ಕರ್ಣನ ತಮ್ಮ ಮತ್ತು ಅಪ್ಪ ಸೇರಿ ನಿಧಿ ಮತ್ತು ಕರ್ಣನನ್ನು ಸಿಕ್ಕಿಹಾಕಿಸಲು ಪ್ಲ್ಯಾನ್ ಮಾಡುತ್ತಾರೆ. ನೋಟ್ಸ್ ಸುಟ್ಟುಹೋದಾಗ ಸಮಾಧಾನ ಮಾಡಲು ಬಂದ ಕರ್ಣ, ತಿಳಿಯದೆ ನಿಧಿಯ ಕೋಣೆಯಲ್ಲೇ ಮಲಗಿಬಿಡುತ್ತಾನೆ. ಇದನ್ನೇ ಅಸ್ತ್ರವಾಗಿಸಿಕೊಂಡು ಮನೆಯವರೆಲ್ಲರ ಮುಂದೆ ಇಬ್ಬರನ್ನೂ ದೋಷಿಗಳನ್ನಾಗಿ ನಿಲ್ಲಿಸಲಾಗುತ್ತದೆ.
ಕರ್ಣ ಸೀರಿಯಲ್ನಲ್ಲಿ (Karna Serial) ಇನ್ನೂ ಕರ್ಣ ಮತ್ತು ನಿಧಿಯ ಲವ್ಸ್ಟೋರಿ ಬಗ್ಗೆ ಮನೆಮಂದಿಗೆ ರಿವೀಲ್ ಆಗಲಿಲ್ಲ. ಇದೇ ವೇಳೆ ಕರ್ಣನ ಅಪ್ಪ ಮತ್ತು ತಮ್ಮ ಸೇರಿ ಒಂದು ಪ್ಲ್ಯಾನ್ ಮಾಡಿ ಇಬ್ಬರನ್ನೂ ಸಿಲುಕಿಸುವ ಸ್ಕೆಚ್ ಹಾಕಿದ್ದಾರೆ.
26
ನಿಧಿ ನೋಟ್ಸ್ ಸುಟ್ಟುಹಾಕಿದ!
ಪರೀಕ್ಷೆಗೆ ರೆಡಿ ಮಾಡಿಟ್ಟುಕೊಂಡಿದ್ದ ನೋಟ್ಸ್ಗಳನ್ನು ಕರ್ಣನ ತಮ್ಮ ಸುಟ್ಟು ಹಾಕಿದ್ದಾನೆ. ಇದನ್ನು ಆರಿಸುವ ಭರದಲ್ಲಿ ನಿಧಿ ಕೈಸುಟ್ಟುಕೊಂಡಿದ್ದಾಳೆ.
36
ನಿಧಿಗೆ ಕರ್ಣನ ಸಮಾಧಾನ
ಆಗ ಅಲ್ಲಿಗೆ ಬಂದ ಕರ್ಣ, ನಿಧಿಯ ಕೈಗೆ ಮುಲಾಮು ಹಚ್ಚಿದ್ದಾನೆ. ನೋಟ್ಸ್ ಸುಟ್ಟಿರಬಹುದು, ತಲೆಯಲ್ಲಿ ಇರುವ ಜ್ಞಾನ ಸುಡಲಿಲ್ಲವಲ್ಲ ಎನ್ನುತ್ತಲೇ ನಿಧಿಗೆ ಸಮಾಧಾನ ಮಾಡಿ, ನೋಟ್ಸ್ ಇರೋ ಪೆನ್ಡ್ರೈವ್ ಕೊಟ್ಟಿದ್ದಾನೆ.
ಕರ್ಣನಿಗೆ ಅದಾಗಲೇ ನಿದ್ದೆ ಬಂದಿದ್ದ ಕಾರಣ, ಅರಿವಿಲ್ಲದೇ ನಿಧಿಯ ಬೆಡ್ ಮೇಲೆಯೇ ಮಲಗಿಬಿಟ್ಟಿದ್ದಾನೆ. ನಿಧಿ ಕೂಡ ಮಲಗಿದ್ದರಿಂದ ಅವಳಿಗೆ ಇದರ ಅರಿವು ಆಗಲೇ ಇಲ್ಲ.
56
ದೃಶ್ಯ ಕಂಡು ಎಲ್ಲರೂ ಶಾಕ್
ಇದೀಗ ತನ್ನ ಮುಂದಿನ ಪ್ಲ್ಯಾನ್ ರೂಪಿಸಿದ ರಮೇಶ್, ಎಲ್ಲರನ್ನೂ ಕರೆದುಕೊಂಡು ನಿಧಿಯ ರೂಮ್ಗೆ ಹೋಗಿದ್ದಾನೆ. ಇದೇನಿದು ನಿಧಿಯನ್ನು ಹುಡುಕಿ ಕರ್ಣ ಇಲ್ಲಿಯವರೆಗೆ ಬಂದಿದ್ದ. ಈಗ ನೋಡಿದ್ರೆ ಒಟ್ಟಿಗೇ ಮಲಗಿದ್ದಾರೆ ಎಂದು ಎಲ್ಲರ ಎದುರೇ ಹೇಳಿದ್ದಾನೆ.
66
ಗುಟ್ಟು ರಿವೀಲ್ ಆಗತ್ತಾ?
ಇದರಿಂದಾದರೂ ಗುಟ್ಟು ರಿವೀಲ್ ಆಗುತ್ತದಾ? ತಪ್ಪೇ ಮಾಡದ ನಿಧಿ-ಕರ್ಣ ಶಿಕ್ಷೆ ಅನುಭವಿಸ್ತಾರಾ ಅಥವಾ ಆರೋಪ ಮಾಡಿದವರ ವಿರುದ್ಧವೇ ನಿತ್ಯಾ ಸಿಡಿದು ಬೀಳ್ತಾಳಾ? ಇದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.