ರಕ್ತದಲ್ಲೇ ಪತ್ರ ಬರೆದ Bigg Boss ಕಾಕ್ರೋಚ್​ ಸುಧಿ! ಎಲಿಮಿನೇಷನ್​ ಬೆನ್ನಲ್ಲೇ ಇದೆಂಥ ಸುದ್ದಿ?

Published : Nov 17, 2025, 02:34 PM IST

ಬಿಗ್​ಬಾಸ್​ ಮನೆಯಿಂದ ಅಚ್ಚರಿಯಾಗಿ ಹೊರಬಂದಿರುವ ಸ್ಪರ್ಧಿ ಕಾಕ್ರೋಚ್ ಸುಧಿ, ಹಿಂದೆ ಜೈಲಿನಲ್ಲಿದ್ದಾಗ ತಮ್ಮ ಪತ್ನಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತುಟಿಗೆ ಹೊಡೆಸಿಕೊಂಡು ಬಂದ ರಕ್ತದಲ್ಲಿ ಪತ್ರ ಬರೆದಿದ್ದಾಗಿ   ಹೇಳಿಕೊಂಡಿದ್ದರು.

PREV
16
ವಿಲನ್​ ಸುಧಿ ಈಗ ಬಿಗ್​ಬಾಸ್​ ಸುಧಿ

ಕೆಲವು ಸಿನಿಮಾಗಳಲ್ಲಿ ವಿಲನ್​ ಪಾತ್ರದ ಮೂಲಕ ಫೇಮಸ್​ ಆದವರು ಕಾಕ್​ರೋಚ್​ ಸುಧಿ (Cockroach Sudhi). ಬಿಗ್​ಬಾಸ್​ ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿಕೊಂಡವರು. ಮಿನಿ ಫಿನಾಲೆ ಗೆದ್ದಿದ್ದ ಕಾಕ್ರೋಚ್‌ ಸುಧಿ ಸ್ಪೆಷಲ್‌ ಪವರ್‌ ಪಡೆದಿದ್ದರು. ಆದರೆ ಅಚ್ಚರಿಯೆನ್ನುವಂತೆ ನಿನ್ನೆ ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ.

26
ಎಲಿಮಿನೇಟ್​ ಆದ ಸುಧಿ

ಬಿಗ್​ಬಾಸ್​ನಲ್ಲಿ ನಾಲ್ಕು ಸ್ಪರ್ಧಿಗಳನ್ನು ಲಾಕ್‌ ಮಾಡಿದ್ದರು. ರಿಷಾ, ರಘು, ಜಾಹ್ನವಿ ಹಾಗೂ ಕಾಕ್ರೋಚ್‌ ಸುಧಿ ಅವರನ್ನು ನಾಮಿನೇಟ್‌ ಮಾಡಲಾಯಿತು. ಎಲ್ಲರೂ ತಮ್ಮ ಲಗೇಜ್‌ ಪ್ಯಾಕ್‌ ಮಾಡಿ ನಿಲ್ಲುವಂತೆ ಸುದೀಪ್‌ ಶಾಕ್‌ ಕೊಟ್ಟರು. ಅಂತಿಮವಾಗಿ ಕಾಕ್ರೋಚ್‌ ಸುಧಿ ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ.

36
ರಕ್ತದಲ್ಲಿ ಪತ್ರ

ಇದರ ಬೆನ್ನಲ್ಲೇ ಕಾಕ್ರೋಚ್​ ಸುಧಿ ಅವರು ರಕ್ತದಲ್ಲಿ ಪತ್ರ ಬರೆದಿರುವ ವಿಷಯವೊಂದು ಈಗ ವೈರಲ್​ ಆಗಿದೆ. ಅದು ಅವರು ಬಿಗ್​ಬಾಸ್​ ಮನೆಯಲ್ಲಿ ಇದ್ದಾಗಲೇ ಹೇಳಿಕೊಂಡಿರುವ ವಿಷಯ. ಯಾವುದೋ ಕಾರಣಕ್ಕೆ ಜೈಲು ಸೇರಿದ್ದರಂತೆ ಸುಧಿ. ಆ ಸಮಯದಲ್ಲಿ ನಡೆದ ಘಟನೆ ಇದು!

46
ಪತ್ನಿಗೆ ಪತ್ರ

ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ ಪತ್ನಿಗೆ ಪತ್ರ ಬರೆಯಬೇಕು ಎನ್ನಿಸಿತಂತೆ. ಆದರೆ ಪತ್ನಿಯನ್ನು ತಾವೆಷ್ಟು ಪ್ರೀತಿ ಮಾಡುತ್ತೇವೆ ಎಂದು ಸಾಬೀತು ಮಾಡಲು ಸಿನಿಮೀಯ ಸ್ಟೈಲ್​ ಅನ್ನು ಅವರು ಅಳವಡಿಸಿಕೊಂಡಿದ್ದಾರೆ.

56
ತುಟಿಗೆ ಹೊಡೆತ

ಜೈಲಿನಲ್ಲಿ ಇರೋ ಮತ್ತೊಬ್ಬ ಕೈದಿಗೆ ನನ್ನ ತುಟಿಗೆ ಒಂದು ಏಟು ಹೊಡೆಯಿರಿ ಎಂದರಂತೆ. ಆ ಕೈದಿ ಇದನ್ನು ಕೇಳಿ ಶಾಕ್​ ಆದರೂ ಇವರು ಹೇಳಿದಂತೆ ಮಾಡಿದ್ದಾರೆ. ಕೊನೆಗೆ ಆ ರಕ್ತದಿಂದ ಸುಧಿ ಪತ್ನಿಗೆ ಪತ್ರ ಬರೆದಿದ್ದಾರೆ! ಅಲ್ಲಿ ನಿನ್ನ ಪ್ರೀತಿಯ ಸುಧಿ ಎಂದು ಬರೆದಿದ್ದ ಬಗ್ಗೆ ನೆನಪಿಸಿಕೊಂಡಿದ್ದಾರೆ.

66
ಬಿಗ್​ಬಾಸ್​​ನಲ್ಲಿ ಬಂದಿದ್ದ ಪತ್ರ

ಈ ಘಟನೆಯನ್ನು ಸುಧಿ ನೆನಪು ಮಾಡಿಕೊಂಡಿರೋದಕ್ಕೆ ಕಾರಣನೂ ಇದೆ. ಅದೇನೆಂದರೆ, ಸುಧಿ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಅದರಲ್ಲಿ ನಿನ್ನ ಪ್ರೀತಿಯ ಸುಧಿ ಅನ್ನೋದೇ ಇತ್ತು. ಆಗ ಈ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.

Read more Photos on
click me!

Recommended Stories