ಅಮೃತಧಾರೆ ಸೀರಿಯಲ್ನಲ್ಲಿ ಮಿಂಚು, ಗೌತಮ್-ಭೂಮಿಕಾಳ ಮಗಳು ಎಂಬ ಸತ್ಯ ಬಯಲಾಗುವ ಹಂತದಲ್ಲಿದೆ. ಅಣ್ಣಯ್ಯ ಮತ್ತು ಕರ್ಣ ಸೀರಿಯಲ್ ಪಾತ್ರಗಳ ಆಗಮನದಿಂದ ಜೈದೇವನ ಕುತಂತ್ರಗಳು ಬಯಲಾಗಿ, ಧಾರಾವಾಹಿ ಅಂತ್ಯ ಕಾಣಲಿದೆಯೇ ಎಂಬ ಕುತೂಹಲ ಮೂಡಿದೆ.
ಅಮೃತಧಾರೆಯಲ್ಲಿ ರೋಚಕ ತಿರುವು ಕಾಣುತ್ತಿದೆ. ಮಿಂಚು ಗೌತಮ್ ಮತ್ತು ಭೂಮಿಕಾ ಪುತ್ರಿಯಾಗಿದ್ದರೂ ಅವರಿಗೆ ಈ ವಿಷಯ ಇನ್ನೂ ಗೊತ್ತಿಲ್ಲ. ಅದೇ ಇನ್ನೊಂದೆಡೆ ಜೈದೇವ್ ಮಿಂಚುವನ್ನು ಕಿಡ್ನ್ಯಾಪ್ ಮಾಡುವಲ್ಲಿ ವಿಫಲ ಆಗಿದ್ದಾನೆ.
26
ನಕಲಿ ಅಪ್ಪ-ಅಮ್ಮ
ಮಿಂಚುವಿನ ಅಪ್ಪ- ಅಮ್ಮ ಎಂದು ಹೇಳಿಕೊಂಡು ಜೈದೇವ್ ಕಳುಹಿಸಿರುವ ನಕಲಿ ಅಪ್ಪ-ಅಮ್ಮ ಬಂದಿದ್ದಾರೆ. ಅವರ ಡಿಎನ್ಎ ಟೆಸ್ಟ್ ಮಾಡಿದ್ರೆ ಅಲ್ಲಿಗೆ ಅದು ಕೂಡ ಬಯಲಾಗುತ್ತದೆ.
36
ಕರ್ಣನ ಎಂಟ್ರಿ
ಸದ್ಯ ಅಣ್ಣಯ್ಯ ಸೀರಿಯಲ್ ಪಾರುವಿಗೆ ಮಿಂಚುನೇ ಗೌತಮ್ ಮತ್ತು ಭೂಮಿಕಾ ಪುತ್ರಿ ಎನ್ನುವುದು ತಿಳಿದಿದೆ. ಮಗುವಿನ ಜನ್ಮದ ವೇಳೆ ಕೈಯಲ್ಲಿ ತ್ರಿಶೂಲ ಇರುವುದನ್ನು ಆಕೆ ನೋಡಿದ್ದಳು. ಇದೀಗ ಮಿಂಚುನೇ ಅವರ ಮಗಳು ಎನ್ನುವುದು ಆಕೆಯಿಂದ ತಿಳಿಯಬೇಕಿದೆ.
ಇದೇ ಹೊತ್ತಿನಲ್ಲಿ ಅಣ್ಣಯ್ಯ ಸೀರಿಯಲ್ ಶಿವು, ಪಾರು ಮತ್ತು ಕರ್ಣ ಸೀರಿಯಲ್ ಕರ್ಣ ಜನ್ಮ ರಹಸ್ಯ ಬಯಲು ಮಾಡಲು ಮತ್ತೆ ಒಗ್ಗಟ್ಟಾಗಿದ್ದಾರೆ.
56
ಮಕ್ಕಳು ಹುಟ್ಟೋ ಸಂದರ್ಭದಲ್ಲೂ ಇದ್ದರು
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಈ ಹಿಂದೆ ಭೂಮಿಕಾಗೆ ಅವಳಿ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ಕೂಡ ಈ ಮೂವರೂ ಅಂದು ಇದ್ದರು. ಆದ್ದರಿಂದ ಮತ್ತೆ ಅವರನ್ನು ಅಮೃತಧಾರೆ ಸೀರಿಯಲ್ನಲ್ಲಿ ಜನ್ಮ ರಹಸ್ಯಕ್ಕೆ ಕರೆತರಲಾಗಿದೆ.
66
ಮುಗಿಯುವ ಟೈಮ್ ಬಂತಾ?
ಹಾಗಿದ್ದರೆ ಅಮೃತಧಾರೆ ಸೀರಿಯಲ್ ಮುಗಿಯುವ ಟೈಮ್ ಬಂತಾ? ಮಿಂಚು ರಹಸ್ಯ ಬಯಲಾದರೆ, ಅತ್ತ ನಕಲಿ ಅಪ್ಪ-ಅಮ್ಮನನ್ನು ಕಳುಹಿಸಿರುವ ಜೈದೇವನ ಮುಖವಾಡವೂ ಬಯಲಾಗುತ್ತದೆ. ಅದೇ ದಿಯಾ ಕೊಲೆಗೆ ಆತ ಕಾರಣ ಎನ್ನುವುದೂ ತಿಳಿದರೆ ಅಲ್ಲಿಗೆ ಸೀರಿಯಲ್ ಮುಗಿದಂತೆ,
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.