Late-night Wedding: ತಡರಾತ್ರಿ ಮದುವೆಯಾಗಿದ್ದೇಕೆ Seetha Rama Serial ನಟಿ ವೈಷ್ಣವಿ ಗೌಡ? ಯಾರೆಲ್ಲ ಬಂದಿದ್ರು?

Published : Jun 05, 2025, 08:26 PM ISTUpdated : Jun 05, 2025, 08:37 PM IST

ಅಗ್ನಿಸಾಕ್ಷಿ, ಸೀತಾರಾಮ, ದೇವಿ, ಪುನರ್‌ವಿವಾಹ ಮುಂತಾದ ಧಾರಾವಾಹಿಗಳು, ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಶೋ ಸ್ಪರ್ಧಿ ನಟಿ ವೈಷ್ಣವಿ ಗೌಡ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

PREV
114

ವೈಷ್ಣವಿ ಗೌಡ ಅವರು ತಿಂಗಳುಗಳ ಹಿಂದೆಯೇ ಉತ್ತರ ಪ್ರದೇಶ ಮೂಲದ ಆರ್ಮಿ ಆಫೀಸರ್‌ ಅನುಕೂಲ್‌ ಮಿಶ್ರಾ ಜೊತೆ ಬಹಳ ಅದ್ದೂರಿಯಾಗಿ ಎಂಗೇಜ್‌ ಆಗಿದ್ದರು.

214

ನಟಿ ವೈಷ್ಣವಿ ಗೌಡ ಅವರು ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಮದುವೆ ನಡೆದಿದೆ. ಈಗಾಗಲೇ ಹಳದಿ, ಮೆಹೆಂದಿ, ಸಂಗೀತ ಎಂದು ಬಹಳ ಅದ್ದೂರಿಯಾಗಿ ಮದುವೆ ನಡೆದಿದೆ. ಅಂದಹಾಗೆ ವೈಷ್ಣವಿ ಗೌಡ ಮದುವೆ ಯಾವ ದಿನ ಎಂದು ಕೆಲವರಿಗೆ ಡೌಟ್‌ ಇತ್ತು.

414

ಉತ್ತರ ಪ್ರದೇಶದಂತೆ ಅವರು ಕೆಂಪು ಬಣ್ಣದ ಲೆಹೆಂಗಾ ಧರಿಸಿ ಮಂಟಪಕ್ಕೆ ಬಂದಿದ್ದರು. ಇನ್ನು ಅವರ ಹುಡುಗ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದರು.

514

ಅಂದಹಾಗೆ ಒಕ್ಕಲಿಗ ಹಾಗೂ ಉತ್ತರ ಪ್ರದೇಶದಲ್ಲಿ ನಡೆಯುವಂತೆ ಈ ಮದುವೆ ನಡೆದಿದೆ ಎನ್ನಲಾಗಿದೆ.

614

ವೈಷ್ಣವಿ ಗೌಡ ಮದುವೆಯಲ್ಲಿ ಅಮೂಲ್ಯ, ಕೆಪಿ ಅರವಿಂದ್‌, ದಿವ್ಯಾ ಉರುಡುಗ, ನೇಹಾ ಗೌಡ, ಅನುಪಮಾ ಗೌಡ, ಮುಖ್ಯಮಂತ್ರಿ ಚಂದ್ರು, ಇಷಿತಾ ವರ್ಷ ಸೇರಿದಂತೆ ಸೀತಾರಾಮ ಧಾರಾವಾಹಿಯ ಎಲ್ಲ ಕಲಾವಿದರು ಕೂಡ ಆಗಮಿಸಿದ್ದರು.

714

ವೈಷ್ಣವಿ ಗೌಡ ಅವರಿಗೆ ಅದ್ದೂರಿಯಾಗಿ ಮದುವೆಯಾಗಬೇಕು ಎನ್ನೋದಕ್ಕಿಂತ ಮದುವೆ ಆಗಬೇಕು ಎನ್ನುವ ಆಸೆ ಹೆಚ್ಚಿತ್ತು. ಈ ಬಗ್ಗೆ ಅವರು ಸಾಕಷ್ಟು ಸಲ ಹೇಳಿಕೊಂಡಿದ್ದರು. 

814

ವೈಷ್ಣವಿ ಗೌಡ ಅವರ ಮದುವೆಯಲ್ಲಿ ನಟ ಮುಖ್ಯಮಂತ್ರಿ ಚಂದ್ರು ಆಗಮಿಸಿದ್ದರು. ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. 

914

ಇನ್ನು ಸೀತಾರಾಮ ಧಾರಾವಾಹಿ ನಟಿ ಪದ್ಮಕಲಾ ಡಿ ಎಸ್‌ ಅವರು ನಟಿ ರೀತು ಸಿಂಗ್‌ ಜೊತೆಗೆ.. 

1014

ನಟಿ ಅಮೂಲ್ಯ, ಪದ್ಮಕಲಾ ಡಿ ಎಸ್‌ ಅವರು ವೈಷ್ಣವಿ ಗೌಡ ಮದುವೆಯಲ್ಲಿ ಕಂಡಿದ್ದು ಹೀಗೆ.. 

1114

ಸೀತಾರಾಮ ಧಾರಾವಾಹಿಯ ಶಾಂತಮ್ಮ ಪಾತ್ರಧಾರಿ ಪದ್ಮಕಲಾ ಡಿ ಎಸ್

1214

ನಟಿ ವೈಷ್ಣವಿ ಗೌಡ ಜೊತೆಯಲ್ಲಿ ಸೀತಾರಾಮ ಧಾರಾವಾಹಿ ಕಲಾವಿದರು 

1314

ಸೀತಾರಾಮ ಕಲಾವಿದರ ಜೊತೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ನಟಿ ವೈಷ್ಣವಿ ಗೌಡ

1414

ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಈಗ ಶ್ರೀಮತಿಯಾಗಿದ್ದಾರೆ. 

Read more Photos on
click me!

Recommended Stories