recommended Stories