ಅರ್ಧ ಸೆಂಚುರಿ ಮುಗಿಸಿದ Bigg Boss Kannada 12: ಗೆಲ್ಲೋರು ಯಾರು? ಮರಳಿ ಬರೋರು ಯಾರು? ವ್ಯಕ್ತಿತ್ವದ ಅಸಲಿ ಅಟ!

Published : Nov 17, 2025, 01:51 PM IST

ಬಿಗ್​ಬಾಸ್​ 12ನೇ ಸೀಸನ್ 50 ದಿನಗಳನ್ನು ಪೂರೈಸಿದ್ದು, ಕಾಕ್ರೋಚ್ ಸುಧಿ ಸೇರಿದಂತೆ ಒಟ್ಟು 8 ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಅವರ ಲವ್ ಸ್ಟೋರಿ, ಅಶ್ವಿನಿ ಮತ್ತು ಜಾಹ್ನವಿ ಅವರ ವಿವಾದಗಳು ವೀಕ್ಷಕರ ಗಮನ ಸೆಳೆಯುತ್ತಿದೆ.  

PREV
18
50ರ ಸಂಭ್ರಮ

ಬಿಗ್​ಬಾಸ್​ 12ಕ್ಕೆ ಈಗ 50ರ ಸಂಭ್ರಮ. ಸಾಮಾನ್ಯವಾಗಿ 100 ದಿನಗಳ ಆಟ ಇದಾಗಿದೆ. ಆದರೆ ಈ ಹಿಂದೆ ನೂರರ ಗಡಿ ದಾಟಿ ಹೋಗಿರುವ ಸಾಕಷ್ಟು ಉದಾಹರಣೆಗಳೂ ಇವೆ. ಕಳೆದ ಸೀಸನ್​ ಅಂದರೆ 11ನೇ ಸೀಸನ್​ 119 ದಿನಗಳು ನಡೆದಿದ್ದವು. ಈ ಸೀಸನ್​ ಎಷ್ಟು ದಿನ ಇರಲಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಅದೇನೇ ಆದರೂ ಸದ್ಯ ಬಿಗ್​ಬಾಸ್​​ ಅರ್ಧ ಸೆಂಚುರಿ ಮುಗಿಸಿದೆ.

28
ಎಂಟು ಮಂದಿ ಹೊರಕ್ಕೆ

ಈ ಬಾರಿಯ ಬಿಗ್​ಬಾಸ್​ನಲ್ಲಿ 19 ಮಂದಿ ಸ್ಪರ್ಧಿಗಳು ಮನೆಯೊಳಕ್ಕೆ ಹೋಗಿದ್ದರು. ಒಟ್ಟು 8 ಮಂದಿ ಸದ್ಯ ಹೊರಕ್ಕೆ ಬಂದಿದ್ದಾರೆ. ಆರಂಭದಲ್ಲಿ ಆರ್​ಜೆ ಅಮಿತ್​ ಮತ್ತು ಅಶ್ವಿನಿ ಎನ್​.ಎಸ್​ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರು. ಬಳಿಕ ಮೂರನೆಯ ವಾರದಲ್ಲಿ ಮೂವರು ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟರು.

38
ಕಾಕ್ರೋಚ್​ ಸುಧಿ ಔಟ್​

ಬಳಿಕ ಬಾಡಿ ಬಿಲ್ಡರ್​ ಕರಿಬಸಪ್ಪ, ಡಾಗ್​ ಸತೀಶ್, ಚಂದ್ರಪ್ರಭ​ ಹೊರಕ್ಕೆ ಬಂದರು. ಇದಾಗಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲ್ಲಮ್ಮ ಹೊರಕ್ಕೆ ಬಂದು ಶಾಕ್​ ಕೊಟ್ಟವರಲ್ಲಿ ಮೊದಲಿಗರಾಗಿದ್ದಾರೆ. ಇದಾದ ಬಳಿಕ ನಿನ್ನೆಯಷ್ಟೇ, ರಘು, ರಿಷಾ ಗೌಡ, ಜಾಹ್ನವಿ ಮತ್ತು ಕಾಕ್ರೋಚ್‌ ಸುಧಿ ನಡುವೆ ಯಾರು ಔಟ್‌ ಆಗ್ತಾರೆ ಅನ್ನೋ ಕುತೂಹಲಕ್ಕೂ ತೆರೆ ಬಿದ್ದಿದೆ. 49 ದಿನಗಳ ನಂತರ ಕಾಕ್ರೋಚ್‌ ಸುಧಿ ಮನೆಯಿಂದ ಹೊರಕ್ಕೆ ಬಂದಿದ್ದಾರೆ.

48
ವೀಕ್ಷಕರ ಒಲವು

ಸದ್ಯ ಇರುವ ಸ್ಪರ್ಧಿಗಳ ಪೈಕಿ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಶೈವ ಅವರ ಪರವಾಗಿ ವೀಕ್ಷಕರ ಒಲವು ಹೆಚ್ಚಿದೆ. ಅದರಲ್ಲಿಯೂ ಗಿಲ್ಲಿ ನಟನೇ ಗೆಲ್ಲುತ್ತಾರೆ ಎನ್ನುವುದು ಹೊರಕ್ಕೆ ಬಂದಿರುವ ಹಲವು ಸ್ಪರ್ಧಿಗಳ ಅಭಿಮತ ಕೂಡ.

58
ಟಿಆರ್​ಪಿ ಏರಿಕೆ

ಇದೇ ವೇಳೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ವಿವಾದಗಳಿಂದಲೇ ಬಿಗ್​ಬಾಸ್​ ಟಿಆರ್​ಪಿ ಏರಿಸುತ್ತಿದ್ದಾರೆ. ಇವರನ್ನು ಬೇಗ ಹೊರಕ್ಕೆ ಹಾಕಿ ಎನ್ನುತ್ತಲೇ ಇವರ ಆಟವನ್ನು ತುಂಬಾ ಎಂಜಾಯ್​ ಮಾಡುವ ದೊಡ್ಡ ವೀಕ್ಷಕ ವೃಂದವೇ ಇದೆ.

68
ಲವ್​ಸ್ಟೋರಿ

ಅದೇ ರೀತಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ತಮಾಷೆಯ ಲವ್​ಸ್ಟೋರಿ ಜೊತೆಗೆ ಸೂರಜ್​ ಮತ್ತು ರಾಷಿಕಾ ಅವರ ಸ್ವಲ್ಪ ಸೀರಿಯಲ್​ ಲವ್​ಸ್ಟೋರಿಗಳೂ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದೆ.

78
ಕಿಚ್ಚನ ಪಂಚಾಯಿತಿ

ಇದರ ಜೊತೆಗೆ, ಸುದೀಪ್​ ಅವರು ಎಂದಿನಂತೆ ಬಿಗ್​ಬಾಸ್​​ ವೀಕೆಂಡ್​ನಲ್ಲಿ ಕಾಣಿಸಿಕೊಂಡು, ತಮ್ಮದೇ ಆದ ಮಾತಿನ ಶೈಲಿಯಲ್ಲಿ ಎಲ್ಲರ ಕ್ಲಾಸ್​​ ತೆಗೆದುಕೊಳ್ಳುತ್ತಾರೆ,, ಒಂದಿಷ್ಟು ಜೋಕ್ಸ್​ ಮಾಡುತ್ತಾರೆ, ತಪ್ಪಿದ್ದವರನ್ನು ತಿದ್ದುತ್ತಾರೆ, ಕೆಲವರ ವಿರುದ್ಧ ಗರಂ ಆಗುತ್ತಾರೆ, ಕೆಲವರ ಬಗ್ಗೆ ಕೃಪೆ ತೋರುತ್ತಾರೆ... ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಕಿಚ್ಚನ ಪಂಚಾಯಿತಿ ನಡೆಸುತ್ತಿದ್ದಾರೆ.

88
ಮುಂದೇನು?

ಇದೀಗ ಇದರ ವಿಶೇಷ ಪ್ರೊಮೋ ಹಂಚಿಕೊಳ್ಳಲಾಗಿದೆ. ಮುಂದೇನು ಎನ್ನುವ ಬಗ್ಗೆ ವೀಕ್ಷಕರು ತಲೆ ಕೆಡಿಸಿಕೊಳ್ತಿದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಸೋಷಿಯಲ್​ ಮೀಡಿಯಾದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ತಮ್ಮ ಪರವಾಗಿ ಇರುವವರಿಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡರೆ ಸಿಟ್ಟಾಗುತ್ತಿದ್ದಾರೆ. ಒಟ್ಟಿನಲ್ಲಿ ವೀಕ್ಷಕರಿಗೆ ತಾವು ಯಾರ ಪರವಾಗಿ ಇದ್ದೇವೋ, ಅವರೇ ಗೆಲ್ಲಬೇಕು ಎನ್ನುವುದು.

Read more Photos on
click me!

Recommended Stories