ಬಿಗ್ ಬಾಸ್ 12 ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಸಂಬಂಧದ ಬಗ್ಗೆ ಧನುಷ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಗಿಲ್ಲಿಗೆ ಕಂಟೆಂಟ್ ಹಾಗೂ ಮೈಲೇಜ್‌ಗಾಗಿ ಅಶ್ವಿನಿ ಬೇಕು ಎಂದು ಕಾವ್ಯಾ ಬಳಿ ಹೇಳಿದ್ದು, ಇದು ಗಿಲ್ಲಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್ ಬಾಸ್ 12 (Bigg Boss 12) ಮನೆಯಲ್ಲಿ ಸಕತ್ ಸದ್ದು ಮಾಡುತ್ತಿರುವವರಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಇಬ್ಬರು. ಗಿಲ್ಲಿ ಜೋಕ್ ಮೂಲಕ ಹಾಗೂ ಅಶ್ವಿನಿ ಜಗಳದ ಮೂಲಕ ಸುದ್ದಿಯಲ್ಲಿದ್ದಾರೆ.
28
ಸಾಕಷ್ಟು ಕಾದಾಟ
ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ಇದಾಗಲೇ ಸಾಕಷ್ಟು ಬಾರಿ ಕಾದಾಟಗಳೂ ನಡೆದಿವೆ. ಜೋಕ್ ಮಾಡಲು ಹೋಗಿ ಗಿಲ್ಲಿ ನಟ ಅಶ್ವಿನಿ ಅವರ ಕೋಪಕ್ಕೂ ಕಾರಣವಾಗಿದ್ದಿದೆ. ತಮ್ಮ ಇಗೋ ಹರ್ಟ್ ಆಯಿತೆಂದು ಅಶ್ವಿನಿ ಗೌಡ ಉಪವಾಸ ಇದ್ದಾಗಲೂ ಸುಮ್ಮನಾಗದ ಗಿಲ್ಲಿ, ಅವರ ಬಳಿಯೇ ಹೋಗಿ ಜೋಕ್ ಮಾಡಿ ಅವರನ್ನು ಮತ್ತಷ್ಟು ಕೆರಳಿಸಿದ್ದೂ ನಡೆದಿದೆ.
38
ಗಿಲ್ಲಿ ಪರ ಫ್ಯಾನ್ಸ್
ಅದೇನೇ ಇದ್ದರೂ ಅಭಿಮಾನಿಗಳು ಮಾತ್ರ ಗಿಲ್ಲಿ ನಟ (Bigg Boss Gilli Nata) ಪರವಾಗಿಯೇ ಇದ್ದಾರೆ. ಅಶ್ವಿನಿ ಗೌಡ ಅವರು ಜಗಳದಿಂದಲೇ ಬಿಗ್ಬಾಸ್ ಟಿಆರ್ಪಿ ಏರಿಸುತ್ತಿದ್ದರೆ, ಗಿಲ್ಲಿ ನಟ ಹಾಸ್ಯದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ.
ಆದರೆ, ಇದೀಗ ಕಾವ್ಯಾ ಶೈವ (Bigg Boss Kavya Shaiva) ಜೊತೆ ಮಾತನಾಡುತ್ತಾ ಧನುಷ್ ಅವರು ಗಿಲ್ಲಿ ಮತ್ತು ಅಶ್ವಿನಿ ಗೌಡ ಜೋಡಿಯ ಬಗ್ಗೆ ಹೇಳಿರೋ ಮಾತು ಗಿಲ್ಲಿ ಅಭಿಮಾನಿಗಳನ್ನು ಕೆರಳಿಸಿದೆ.
58
ಧನುಷ್ ಹೇಳಿದ್ದೇನು?
ಅಷ್ಟಕ್ಕೂ ಹೇಳಿದ್ದು ಏನೆಂದರೆ, ಗಿಲ್ಲಿಗೆ ಕಡಿಯಲಿಕ್ಕೆ ಯಾರಾದ್ರೂ ಬೇಕು. ನನಗೆ ಕಂಟೆಂಟ್ ಸಿಗ್ತಿಲ್ಲ ಸಿಗ್ತಿಲ್ಲ, ಬೇಕು ಬೇಕು ಎನ್ನೋ ಗಿಲ್ಲಿ ಯಾರಾದರನ್ನಾದರೂ ಏಳಿಸೋಕೆ ಟ್ರೈ ಮಾಡ್ತಾನೆ ಎಂದಿದ್ದಾರೆ.
68
ಗಲ್ಲಿ ಪ್ರಾಬ್ಲೆಮ್ಮು
ಅಶ್ವಿನಿ ಗೌಡ ಸೈಲೆಂಟ್ ಇದ್ದರೆ ಗಿಲ್ಲಿಗೆ ಪ್ರಾಬ್ಲೆಮ್. ಅಶ್ವಿನಿ ಗೌಡ ಅವರ ಪ್ರಾಬ್ಲೆಮ್ ಏನೂ ಇಲ್ಲ. ಇದು ಅವನ ಪ್ರಾಬ್ಲೆಮ್. ಅದು ಎದ್ದು ಕಾಣಿಸ್ತಿದೆ ಎಂದಿದ್ದಾರೆ.
78
ಸುದೀಪ್ ಸರ್ ಸ್ಟೇಟ್ಮೆಂಟ್ ಚೇಂಜ್ ಮಾಡ್ಬೇಕು
ರಘು ಸರ್ಗೆ ಗಿಲ್ಲಿ ಇದ್ದರೆ ಮೈಲೇಜ್ ಎನ್ನೋ ಸ್ಟೇಟ್ಮೆಂಟ್ ಸುದೀಪ್ ಸರ್ ಚೇಂಜ್ ಮಾಡಬೇಕು. ಅಶ್ವಿನಿ ಮೇಡಂ ಇದ್ದರೆ ಗಿಲ್ಲಿಗೆ ಮೈಲೇಜು ಎನ್ನಬೇಕು ಎಂದಿದ್ದಾರೆ. ಕಾವ್ಯಾ ಶೈವ ಏನೂ ಹೇಳದೇ ಧನುಷ್ ಹೇಳಿದ್ದನ್ನೆಲ್ಲಾ ಕೇಳುತ್ತಾ ಕುಳಿತಿದ್ದಾರೆ.
88
ರೊಚ್ಚಿಗೆದ್ದ ಫ್ಯಾನ್ಸ್
ಇದರ ಪ್ರೊಮೋ ರಿಲೀಸ್ ಆಗುತ್ತಲೇ ಗಿಲ್ಲಿ ನಟನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಗಿಲ್ಲಿ ಅವರ ಗೆಲ್ಲುವುದು ಕನ್ಫರ್ಮ್. ಅವರಿಗೆ ಯಾರ ಮೈಲೇಜೂ ಬೇಡ. ಅವರು ಇದ್ದರೇನೇ ಬಿಗ್ಬಾಸ್ಗೂ ಮೈಲೇಜು, ನಿಮ್ಮೆಲ್ಲರಿಗೂ ಮೈಲೇಜು. ಸುಮ್ಮನೇ ಅವರ ವಿರುದ್ಧ ಮಾತನಾಡಬೇಡಿ ಎಂದು ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ.