ಸುಳ್ಳೆಂದು ಪ್ರೂವ್​ ಮಾಡಿ 5 ಲಕ್ಷ ಪಡೆಯಿರಿ: ಜನರಿಗೆ ಬಿಗ್​ ಆಫರ್​ ಕೊಟ್ಟ Bigg Boss ಡಾಗ್​ ಸತೀಶ್!

Published : Oct 28, 2025, 05:39 PM IST

"ಡಾಗ್ ಸತೀಶ್" ಎಂದೇ ಖ್ಯಾತರಾದ, ನೂರಾರು ಕೋಟಿ ಮೌಲ್ಯದ ನಾಯಿಗಳ ಮಾಲೀಕ ಸತೀಶ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸುದ್ದಿಯಲ್ಲಿದ್ದಾರೆ. ತಾವು ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರಿಗೆ ನಾಯಿಗಳನ್ನು ನೀಡಿದ್ದು ಸುಳ್ಳು ಎಂದು ಸಾಬೀತಾದರೆ 5 ಲಕ್ಷ  ನೀಡುವುದಾಗಿ  ಹೇಳಿದ್ದಾರೆ.

PREV
17
ನಾಯಿಗಳ ಒಡೆಯ

ನೂರಾರು ಕೋಟಿ ರೂಪಾಯಿಗಳ ನಾಯಿಗಳನ್ನು ಸಾಕುವ ಮೂಲಕ Dog Sathish ಎಂದೇ ಫೇಮಸ್ ಆಗಿರುವ ಸತೀಶ್​ ಅವರು ಈಗ ಬಿಗ್​ಬಾಸ್​ನಿಂದ ಖ್ಯಾತಿ ಗಳಿಸುತ್ತಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.

27
ವಿಶ್ವ ಪ್ರಸಿದ್ಧಿ

ಬಿಗ್​ಬಾಸ್​ ಅನ್ನು ವಿಶ್ವ ಪ್ರಸಿದ್ಧಿ ಮಾಡುವ ತಾಕತ್ತು ನನಗಿದೆ ಎಂದೂ, ನನ್ನ 100 ಕೋಟಿ ನಾಯಿಯ ಜೊತೆಗಿನ ಪ್ರೊಮೋ ರಿಲೀಸ್​ ಮಾಡದೇ ಬಿಗ್​ಬಾಸ್​ ನನಗೆ ವಂಚನೆ ಮಾಡಿದೆ ಎಂದೂ ನೋವು ತೋಡಿಕೊಂಡಿರುವ ಡಾಗ್​ ಸತೀಶ್​ ಅವರು ತಮ್ಮ ತಾಕತ್ತು ಏನೆಂದು ತೋರಿಸಲು ನವೆಂಬರ್​ 5ರ ಮುಹೂರ್ತ ಫಿಕ್ಸ್​ ಮಾಡಿದ್ದಾರೆ.

37
ಐದು ಲಕ್ಷ ಬಹುಮಾನ

ಇದರ ನಡುವೆಯೇ, ತಮ್ಮ ವಿರುದ್ಧ ಮಾತನಾಡಿರುವವರು ಅದನ್ನು ಪ್ರೂವ್​ ಮಾಡಿದರೆ 5 ಲಕ್ಷ ರೂಪಾಯಿ ನೀಡುವುದಾಗಿ ಓಪನ್​ ಚಾಲೆಂಜ್​ ಹಾಕಿದ್ದಾರೆ ಡಾಗ್​ ಸತೀಶ್​.

47
ತಾರೆಯರಿಗೆ ನಾಯಿ

ಅಷ್ಟಕ್ಕೂ ಅವರು ಹೇಳಿರುವುದು, ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​ ಸೇರಿದಂತೆ ವಿವಿಧ ರಾಜಕಾರಣಿಗಳಿಗೆ ನಾನು ವಿವಿಧ ತಳಿಗಳ ನಾಯಿಗಳನ್ನು ನೀಡಿದ್ದೇನೆ. ಆದರೆ ಇದನ್ನು ಸುಳ್ಳು ಎಂದು ಕೆಲವರು ಹೇಳುತ್ತಿದ್ದಾರೆ. ಅದು ಸುಳ್ಳು ಎಂದು ಯಾರೇ ಪ್ರೂವ್​ ಮಾಡಿದ್ರೂ ಕೂಡಲೇ ಅವರಿಗೆ ಐದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಡಾಗ್​ ಸತೀಶ್​ ಹೇಳಿದ್ದಾರೆ.

57
ನಂ.1 ಡಾಗ್ ಬ್ರೀಡರ್?

ಅಷ್ಟಕ್ಕೂ ಸತೀಶ್ ಅವರು "ಕ್ಯಾಡಬೊಮ್​ ಕೆನ್ನೆಲ್ಸ್‌" ಎಂಬ ಸಂಸ್ಥೆಯ ಮಾಲೀಕರಾಗಿದ್ದು, ವಿವಿಧ ರೀತಿಯ ನಾಯಿಗಳನ್ನು ಸಾಕುತ್ತಾರೆ. ಆಮೇಲೆ ಅವುಗಳನ್ನು ಮಾರಾಟ ಮಾಡುತ್ತಾರೆ. ಅವರು ವಿಶ್ವದ ನಂ. 1 ಡಾಗ್ ಬ್ರೀಡರ್ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ.

67
25 ಲಕ್ಷದ ಬಟ್ಟೆ

ಬಿಗ್​ಬಾಸ್ ಕನ್ನಡದ 12ನೇ ಸೀಸನ್​ನಲ್ಲಿ ಸ್ಪರ್ಧಿಯಾಗಲು ಅವಕಾಶ ಸಿಕ್ಕಾಗ ಪ್ರವೇಶಿಸಲು 25 ಲಕ್ಷ ರೂಪಾಯಿ ಬೆಲೆಯ ಬಟ್ಟೆಗಳನ್ನು ಖರೀದಿಸಿದ್ದರು ಎಂದು ಹೇಳಿಕೊಂಡಿದ್ದರು. ಒಂದು ದಿನಕ್ಕೆ 65 ಲಕ್ಷ ರೂಪಾಯಿ ಆದಾಯ ತಮಗೆ ನಾಯಿಗಳಿಂದಲೇ ಬರುತ್ತಿವೆ ಎನ್ನುತ್ತಾರೆ ಸತೀಶ್​.

77
ಪ್ರೂವ್​ ಮಾಡಲು ಸವಾಲು

ಇದೇ ಕಾರಣಕ್ಕೆ ಅವರು ಹಲವಾರು ಕ್ಷೇತ್ರಗಳ ಗಣ್ಯರಿಗೆ ನಾಯಿಗಳನ್ನು ನೀಡಿದ್ದಾರೆ. ಅವರಲ್ಲಿ ಸಿನಿಮಾ, ರಾಜಕೀಯ ವ್ಯಕ್ತಿಗಳು ಸೇರಿದ್ದಾರೆ. ಆದರೆ ಅವರಿಗೆ ನಾನು ಕೊಟ್ಟಿರೋದು ಸುಳ್ಳು ಎಂದು ಹೇಳುವವರಿಗಾಗಿ ಚಾಲೆಂಜ್​ ಹಾಕಿದ್ದಾರೆ.

ಸಂದರ್ಶನಕ್ಕಾಗಿ ಇಲ್ಲಿ ಕ್ಲಿಕ್​  ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories