ಕೋಟಿ ಕೋಟಿ ಆಸ್ತಿಗಾಗಿ ಕಾನೂನಿನ ತೊಡಕಿನಲ್ಲಿ ಸಿಲುಕಿರುವ ಜೈದೇವ್, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕಿಕೊಂಡು ಮಾಲ್‌ಗೆ ಬರುತ್ತಾನೆ. ಅಲ್ಲಿ ಮಕ್ಕಳೊಂದಿಗೆ ಇರುವ ಮಲ್ಲಿ, ಅಡಗಿಕೊಳ್ಳುತ್ತಾಳೆ. ಆದರೆ ಜೈದೇವ್, ಮಕ್ಕಳ ಬಳಿಯೇ ಮಲ್ಲಿಯ ಫೋಟೋ ತೋರಿಸಿ ವಿಚಾರಿಸುತ್ತಾನೆ.
ಕೋಟಿ ಕೋಟಿ ಆಸ್ತಿ ಬಿಟ್ಟುಬಂದರೂ ಕಾನೂನಿನ ತೊಡಕಿನಿಂದಾಗಿ ಜೈದೇವ್ ಮತ್ತು ಶಕುಂತಲಾಗೆ ಅದನ್ನು ಅನುಭವಿಸಲು ಆಗುತ್ತಿಲ್ಲ. ಇದಾಗಲೇ ಮಲ್ಲಿ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ್ರೆ ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕುತ್ತೇನೆ ಎಂದಿದ್ದರೂ ಕೆಡಿ ಜೈದೇವ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಲಿಲ್ಲ.
25
ಮಲ್ಲಿಯ ಹುಡುಕಿ ಜೈದೇವ
ಆದರೆ, ಹೇಗಾದರೂ ಮಾಡಿ ಮಲ್ಲಿಯನ್ನು ಹುಡುಕಿ, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಬೇಕು ಎಂದು ಪಣ ತೊಟ್ಟಿರೋ ಕುತಂತ್ರಿ ಜೈದೇವ್ ಮಲ್ಲಿಯ ಹುಡುಕಾಟದಲ್ಲಿ ಬಂದಿದ್ದಾನೆ.
35
ಮಾಲ್ನಲ್ಲಿ ಜೈದೇವ್
ಅದೇ ಇನ್ನೊಂದೆಡೆ ಮಲ್ಲಿ, ಆಕಾಶ್ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್‌ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಹೇಗಾದ್ರೂ ಮಾಡಿ ಈ ವಿಷಯವನ್ನು ಮಲ್ಲಿಗೆ ತಲುಪಿಸಲು ಶಕುನಿಮಾಮಾ ಪ್ಲ್ಯಾನ್ ಮಾಡ್ತಿದ್ದಾನೆ.
ಅಷ್ಟರಲ್ಲಿಯೇ ಮಲ್ಲಿ ಜೈದೇವ್ನನ್ನು ನೋಡಿ ಅಡಗಿಕೊಂಡಿದ್ದಾಳೆ. ಆದರೆ ಆ ಮಾಲ್ನಲ್ಲಿಯೇ ಮಲ್ಲಿಯನ್ನು ನೋಡಿರೋ ಜೈದೇವ್, ಆಕಾಶ್ ಮತ್ತು ಮಿಂಚು ಬಳಿ ಬಂದು ಮಲ್ಲಿಯ ಫೋಟೋ ತೋರಿಸಿ ಇವರನ್ನು ನೋಡಿದ್ರಾ ಎಂದು ಕೇಳಿದ್ದಾನೆ.
55
ಮುಂದೇನು?
ಅವರೇನಾದ್ರೂ ಬಾಯಿಬಿಟ್ಟರೆ ಜೈದೇವ್ ಮಕ್ಕಳನ್ನೇ ಕಿಡ್ನ್ಯಾಪ್ ಮಾಡುವ ಸಾಧ್ಯತೆ ಇದೆ. ಮಕ್ಕಳು ಜಾಣತನದಿಂದ ಉತ್ತರಿಸುತ್ತಾರೋ ಅಥವಾ ಸತ್ಯವನ್ನೇ ಹೇಳಿಬಿಡ್ತಾರೋ ಎನ್ನುವುದು ನೋಡಬೇಕಿದೆ.