Bigg Boss ಮನೇಲಿ ಪುರುಷ ಸ್ಪರ್ಧಿ ಹೊಟ್ಟೆಗೆ ಒದ್ದು, ಚಪ್ಪಲಿಯಲ್ಲಿ ಹೊಡೆದ ಮಹಿಳೆ; ಎಂಥ ಜನನಪ್ಪಾ..!

Published : Nov 02, 2025, 04:22 PM IST

Bigg Boss Show: ಬಿಗ್‌ ಬಾಸ್‌ ಮನೆಯಲ್ಲಿ ಕೆಲವೊಮ್ಮೆ ಸಣ್ಣ ವಿಷಯಕ್ಕೂ ನಗುತ್ತಾರೆ, ಜಗಳ ಆಡುತ್ತಾರೆ. ಯಾವ ಸಂದರ್ಭ ಎನ್ನೋದು ಮ್ಯಾಟರ್‌ ಆಗುವುದು. ನನಹೆ ಹಾಗಂದ್ರು, ಹೀಗಂದ್ರು ಎಂದು ಜಗಳ ಆಡೋರು ಈಗ, ಚಪ್ಪಲಿಯಲ್ಲಿ ಹೊಡೆದರೂ ಕೂಡ ನಕ್ಕಿದ್ದಾರೆ. ಎಂಥ ದುರಂತ ನೋಡಿ…ತಮಾಷೆಗೆ ಲಿಮಿಟ್‌ ಇಲ್ಲವಾ? 

PREV
15
ಮಸಾಜ್‌ ಮಾಡೋಳು

ಬಿಗ್‌ ಬಾಸ್‌ 19 ಶೋನಲ್ಲಿ ತಾನ್ಯಾ ಮಿತ್ತಲ್‌ ಹಾಗೂ ಶೆಹಬಾಜ್‌ ಸ್ಪರ್ಧಿಗಳ ನಡುವೆ ಮಸಾಜ್‌ ವಿಷಯ ಬಂದಿದೆ. ತಾನ್ಯಾ ಮಿತ್ತಲ್‌ ನೈಟ್‌ ಡ್ರೆಸ್‌ ನೋಡಿ ಶೆಹಬಾಜ್‌ ಅವರು ಮಸಾಜ್‌ ಮಾಡೋಳು ಎಂದು ತಮಾಷೆ ಮಾಡಿದ್ದಾರೆ.

25
ಆ ಡ್ರೆಸ್‌ ನೋಡಿ ಹಾಗಂದ್ರು

ಬೆಡ್‌ ರೂಮ್‌ ಏರಿಯಾದಲ್ಲಿ ಎಲ್ಲರೂ ಇದ್ದರು. ಆಗ ತಾನ್ಯಾ ಮಿತ್ತಲ್‌ ಅವರು ತಿಂಡಿ ತಿನ್ನುತ್ತಿದ್ದರು. ಅವರ ಡ್ರೆಸ್‌ ನೋಡಿ ವಿದೇಶದಲ್ಲಿ ಮಸಾಜ್‌ ಮಾಡುವವರು ಎಂದು ಶೆಹಬಾಜ್‌ ಹೇಳಿದ್ದಾರೆ.

35
ಸಿಟ್ಟಾದ ತಾನ್ಯಾ ಮಿತ್ತಲ್‌

ಶೆಹಬಾಜ್‌ ಮಾತು ಕೇಳಿ ತಾನ್ಯಾ ಸಿಟ್ಟಾಗಿದ್ದಾರೆ. ಆ ವೇಳೆ ಶೆಹಬಾಜ್‌ ಅವರು ನೆಲದ ಮೇಲೆ ಮಲಗಿದ್ದರು. ಆಗ ತಾನ್ಯಾ ಅವರು ಶೆಹಬಾಜ್‌ ಕೈ ಹಾಗೂ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ, ಆಮೇಲೆ ಚಪ್ಪಲಿ ತಗೊಂಡು ಹೊಡೆದಿದ್ದಾರೆ.

45
ಸಣ್ಣ ವಿಷಯಕ್ಕೆ ಜಗಳ

ತಾನ್ಯಾ ಕಾಲಿನಿಂದ ಒದೆಯೋದು, ಚಪ್ಪಲಿಯಿಂದ ಹೊಡೆಯೋದು ನೋಡಿ ಉಳಿದವರು ನಕ್ಕಿದ್ದಾರೆ. ಹೊಡೆತ ತಿಂದ ಶೆಹಬಾಜ್‌ ಕೂಡ ನಕ್ಕಿದ್ದಾರೆ. ಇದು ವಿಪರ್ಯಾಸ ಎನಿಸುವುದು. ಸಣ್ಣ ಮಾತಿಗೋ ಅಥವಾ ಏಕವಚನದಲ್ಲಿ ಮಾತನಾಡಿದರು ಎಂದು ಜಗಳ ಆಗುವುದು. ಆದರೆ ಇಲ್ಲಿ ಎಲ್ಲವೂ ತಮಾಷೆಯಿಂದ ನಡೆದಿದೆ.

55
ಸುಳ್ಳು ಹೇಳುವ ತಾನ್ಯಾ ಮಿತ್ತಲ್‌

ತಾನ್ಯಾ ಮಿತ್ತಲ್‌ ಅವರು ಬಾಯಿ ತೆಗೆದರೆ ಸುಳ್ಳು ಹೇಳುತ್ತಾರೆ, ತಾನ್ಯಾ ಹೇಳೋದನ್ನು ಕೇಳಿದರೆ ಮುಕೇಶ್‌ ಅಂಬಾನಿ ಕುಟುಂಬಸ್ಥರು ಕೂಡ ಅವರ ಥರ ಜೀವನ ಮಾಡೋದಿಲ್ಲ, ಲಕ್ಷುರಿ ಇಲ್ಲ ಎಂದು ಕಾಣುತ್ತದೆ. ಹೀಗಾಗಿ ಶೆಹಬಾಜ್‌ ಅವರು ತಾನ್ಯಾರನ್ನು ಟ್ರೋಲ್‌ ಮಾಡಿದ್ದರು.

Read more Photos on
click me!

Recommended Stories