ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ತನಿಷಾ ಕುಪ್ಪಂಡ ಅವರು ವಿಧಾನಸೌಧದ ಮುಂದೆ 'ದತ್ತ' ಚಿತ್ರದ ಹಾಡಿಗೆ ಮಾಡಿದ ನೃತ್ಯವು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ತನಿಷಾ ಅವರ ದೇಹದ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿದ್ದು, ಬಾಡಿ ಶೇಮಿಂಗ್ ಮಾಡದಂತೆ ಕಿಶನ್ ಮನವಿ ಮಾಡಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ತನಿಷಾ ಕುಪ್ಪಂಡ ವಿಧಾನಸೌಧದ ಹಿನ್ನೆಲೆಯಲ್ಲಿ ಮಾಡಿರುವ ನೃತ್ಯವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ಇದೊಂದು ಕ್ರಿಯೇಟಿವ್ ಪ್ರಯತ್ನ, ದಯವಿಟ್ಟು ಬಾಡಿ ಶೇಮಿಂಗ್ ಮಾಡಬೇಡಿ’ ಎಂಬ ಕಿಶನ್ ಅವರ ಬೇಡಿಕೆಯನ್ನು ಕಡೆಗಣಿಸಿ ನೂರಾರು ಮಂದಿ ಹಾಸ್ಯದ ಶೈಲಿಯಲ್ಲಿ ಬಾಡಿ ಶೇಮಿಂಗ್ ಮಾಡುವಂಥಾ ಕಾಮೆಂಟ್ ಹಾಕಿದ್ದಾರೆ.
24
ಬಾಡಿ ಶೇಮಿಂಗ್ ಮಾತ್ರ ಬೇಡ
‘ಈ ಹಾಡನ್ನು ಮಾಡಲು ನಾವು ಬಹಳ ಶ್ರಮ ಹಾಕಿದ್ದೇವೆ ಎನ್ನುವುದು ಕಾಮೆಂಟ್ ಮಾಡುವ ಮೊದಲು ನಿಮ್ಮ ಗಮನದಲ್ಲಿರಲಿ. ನೀವು ಡಾನ್ಸ್ ಬಗ್ಗೆ ಏನು ಬೇಕಾದರೂ ಹೇಳಿ ಪರ್ವಾಗಿಲ್ಲ. ಆದರೆ ಬಾಡಿ ಶೇಮಿಂಗ್ ಮಾತ್ರ ಬೇಡ. ಗಂಡಸರಿಗೆ ದೈಹಿಕ ವ್ಯತ್ಯಾಸಗಳು ಅಷ್ಟಾಗಿ ಬರುವುದಿಲ್ಲ.
34
ತನಿಷಾ ಮಾಡಿದ ಡ್ಯಾನ್ಸ್ ಬಗ್ಗೆ ಹೆಮ್ಮೆ
ಹೆಣ್ಣುಮಕ್ಕಳ ವಿಚಾರದಲ್ಲಿ ಹಾಗಲ್ಲ. ಅವರ ದೇಹದ ವಿಚಾರ ಹಾಗಲ್ಲ. ನೀವಿದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ಇದೆ. ನನಗೆ ತನಿಷಾ ಮಾಡಿದ ಡ್ಯಾನ್ಸ್ ಬಗ್ಗೆ ಹೆಮ್ಮೆ ಇದೆ’ ಎಂದು ಕಿಶನ್ ಬಿಳಗಲಿ ಆರಂಭದಲ್ಲೇ ಹೇಳಿದ್ದರು.
ದರ್ಶನ್ ನಟನೆಯ ‘ದತ್ತ’ ಸಿನಿಮಾದ ‘ಬಾರೆ ಬಾರೆ ಬಾರೆ ನನ್ನ ಬಜಾರಿ’ ಹಾಡಿಗೆ ಕಿಶನ್ ಬಿಳಗಲಿ ಹಾಗೂ ತನಿಷಾ ನೃತ್ಯ ಮಾಡಿದ್ದು, ಒಂದು ಕಡೆ ಕಿಶನ್, ತನಿಷಾ ಕುಪ್ಪಂಡ ಎತ್ತಿಕೊಂಡು ಕುಣಿಯುವ ಸನ್ನಿವೇಶ ಇದೆ. ಇದನ್ನು ಕಾಮಿಡಿಯಾಗಿ ತೆಗೆದುಕೊಂಡ ಹಲವು ಮಂದಿ ತನಿಷಾ ಅವರ ದೇಹಕ್ಕೆ ಸಂಬಂಧಿಸಿ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಸದ್ಯ ತನಿಷಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.